ಮೊದಲು ಅಂಪೈರ್ ಗಳ ಗುಣಮಟ್ಟದತ್ತ ಗಮನ ಕೊಡಿ, ಧೋನಿ ಗ್ಲೌಸ್ ಬಗ್ಗೆ ಅಲ್ಲ: ಐಸಿಸಿಗೆ ಅಭಿಮಾನಿಗಳ ತಪರಾಕಿ

ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಸೇನಾ ಬಲಿದಾನದ ಚಿಹ್ನೆ ಇರುವ ಗ್ಲೌಸ್ ಧರಿಸಿದ್ದ ಎಂಎಸ್ ಧೋನಿ ಪರವಾಗಿ ಟ್ವಿಟರ್ ನಲ್ಲಿ #DhoniKeepTheGlove ಅಭಿಯಾನ ಪ್ರಾರಂಭವಾಗಿದೆ.
ಮೊದಲು ಅಂಪೈರ್ ಗಳ ಗುಣಮಟ್ಟದತ್ತ ಗಮನ ಕೊಡಿ, ಧೋನಿ ಗ್ಲೌಸ್ ಬಗ್ಗೆ ಅಲ್ಲ: ಐಸಿಸಿಗೆ ಅಭಿಮಾನಿಗಳ ತಪರಾಕಿ
ಮೊದಲು ಅಂಪೈರ್ ಗಳ ಗುಣಮಟ್ಟದತ್ತ ಗಮನ ಕೊಡಿ, ಧೋನಿ ಗ್ಲೌಸ್ ಬಗ್ಗೆ ಅಲ್ಲ: ಐಸಿಸಿಗೆ ಅಭಿಮಾನಿಗಳ ತಪರಾಕಿ
Updated on
ನವದೆಹಲಿ: ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಸೇನಾ ಬಲಿದಾನದ ಚಿಹ್ನೆ ಇರುವ ಗ್ಲೌಸ್ ಧರಿಸಿದ್ದ ಎಂಎಸ್ ಧೋನಿ ಪರವಾಗಿ ಟ್ವಿಟರ್ ನಲ್ಲಿ #DhoniKeepTheGlove  ಅಭಿಯಾನ ಪ್ರಾರಂಭವಾಗಿದೆ. 
ಗ್ಲೌಸ್ ನಲ್ಲಿರುವ ಚಿಹ್ನೆ ತೆಗೆಯುವಂತೆ ಐಸಿಸಿ ಒತ್ತಡದ ಹೊರತಾಗಿಯೂ ಬಿಸಿಸಿಐ ಧೋನಿ ಬೆನ್ನಿಗೆ ನಿಂತಿದ್ದರೆ, ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಿಂದ ಧೋನಿಗೆ ಬೆಂಬಲ ವ್ಯಕ್ತವಾಗುತ್ತಿದೆ. ಅಭಿಮಾನಿಗಳು ಒಂದು ಹೆಜ್ಜೆ ಮುಂದೆ ಹೋಗಿ ಐಸಿಸಿಗೆ ಝಾಡಿಸಿದ್ದಾರೆ.  
ಧೋನಿ ಗ್ಲೌಸ್ ಗೆ ಆಕ್ಷೇಪ ವ್ಯಕ್ತಪಡಿಸಿರುವ ಐಸಿಸಿ ವಿರುದ್ಧ ಕೆಂಡಾಮಂಡಲವಾಗಿರುವ ಅಭಿಮಾನಿಗಳ ಬಳಗ, "ಮೊದಲು ಕಳಪೆ ಅಂಪೈರ್ ಗಳ ಗುಣಮಟ್ಟದತ್ತ ಗಮನ ಹರಿಸಿ, ಧೋನಿಯ ಗ್ಲೌಸ್ ಬಗ್ಗೆ ಅಲ್ಲ ಎಂದು ಟ್ವಿಟರ್ ನಲ್ಲಿ ಸಲಹೆ ನೀಡಿದ್ದಾರೆ. 
ಅಂಪೈರ್ ಗಳ ಗುಣಮಟ್ಟದೆಡೆಗೆ ಐಸಿಸಿ ಕುರುಡಾಗಿರುವುದನ್ನು ಧೋನಿ ಅಭಿಮಾನಿಗಳು ಟ್ರೋಲ್ ಮಾಡಲು ಪ್ರಾರಂಭಿಸಿದ್ದು, ಈ ಪೋಸ್ಟ್ ಗಳು ವೈರಲ್ ಆಗತೊಡಗಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com