ಟೀಂ ಇಂಡಿಯಾವನ್ನು ಮಣಿಸುವವರು ವಿಶ್ವ ಚಾಂಪಿಯನ್! ಮೈಕಲ್ ವಾನ್ ಭವಿಷ್ಯ ನಿಜವಾಗುತ್ತಾ?

ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಭಾರತವನ್ನು ಸೋಲಿಸುವವರು ವಿಶ್ವಕಪ್ ಚಾಂಪಿಯನ್ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದು ಅದು ನಿಜವಾಗುತ್ತಾ ಎಂದು ಮಾತುಗಳು ಕ್ರಿಕೆಟ್ ವಲಯದಲ್ಲಿ...
ಕೊಹ್ಲಿ-ಕಿವೀಸ್-ಇಂಗ್ಲೆಂಡ್-ಮೈಕಲ್
ಕೊಹ್ಲಿ-ಕಿವೀಸ್-ಇಂಗ್ಲೆಂಡ್-ಮೈಕಲ್
Updated on: 
ಮ್ಯಾಚೆಂಸ್ಟರ್: 2019ರ ವಿಶ್ವಕಪ್ ಗೆಲ್ಲುವ ಫೆವರೇಟ್ ತಂಡ ಎಂದು ಹೇಳಲಾಗುತ್ತಿದ್ದ ಟೀಂ ಇಂಡಿಯಾ ನ್ಯೂಜಿಲ್ಯಾಂಡ್ ವಿರುದ್ಧ ರೋಚಕ ಸೋಲು ಕಂಡು ಟೂರ್ನಿಯಿಂದ ಹೊರಬಂದಿದೆ. ಇನ್ನು ಈ ಹಿಂದೆ ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಭಾರತವನ್ನು ಸೋಲಿಸುವವರು ವಿಶ್ವಕಪ್ ಚಾಂಪಿಯನ್ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದು ಅದು ನಿಜವಾಗುತ್ತಾ ಎಂದು ಮಾತುಗಳು ಕ್ರಿಕೆಟ್ ವಲಯದಲ್ಲಿ ಚರ್ಚೆಯಾಗುತ್ತಿದೆ.
ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಭಾರತ ವಿರುದ್ಧ 18 ರನ್ ಗಳಿಂದ ರೋಚಕ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದೆ. ಇನ್ನು ಆಸ್ಟ್ರೇಲಿಯಾವನ್ನು ಮಣಿಸಿರುವ ಇಂಗ್ಲೆಂಡ್ ಸಹ ಫೈನಲ್ ಪ್ರವೇಶಿಸಿದ್ದು ಜುಲೈ 14ರಂದು ಲಾರ್ಡ್ಸ್ ನಲ್ಲಿ ಅಂತಿಮ ಹಣಾಹಣಿ ನಡೆಯಲಿದೆ. 
ಇನ್ನು ಟೂರ್ನಿ ಆರಂಭಕ್ಕೂ ಮುನ್ನ ಮೈಕಲ್ ವಾನ್ ಯಾವ ತಂಡ ಟೀಂ ಇಂಡಿಯಾವನ್ನು ಮಣಿಸುತ್ತದೆಯೋ ಆ ತಂಡ ವಿಶ್ವಕಪ್ ಟ್ರೋಫಿ ಎತ್ತ ಹಿಡಿಯಲಿದೆ ಎಂಬ ಭವಿಷ್ಯ ನುಡಿದಿದ್ದರು. ಲೀಗ್ ಹಂತದಲ್ಲಿ ಇಂಗ್ಲೆಂಡ್ ತಂಡ ಭಾರತವನ್ನು ಸೋಲಿಸಿತ್ತು. ಇದೀಗ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಭಾರತವನ್ನು ಸೋಲಿಸಿದೆ. ಹೀಗಾಗಿ ಭಾರತವನ್ನು ಸೋಲಿಸಿರುವ ತಂಡವೇ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಲಿದೆ ಎಂಬುದು ಗಮನಾರ್ಹವಾಗಿದೆ. 
ಈ ಬಾರಿ ಭಾರತವನ್ನು ಮಣಿಸಿದ ನ್ಯೂಜಿಲೆಂಡ್ ಮತ್ತು ಪ್ರಬಲ ಆಸ್ಟ್ರೇಲಿಯಾವನ್ನು ಮಣಿಸಿದ ಇಂಗ್ಲೆಂಡ್ ತಂಡ ವಿಶ್ಪಕಪ್ ಫೈನಲ್ ಪ್ರವೇಶ ಮಾಡಿದ್ದು, ಈ ಎರಡೂ ತಂಡಗಳಲ್ಲಿ ಯಾವುದೇ ತಂಡ ಫೈನಲ್ ನಲ್ಲಿ ಜಯ ಗಳಿಸಿದರೂ, ನೂತನ ಇತಿಹಾಸ ನಿರ್ಮಾಣವಾಗಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com