ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ನೇ ಆವೃತ್ತಿಯ ಚೊಚ್ಚಲ ಪಂದ್ಯ ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಪ್ರಾರಂಭವಾಗಿದ್ದು ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಫೀಲ್ಡಿಂಗ್ ಆಯ್ದುಕೊಂಡಿದೆ.
ಚೈನ್ನೈನ ಚಿಪಾಕ್ನ ಎಂ.ಎ ಚಿದಂಬರಂ ಸ್ಟೇಡಿಯಂ ನಲ್ಲಿ ಪಂದ್ಯ ಆಯೋಜನೆಯಾಗಿದ್ದು ಚೆನ್ನೈ ತಂಡದ ನಾಯಕ ಎಂ.ಎಸ್. ಧೋನಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಚಿನ್ನೈ ಸೂಪರ್ ಕಿಂಗ್ಸ್ ಇದಾಗಲೇ ಮೂರು ಬಾರಿ ಚಾಂಪಿಯನ್ ಎನಿಸಿಕೊಂಡಿದ್ದರೆ ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೊಚ್ಚಲ ಪ್ರಶಸ್ತಿಗಾಗಿ ನಿರೀಕ್ಷಿಸುತ್ತಿದೆ.
MS Dhoni wins the toss and elects to bowl first in the #VIVOIPL 2019 season opener here at Chepauk.