ಒಂದೇ ಎಸೆತದಲ್ಲಿ 2 ಬಾರಿ ಧೋನಿ ಸ್ಟಂಪ್ ಔಟ್‌ನಿಂದ ಬಚಾವ್, ವಿಂಡೀಸ್ ಕೀಪರ್ ಮಂಗನಾಟ, ವಿಡಿಯೋ ವೈರಲ್!

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಕೇವಲ 2 ಬಾರಿ ಸ್ಟಂಪ್ ಔಟ್ ಆಗಿದ್ದು ಇನ್ನು ಮೂರನೇ ಬಾರಿ ಸುಲಭವಾಗಿ ಸ್ಟಂಪ್ ಮಾಡುವ ಅವಕಾಶವನ್ನು...
ಎಂಎಸ್ ಧೋನಿ
ಎಂಎಸ್ ಧೋನಿ
Updated on
ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಕೇವಲ 2 ಬಾರಿ ಸ್ಟಂಪ್ ಔಟ್ ಆಗಿದ್ದು ಇನ್ನು ಮೂರನೇ ಬಾರಿ ಸುಲಭವಾಗಿ ಸ್ಟಂಪ್ ಮಾಡುವ ಅವಕಾಶವನ್ನು ವೆಸ್ಟ್ ಇಂಡೀಸ್ ಕೀಪರ್ ಮಿಸ್ ಮಾಡಿಕೊಂಡಿದ್ದಾರೆ. ಅದು ಒಂದು ಎಸೆತದಲ್ಲಿ ಎರಡೂ ಬಾರಿ ಪ್ರಯತ್ನಿಸಿ ವಿಫಲವಾಗಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಎಂಎಸ್ ಧೋನಿ ಭಾರೀ ಹೊಡೆತ ಹೊಡೆಯಲು ಮುಂದಕ್ಕೆ ಹೋಗಿದ್ದರು. ಈ ವೇಳೆ ಚೆಂಡು ವಿಂಡೀಸ್ ಕೀಪರ್ ಶಾಯ್ ಹೋಪ್ ಕೈಗೆ ಹೋಗಿತ್ತು. ಆದರೆ ಚೆಂಡನ್ನು ಹಿಡಿಯುವಲ್ಲಿ ಮೊದಲ ಬಾರಿಗೆ ವಿಫಲವಾದ ಹೋಪ್ ಸ್ಟಂಪ್ ಔಟ್ ಮಿಸ್ ಮಾಡಿದ್ದರು. ಈ ವೇಳೆ ಧೋನಿ ತಾವು ಔಟ್ ಆಗುವುದು ಖಂಡಿತ ಎಂದು ಹಿಂದಕ್ಕೆ ತಿರುಗಿ ನೋಡಿದರು. ಆದರೆ ಹೋಪ್ ವಿಫಲವಾಗಿದ್ದರು. ಈ ವೇಳೆ ಕೆಳಗೆ ಬಿದ್ದ ಚೆಂಡನ್ನು ಮತ್ತೆ ಹಿಡಿದು ಹೋಪ್ ಸ್ಟಂಪ್ ಔಟ್ ಮಾಡಲು ಮುಂದಾದರೂ. ಆದರೆ ಈ ಬಾರಿಯೂ ಅವರು ಚೆಂಡನ್ನು ಹಿಡಿದಿರಲಿಲ್ಲ. ಚೆಂಡು ಇಲ್ಲದೆ ಕೈಯಲ್ಲೇ ಹೋಪ್ ವಿಕೆಟ್ ಗೆ ಬಡಿದಿದ್ದರಿಂದ ಅಂಪೈರ್ ಗೆ ಅಪೀಲ್ ಮಾಡಿದರು. 
ಈ ವೇಳೆ ಧೋನಿ ಮತ್ತೆ ಕ್ರೀಸ್ ಗೆ ಮರಳಿದರು. ಹೋಪ್ ಮನವಿಯಂತೆ ಮೂರನೇ ಅಂಪೈರ್ ದೃಶ್ಯಗಳನ್ನು ಪರಿಶೀಲಿಸಿದರು. ಆದರೆ ಚೆಂಡು ವಿಕೆಟ್ ಗೆ ಬಡಿಯದಿದ್ದ ಕಾರಣ ನಾಟೌಟ್ ಎಂದು ತೀರ್ಪು ನೀಡಿದರು. ಒಟ್ಟಿನಲ್ಲಿ ವಿಶ್ವಕಪ್ ನಲ್ಲಿ ಧೋನಿಯನ್ನು ಸ್ಟಂಪ್ ಔಟ್ ಮಾಡುವ ಸುವರ್ಣಾವಕಾಶವನ್ನು ಹೋಪ್ ಕಳೆದುಕೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com