ಪೂಜಾರ ಅರ್ಧ ಶತಕ: ಡ್ರೆಸ್ಸಿಂಗ್ ರೂಂನಲ್ಲಿ ಬಾಟಲ್ ತೋರಿಸಿ ಸಂಭ್ರಮಿಸಿದ ಆಟಗಾರರು, ಇಲ್ಲಿದೆ ಬಾಟಲ್ ರಹಸ್ಯ!

ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಭಾರತ ಹಗಲು-ರಾತ್ರಿ ಟೆಸ್ಟ್ ಪಂದ್ಯವಾಡುತ್ತಿದ್ದು ಹಲವು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ.  
ರಹಾನೆ-ಪೂಜಾರ-ಟೀಂ
ರಹಾನೆ-ಪೂಜಾರ-ಟೀಂ
Updated on: 

ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಭಾರತ ಹಗಲು-ರಾತ್ರಿ ಟೆಸ್ಟ್ ಪಂದ್ಯವಾಡುತ್ತಿದ್ದು ಹಲವು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ.  

ಕೋಲ್ಕತ್ತಾದ ಈಡೆನ್ ಗಾರ್ಡನ್ ನಲ್ಲಿ ಬಾಂಗ್ಲಾದೇಶ ಮತ್ತು ಭಾರತ ನಡುವೆ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಇಲ್ಲಿ ಆಟಕ್ಕೆ ಪಿಂಕ್ ಬಾಲ್ ಬಳಸಿರುವುದು ಮತ್ತೊಂದು ವಿಶೇಷ. ಇನ್ನು ಈ ಪಂದ್ಯದಲ್ಲಿ ಚೇತೇಶ್ವರ ಪೂಜಾರ ಅರ್ಧ ಶತಕ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ಡ್ರೆಸ್ಸಿಂಗ್ ರೂಂನಲ್ಲೂ ಸಂಭ್ರಮ ಜೋರಾಗಿತ್ತು. 

ಹೌದು ಸಹ ಆಟಗಾರರು ನೀರಿನ ಬಾಟಲ್ ತೋರಿಸಿ ಸಂಭ್ರಮಿಸಿದರು. ಈ ವೇಳೆ ಪೂಜಾರ ನಗುತ್ತಾ ತಮ್ಮ ಬ್ಯಾಟಿಂಗ್ ಮುಂದುವರೆಸಿದ್ದರು. ಇಲ್ಲಿ ಮತ್ತೊಂದು ವಿಶೇಷದ ಸಂಗತಿಯೆಂದರೆ ಈ ಹಿಂದೆ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಪೂಜಾರ ತಮ್ಮ ಜೇಬಿನಲ್ಲಿ ಸಣ್ಣ ನೀರಿನ ಬಾಟಲ್ ಇಟ್ಟುಕೊಂಡಿದ್ದರು. 

ಆಟದ ಮಧ್ಯೆ ನೀರಿನ ಬಾಟಲ್ ತೆಗೆದು ನೀರು ಕುಡಿದಿದ್ದ ವಿಡಿಯೋ ವೈರಲ್ ಆಗಿತ್ತು. ಇದೇ ವಿಷಯಕ್ಕೆ ಬಾಂಗ್ಲಾ ವಿರುದ್ಧ ಅರ್ಧ ಶತಕ ಸಿಡಿಸಿದ ಸಂಭ್ರಮದ ವೇಳೆ ಸಹ ಆಟಗಾರರು ನೀರಿನ ಬಾಟಲ್ ಪ್ರದರ್ಶಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com