ವಿಶ್ವಕಪ್ 2019: ಮೊದಲ ಪಂದ್ಯದ ಬಳಿಕ ಟೀಂ ಇಂಡಿಯಾ ಆಟಗಾರರನ್ನು ಕುಟುಂಬಸ್ಥರು ಸೇರಿಕೊಳ್ಳಬಹುದು!

2019ರ ಐಸಿಸಿ ವಿಶ್ವಕಪ್ ಪಂದ್ಯಾವಳಿಗಾಗಿ ಟೀಂ ಇಂಡಿಯಾ ಇಂಗ್ಲೆಂಡ್ ಗೆ ತೆರಳಲಿದ್ದು ಮೊದಲ ಪಂದ್ಯದ ಬಳಿಕ ಆಟಗಾರರ ಪತ್ನಿಯರು ಸೇರಿಕೊಳ್ಳಬಹುದು ಎಂದು ಬಿಸಿಸಿಐ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಚೆನ್ನೈ: 2019ರ ಐಸಿಸಿ ವಿಶ್ವಕಪ್ ಪಂದ್ಯಾವಳಿಗಾಗಿ ಟೀಂ ಇಂಡಿಯಾ ಇಂಗ್ಲೆಂಡ್ ಗೆ ತೆರಳಲಿದ್ದು ಮೊದಲ ಪಂದ್ಯದ ಬಳಿಕ ಆಟಗಾರರ ಪತ್ನಿಯರು ಸೇರಿಕೊಳ್ಳಬಹುದು ಎಂದು ಬಿಸಿಸಿಐ ಹೇಳಿದೆ.
ಪಂದ್ಯಾವಳಿಯ ವೇಳೆ ತಂಡದ ಆಟಗಾರರು ತೀವ್ರ ಒತ್ತಡದಲ್ಲಿರುತ್ತಾರೆ ಈ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಬಿಸಿಸಿಐ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. 
ಕಳೆದ ವರ್ಷದಿಂದ ಟೀಂ ಇಂಡಿಯಾ ಆಟಗಾರರು ಪ್ರವಾಸದ ವೇಳೆ ತಮ್ಮ ಪತ್ನಿಯರು ಜೊತೆಗಿರಲು ಅವಕಾಶ ನೀಡಬೇಕು ಎಂದು ನಿರ್ವಾಹಕ ಸಮಿತಿಗೆ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಇತರ ಆಟಗಾರರು ಮನವಿ ಮಾಡಿದ್ದರು.
ಈ ಮನವಿಗೆ ಸ್ಪಂಧಿಸಿರುವ ಬಿಸಿಸಿಐ ಇದೀಗ ಐಸಿಸಿ 2019ರ ವಿಶ್ವಕಪ್ ಪಂದ್ಯಾವಳಿಯ ಒಂದು ಪಂದ್ಯದ ಬಳಿಕ ಪತ್ಮಿ ತಮ್ಮ ಪತಿಯನ್ನು ಸೇರಿಕೊಳ್ಳುವ ಅವಕಾಶ ನೀಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com