ಯುವತಿಯರ ಜೊತೆ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಪೋಸ್, ನೆಟಿಗರಿಂದ ಟ್ರೋಲ್!

ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಇನ್ನೂ ಒಂದು ಪಂದ್ಯವನ್ನಾಡಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧ ನಾಳೆ ಮೊದಲ ಪಂದ್ಯ ನಡೆಯಲಿದೆ. ಆದರೆ, ಅದಕ್ಕೂ ಮುಂಚಿತವಾಗಿ ಟೀಂ ಇಂಡಿಯಾ ತರಬೇತುದಾರ ರಸಿಕತೆ ವಿಷಯದಿಂದಾಗಿ ಟ್ರೋಲ್ ಗೆ ತುತ್ತಾಗಿದ್ದಾರೆ.
ಯುವತಿಯರೊಂದಿಗೆ ರವಿಶಾಸ್ತ್ರಿ
ಯುವತಿಯರೊಂದಿಗೆ ರವಿಶಾಸ್ತ್ರಿ
Updated on
ನವದೆಹಲಿ: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಇನ್ನೂ ಒಂದು ಪಂದ್ಯವನ್ನಾಡಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧ ನಾಳೆ ಮೊದಲ ಪಂದ್ಯ ನಡೆಯಲಿದೆ. ಆದರೆ, ಅದಕ್ಕೂ ಮುಂಚಿತವಾಗಿ ಟೀಂ ಇಂಡಿಯಾ  ತರಬೇತುದಾರ ರವಿಶಾಸ್ತ್ರೀ ತನ್ನ ರಸಿಕತೆ  ವಿಷಯದಿಂದಾಗಿ ಟ್ರೋಲ್ ಗೆ ತುತ್ತಾಗಿದ್ದಾರೆ.
ರವಿಶಾಸ್ತ್ರೀ ಇಬ್ಬರು ಯುವತಿಯರ ಜೊತೆಗಿರುವ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದೆ. ಪಾಕಿಸ್ತಾನ ಕ್ರಿಕೆಟ್ ತಂಡದ ಸ್ವಯಂ ಘೋಷಿತ ಅಭಿಮಾನಿ ಆಸ್ಟ್ರೇಲಿಯಾದ ಪ್ರಸಿದ್ಧ ಟ್ವಿಟಿಗ ಡೆನ್ನಿಸ್  ಫ್ರೀಡ್ಮನ್ ಈ ಪೋಟೋವನ್ನು ಟ್ವೀಟರ್ ನಲ್ಲಿ ಶೇರ್ ಮಾಡುವ ಮೂಲಕ ಟ್ರೋಲ್ ಮಾಡಿದ್ದಾರೆ.
ಈ ಪೋಟೋದಲ್ಲಿ ಇನ್ನೊಬ್ಬರಿದ್ದಾರೆ. ಆದರೆ, ಅವರಿಗೂ ಟೀಂ ಇಂಡಿಯಾಗೂ ಯಾವುದೇ ಸಂಬಂಧ ಇದ್ದಂತೆ ಕಂಡುಬರುತ್ತಿಲ್ಲ. ವಿಶ್ವಕಪ್ ಕ್ರಿಕೆಟ್ ಗಾಗಿ ಟೀಂ ಇಂಡಿಯಾ ಸಿದ್ಧತೆ ಭರ್ಜರಿಯಾಗಿ ನಡೆಯುತ್ತಿದೆ ಎಂದು ಹ್ಯಾಷ್ ಟಾಗ್ ಮೂಲಕ  ಫ್ರೀಡ್ಮನ್ ಟ್ವೀಟರ್ ನಲ್ಲಿ ಕಾಲೆಳೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com