ಮುಂಬೈ: ಅರ್ಜುನ್ ಹಾಗೂ ಸಾರಾ ತೆಂಡೊಲ್ಕರ್ ಹೆಸರಿನಲ್ಲಿರುವ ನಕಲಿ ಟ್ವೀಟರ್ ಖಾತೆಗಳ ಬಗ್ಗೆ ಆಕ್ರೋಶಗೊಂಡಿರುವ
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೊಲ್ಕರ್ , ಕೂಡಲೇ ಕ್ರಮ ಕೈಗೊಳ್ಳುವಂತೆ ಟ್ವಿಟರ್ ಇಂಡಿಯಾವನ್ನು ಒತ್ತಾಯಿಸಿದ್ದಾರೆ.
ಸಾರಾ ಹಾಗೂ ಅರ್ಜುನ್ ತೆಂಡೊಲ್ಕರ್ ಹೆಸರಿನ ನಕಲಿ ಟ್ವಿಟರ್ ಖಾತೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸಚಿನ್ ತೆಂಡೊಲ್ಕರ್, "@jr_tendulkar", ಅರ್ಜುನ್ ಅಧಿಕೃತ ಖಾತೆ ಎನ್ನಲಾಗಿದೆ. ಆದರೆ, ಇದು ನಕಲಿ ಖಾತೆಯಾಗಿದೆ. 2018 ಜೂನ್ ನಿಂದ ಕಾರ್ಯನಿರ್ವಹಿಸುತ್ತಿರುವ ಈ ಖಾತೆಯಲ್ಲಿ ಆಕ್ಷೇಪಾರ್ಹ ಟ್ವೀಟ್ ಗಳನ್ನು ಪೋಸ್ಟ್ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಅರ್ಜುನ್ ಹಾಗೂ ಪುತ್ರಿ ಸಾರಾ ತೆಂಡೊಲ್ಕರ್ ಟ್ವಿಟರ್ ನಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿರುವ ಸಚಿನ್ , ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಟ್ವಿಟರ್ ಇಂಡಿಯಾ ಬಳಿ ಮನವಿ ಮಾಡಿಕೊಂಡಿದ್ದಾರೆ.
Advertisement