ಪಾಕ್ ಕ್ರಿಕೆಟಿಗ ಇಮಾಮ್ ಬಳಿಕ ಈಗ ಮತ್ತೊಬ್ಬ ಯುವ ಕ್ರಿಕೆಟಿಗನ ಕರ್ಮಕಾಂಡ ಬಯಲು!

ಪಾಕಿಸ್ತಾನದ ಉದಯೋನ್ಮುಖ ಕ್ರಿಕೆಟಿಗ ಇಮಾಮ್ ಉಲ್ ಹಕ್ ಹಲವು ಯುವತಿಯರೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಟ್ವಿಟರ್ ಖಾತೆದಾರನೊಬ್ಬ ಆರೋಪಿಸಿದ್ದು ಇದರ ಬೆನ್ನಲ್ಲೇ ಇದೀಗ ಮತ್ತೊಬ್ಬ...
ಶಾಹಿನ್ ಶಾ ಆಫ್ರಿದಿ
ಶಾಹಿನ್ ಶಾ ಆಫ್ರಿದಿ
Updated on
ಇಸ್ಲಾಮಾಬಾದ್: ಪಾಕಿಸ್ತಾನದ ಉದಯೋನ್ಮುಖ ಕ್ರಿಕೆಟಿಗ ಇಮಾಮ್ ಉಲ್ ಹಕ್ ಹಲವು ಯುವತಿಯರೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಟ್ವಿಟರ್ ಖಾತೆದಾರನೊಬ್ಬ ಆರೋಪಿಸಿದ್ದು ಇದರ ಬೆನ್ನಲ್ಲೇ ಇದೀಗ ಮತ್ತೊಬ್ಬ ಯುವ ವೇಗಿ ಕರ್ಮಕಾಂಡ ಬಹಿರಂಗಕೊಂಡಿದೆ. 
ಪಾಕ್ ತಂಡದ ಯುವ ವೇಗಿ ಶಾಹಿನ್ ಆಫ್ರಿದಿ ಮೇಲೆ ಫೆರಿಹಾ ಎಂಬವರು ಟ್ವೀಟರ್ ನಲ್ಲಿ ಕಿಡಿಕಾರಿದ್ದಾರೆ. ಹುಡುಗಿಯರ ಜೊತೆ ಫ್ಲರ್ಟ್ ಮಾಡುವ ವಿಚಾರದಲ್ಲಿ ಶಾಹಿನ್ ಒಂದು ರೀತಿಯ ಸಮುದ್ರದ ತಿಮಿಂಗಿಲವಿದ್ದಂತೆ ಎಂದು ಹೇಳಿದ್ದಾರೆ. 
ಹೆಣ್ಣು ಮಕ್ಕಳ ಜೊತೆ ಶಾಹಿನ್ ಅಸಭ್ಯವಾಗಿ ವರ್ತಿಸುತ್ತಾನೆ. ತಾವು ಗಳಿಸಿದ ಹಣವನ್ನು ಹೆಣ್ಣು ಮಕ್ಕಳಿಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಾನೆ. ಈತ ಮಾಡಿದ ಮತ್ತಷ್ಟು ಘನ ಕಾರ್ಯವನ್ನು ಸದ್ಯದಲ್ಲೇ ತಿಳಿಸುತ್ತೇನೆ ಎಂದು ಹೇಳಿದ್ದಾರೆ. 
ಅಲ್ಲದೆ ಶಾಹಿನ್ ಖಾಸಗಿ ವಿಡಿಯೋ ಕಾಲ್ ನ ಸ್ಕ್ರೀನ್ ಶಾಟ್ ಒಂದನ್ನು ಹಂಚಿಕೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com