ಕ್ರಿಕೆಟ್ ಸಲಹಾ ಸಮಿತಿಗೆ ಕಪಿಲ್ ದೇವ್; ಆಗಸ್ಟ್‌ನಲ್ಲಿ ಕೋಚ್ ಆಯ್ಕೆ, ರವಿಶಾಸ್ತ್ರಿ ಮೇಲೆ ತೂಗುಗತ್ತಿ!

ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಹಾಗೂ ಮಾಜಿ ಕೋಚ್ ಕಪಿಲ್ ದೇವ್ ಅವರ ಮುಂದಾಳತ್ವದ ಕ್ರಿಕೆಟ್ ಸಲಹಾ ಸಮಿತಿ ಮುಂದಿನ ಕೋಚ್ ಆಯ್ಕೆ ಮಾಡಲಿದೆ.
ಕಪಿಲ್ ದೇವ್
ಕಪಿಲ್ ದೇವ್
ನವದೆಹಲಿ: ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಹಾಗೂ ಮಾಜಿ ಕೋಚ್ ಕಪಿಲ್ ದೇವ್ ಅವರ ಮುಂದಾಳತ್ವದ ಕ್ರಿಕೆಟ್ ಸಲಹಾ ಸಮಿತಿ ಮುಂದಿನ ಕೋಚ್ ಆಯ್ಕೆ ಮಾಡಲಿದೆ.
ಈ ಸಮಿತಿಯಲ್ಲಿ ಕಪಿಲ್ ದೇವ್ ಅವರನ್ನು ಹೊರತು ಪಡಿಸಿ, ಶಾಂತಾ ರಂಗಸ್ವಾಮಿ ಹಾಗೂ ಅಂಶುಮನ್ ಗಾಯಕ್ವಾಡ್ ಇದ್ದಾರೆ. ಈ ಸಮಿತಿ ಆಗಸ್ಟ್ ಮಧ್ಯದಲ್ಲಿ ಟೀಮ್ ಇಂಡಿಯಾದ ತರಬೇತುದಾರರ ಆಯ್ಕೆ ನಡೆಸಲಿದೆ. ಈ ಬಗ್ಗೆ ಶುಕ್ರವಾರ ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನು ಕಪಿಲ್ ದೇವ್ ಸಲಹಾ ಸಮಿತಿಯಲ್ಲಿರುವುದರಿಂದ ಕೋಚ್ ಆಗಿರುವ ರವಿಶಾಸ್ತ್ರಿಯನ್ನು ಮುಂದುವರೆಸುತ್ತಾರಾ ಎಂದು ಕಾದು ನೋಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com