ಇಂಗ್ಲೆಂಡ್ ವಿರುದ್ಧ ಪಾಕ್ ಗೆಲುವಿಗೆ ಸಾನಿಯಾ ಮಿರ್ಜಾ ಜೈ ಹೋ; ಕಚ್ಚಾಡಿಕೊಂಡ ಪಾಕ್-ಭಾರತ ಅಭಿಮಾನಿಗಳು!
ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದ ಪಾಕಿಸ್ತಾನ ತಂಡವನ್ನು ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹೊಗಳಿದ್ದು ಇದಕ್ಕೆ ಆಕ್ರೋಶಗೊಂಡಿರುವ ಅಭಿಮಾನಿಗಳು...
ನವದೆಹಲಿ: ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದ ಪಾಕಿಸ್ತಾನ ತಂಡವನ್ನು ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹೊಗಳಿದ್ದು ಇದಕ್ಕೆ ಆಕ್ರೋಶಗೊಂಡಿರುವ ಅಭಿಮಾನಿಗಳು ಸಾನಿಯಾರನ್ನು ಟ್ರೋಲ್ ಮಾಡಿದ್ದಾರೆ.
ಸಾನಿಯಾ ಮಿರ್ಜಾ ತನ್ನ ಟ್ವೀಟ್ ನಲ್ಲಿ ಗೆಲುವಿನ ಲಯಕ್ಕೆ ಮರಳಿರುವ ಪಾಕಿಸ್ತಾನ ತಂಡಕ್ಕೆ ಅಭಿನಂದನೆಗಳು. ಎಂದಿನಂತೆ ಊಹಿಸಲಾಗದ ರೀತಿ ರೋಚಕ ಗೆಲುವು ಸಾಧಿಸಿದ್ದೀರಿ. ಈ ಮೂಲಕ ವಿಶ್ವಕಪ್ ಮತ್ತಷ್ಟು ಆಸಕ್ತಿಯನ್ನು ಗಳಿಸಿದೆ ಎಂದು ಬರೆದುಕೊಂಡಿದ್ದರು.
ಪಾಕ್ ಆಟಗಾರ ಶೋಯೆಬ್ ಮಲ್ಲಿಕ್ ರನ್ನು ವಿವಾಹವಾಗಿರುವ ಸಾನಿಯಾ ಮಿರ್ಜಾ ಪಾಕ್ ಸೊಸೆಯಾಗಿದ್ದು ಇದರಿಂದಾಗಿಯೇ ಪಾಕ್ ತಂಡದ ದಿಗ್ವಿಜಯವನ್ನು ಸಾನಿಯಾ ಹೊಗಳಿದ್ದರು. ಇದಕ್ಕೆ ಟೀಂ ಇಂಡಿಯಾ ಅಭಿಮಾನಿಗಳು ಸಾನಿಯಾರ ಕಾಲೆಳೆದಿದ್ದಾರೆ.
ಟೀಂ ಇಂಡಿಯಾ ವಿರುದ್ಧ ಪಾಕ್ ತಂಡದ ಪಂದ್ಯ ಇನ್ನು ಬಾಕಿ ಇದೆ. ಮುಂದೆ ಇದೆ ಮಾರಿಹಬ್ಬ ಎಂದೆಲ್ಲಾ ಟ್ವೀಟ್ ಮಾಡುತ್ತಿದ್ದಾರೆ.
Congratulations to Team Pakistan on bouncing back the way they did and being as unpredictable like it always is !!! @cricketworldcup got more interesting than it already was