ರೋಹಿತ್ ಶರ್ಮಾ ಕೆಟ್ಟ ಪದ ಬಳಸಿದ್ದು ಯಾರಿಗೆ? ಕಿವಿ ಮುಚ್ಚಿಕೊಳ್ಳುವಂತಿದೆ, ವಿಡಿಯೋ ವೈರಲ್!

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಹಲವು ದಾಖಲೆ ಬರೆದಿರುವ ರೋಹಿತ್ ಶರ್ಮಾ ಆಟದ ಮಧ್ಯೆ ಕೆಟ್ಟ ಪದ ಬಳಸಿದ್ದು ಆ ಪದವನ್ನು ಕೇಳಿದ ಅಭಿಮಾನಿಗಳೇ ಕಿವಿ ಮುಚ್ಚಿಕೊಳ್ಳುವಂತಾಗಿದೆ.
ರೋಹಿತ್ ಶರ್ಮಾ
ರೋಹಿತ್ ಶರ್ಮಾ
Updated on: 

ವಿಶಾಖಪಟ್ಟಣಂ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಹಲವು ದಾಖಲೆ ಬರೆದಿರುವ ರೋಹಿತ್ ಶರ್ಮಾ ಆಟದ ಮಧ್ಯೆ ಕೆಟ್ಟ ಪದ ಬಳಸಿದ್ದು ಆ ಪದವನ್ನು ಕೇಳಿದ ಅಭಿಮಾನಿಗಳೇ ಕಿವಿ ಮುಚ್ಚಿಕೊಳ್ಳುವಂತಾಗಿದೆ. 

ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್ ನ 25ನೇ ಓವರ್ ನಲ್ಲಿ ರೋಹಿತ್ ಶರ್ಮಾ ಗಲ್ಲಿಯಲ್ಲಿ ಚೆಂಡನ್ನು ಬಾರಿಸಿ 1 ರನ್ ಪಡೆಯಲು ಮುಂದಾಗಿದ್ದರು. ಆದರೆ ಚೇತೇಶ್ವರ ಪೂಜಾರ ರನ್ ಬೇಡ ಎಂದು 
ಹಿಂದಕ್ಕೆ ಹೋಗಿದ್ದರು. ಇದರಿಂದ ಕೋಪಗೊಂಡ ರೋಹಿತ್ ಶರ್ಮಾ ಪೂಜಾರರ ವಿರುದ್ಧ ಕೆಟ್ಟ ಪದ ಬಳಕೆ ಮಾಡಿದ್ದಾರೆ. ಇದು ಸ್ಟಂಪ್ ಮೈಕ್ ನಲ್ಲಿ ರೆಕಾರ್ಡ್ ಆಗಿದೆ. 

ರೋಹಿತ್ ಶರ್ಮಾರ ಕೆಟ್ಟ ಪದ ಬಳಕೆ ನಿಜಕ್ಕೂ ಅಸಹ್ಯ ಹುಟ್ಟಿಸುತ್ತದೆ. ರೋಹಿತ್ ಪದ ಬಳಕೆ ಕೇಳಿ ಅಭಿಮಾನಿಗಳೇ ಕಿವಿ ಮುಚ್ಚಿಕೊಳ್ಳುಂತಿದೆ. ಅಲ್ಲದೆ ರೋಹಿತ್ ಶರ್ಮಾರ ವಿರುದ್ಧ ಟೀಕೆಗಳು ಕೇಳಿಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com