ಐಸಿಸಿ ವಿಶ್ವಕಪ್ 2019: ಸೆಮೀಸ್ ಗೆ ತಲುಪಲು ಪಾಕಿಸ್ತಾನಕ್ಕೆ ಇನ್ನೂ ಇದೆ ಅವಕಾಶ!

ಇಂಗ್ಲೆಂಡ್ ವಿರುದ್ಧದ ಭಾರತ ತಂಡ ಸೋಲು ಕಾಣುವ ಮೂಲಕ ಪಾಕಿಸ್ತಾನ ಬಹುತೇಕ ಟೂರ್ನಿಯಿಂದ ಹೊರಬಿದ್ದಿದೆಯಾದರೂ ಪಾಕ್ ತಂಡಕ್ಕೂ ಇನ್ನು ಕೂದಲೆಳೆ ಅಂತರದ ಅವಕಾಶವಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಲಂಡನ್: ಇಂಗ್ಲೆಂಡ್ ವಿರುದ್ಧದ ಭಾರತ ತಂಡ ಸೋಲು ಕಾಣುವ ಮೂಲಕ ಪಾಕಿಸ್ತಾನ ಬಹುತೇಕ ಟೂರ್ನಿಯಿಂದ ಹೊರಬಿದ್ದಿದೆಯಾದರೂ ಪಾಕ್ ತಂಡಕ್ಕೂ ಇನ್ನು ಕೂದಲೆಳೆ ಅಂತರದ ಅವಕಾಶವಿದೆ. 
ಈ ಕುರಿತಂತೆ ಕ್ರಿಕೆಟ್ ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದು, ಮುಂಬರುವ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನದ ಬೃಹತ್ ಗೆಲುವು ಸಾಧಿಸಿದರೆ ಅದೂ ಕೂಡ ಸೆಮೀಸ್ ಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. 
ಪಾಕಿಸ್ತಾನ ಮುಂದಿನ ಪಂದ್ಯವನ್ನು ಬಾಂಗ್ಲಾದೇಶದ ವಿರುದ್ಧ ಆಡಲಿದ್ದು, ಆ ಪಂದ್ಯದಲ್ಲಿ ಉತ್ತಮ ರನ್ ರೇಟ್ ಮೂಲಕ ಗೆದ್ದರೆ ಅದರ ಅಂಕಗಳಿಕೆ 11 ಆಗುತ್ತದೆ. ಅಂತೆಯೇ ಇಂಗ್ಲೆಂಡ್ ಕೂಡ ನ್ಯೂಜಿಲೆಂಡ್‌ ತಂಡವನ್ನು ಎದುರಿಸಲಿದ್ದು ಆ ಪಂದ್ಯದಲ್ಲಿ ಇಂಗ್ಲೆಂಡ್ ಸೋತರೆ ಅದರ ಅಂಕಗಳಿಕೆ 10 ಆಗುತ್ತದೆ. ಆಗ ಪಾಕಿಸ್ತಾನ ಕೂಡ ಸೆಮಿಫೈನಲ್ ಬರುವ ಅವಕಾಶಗಳಿವೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com