ವಿಶ್ವ ಕ್ರಿಕೆಟ್ ನಲ್ಲಿ ಆಸಿಸ್ ಬಳಿಕ ಈ ದಾಖಲೆ ಬರೆದ 2ನೇ ತಂಡ ಭಾರತ, ಇಷ್ಟಕ್ಕೂ ಯಾವುದು ಈ ದಾಖಲೆ?

ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲೂ ರೋಚಕ ಗೆಲುವು ದಾಖಲಿಸುವ ಮೂಲಕ ಟೀಂ ಇಂಡಿಯಾ ವಿಶ್ವ ಕ್ರಿಕೆಟ್ ನಲ್ಲಿ ಅಪರೂಪದ ದಾಖಲೆಯೊಂದನ್ನು ಬರೆದಿದೆ.
ಟೀಂ ಇಂಡಿಯಾ
ಟೀಂ ಇಂಡಿಯಾ
ನಾಗಪುರು: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲೂ ರೋಚಕ ಗೆಲುವು ದಾಖಲಿಸುವ ಮೂಲಕ ಟೀಂ ಇಂಡಿಯಾ ವಿಶ್ವ ಕ್ರಿಕೆಟ್ ನಲ್ಲಿ ಅಪರೂಪದ ದಾಖಲೆಯೊಂದನ್ನು ಬರೆದಿದೆ.
2ನೇ ಏಕದಿನ ಪಂದ್ಯದಲ್ಲಿ ಆಸಿಸ್ ವಿರುದ್ಧ 8 ರನ್ ಗಳ ರೋಚಕ ಜಯದಾಖಲಿಸುವ ಮೂಲಕ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಏಕದಿನ ಪಂದ್ಯದ ಗೆಲುವುಗಳನ್ನು 500ಕ್ಕೆ ಏರಿಕೆ ಮಾಡಿಕೊಂಡಿತು. ಆ ಮೂಲಕ 500 ಏಕದಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿದ ವಿಶ್ವದ 2ನೇ ತಂಡ ಎಂಬ ದಾಖಲೆಗೆ ಟೀಂ ಇಂಡಿಯಾ ಪಾತ್ರವಾಯಿತು. 
ಭಾರತ ತಂಡ ತನ್ನ ಮೊಟ್ಟ ಮೊದಲ ಏಕದಿನ ಪಂದ್ಯವನ್ನು 1975 ಜೂನ್ 11ರಂದು ಈಸ್ಚ್ ಆಫ್ರಿಕಾ ವಿರುದ್ಧ ಆಡಿತ್ತು. ಅಲ್ಲದೆ ತಾನಾಡಿದ ಮೊದಲ ಪಂದ್ಯದಲ್ಲೇ ಐತಿಹಾಸಿ ಗೆಲುವು ಸಾಧಿಸಿತ್ತು. ಅಲ್ಲಿಂದ ಇಲ್ಲಿಯವರೆಗೂ ಟೀಂ ಇಂಡಿಯಾ ಒಟ್ಟು 963 ಏಕದಿನ ಪಂದ್ಯಗಳನ್ನಾಡಿದ್ದು, ಈ ಪೈಕಿ 500 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
100ನೇ, 200ನೇ, 300ನೇ, 400ನೇ ಮತ್ತು 500ನೇ ಏಕದಿನ ಪಂದ್ಯಗಳ ಗೆದ್ದು, ಐತಿಹಾಸಿಕ ಸಾಧನೆ
ಅಂತೆಯೇ ಟೀಂ ಇಂಡಿಯಾ 1993ರಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧದ ಸರಣಿಯಲ್ಲಿ 100 ಏಕದಿನ ಗೆಲುವು ಸಾಧಿಸಿತ್ತು. ಮೊಹಾಲಿಯಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಭಾರತ ಭಾರತ 43 ರನ್ ಗಳ ಅಂತರದ ಭರ್ಜರಿ ಜಯ ಸಾಧಿಸಿತ್ತು. ಆ ಬಳಿಕ ಸುಮಾರು 7 ವರ್ಷಗಳ ಬಳಿಕ ಭಾರತ ತನ್ನ 200 ಏಕದಿನ ಗೆಲುವು ಕಂಡಿತು. 2000ರಲ್ಲಿ ಕೀನ್ಯಾ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ ನೈರೋಬಿಯಲ್ಲಿ ನಡೆದ ಏಕದಿನ ಪಂದ್ಯವನ್ನು 8 ವಿಕೆಟ್ ಗಳ ಅಂತರದಲ್ಲಿ ಗೆದ್ದು 200 ಏಕದಿನ ಗೆಲುವು ತನ್ನದಾಗಿಸಿಕೊಂಡಿತು.
ಮತ್ತೆ ಏಳು ವರ್ಷಗಳ ಕಟಕ್ ನಲ್ಲಿ ಭಾರತ ತನ್ನ 300ನೇ ಏಕದಿನ ಗೆಲುವು ಕಂಡಿತು. 200ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ವೆಸ್ಟ್ ಇಂಡೀಸ್ ವಿರುದ್ಧ ಗೆದ್ದು ತನ್ನ ಏಕದಿನ ಪಂದ್ಯಗಳ ಗೆಲುವಿನ ಸಂಖ್ಯೆಯನ್ನು 300ಕ್ಕೆ ಏರಿಕೆ ಮಾಡಿಕೊಂಡಿತು. 2012ರಲ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ವೇಳೆ ಶ್ರೀಲಂಕಾ ವಿರುದ್ಧ ಕೊಲಂಬೋದಲ್ಲಿ ನಡೆದ ಪಂದ್ಯವನ್ನು ಗೆದ್ದು ತನ್ನ 400ನೇ ಏಕದಿನ ಗೆಲುವು ಕಂಡಿತು. ಈ ಪಂದ್ಯದಲ್ಲಿ ಭಾರತ ಲಂಕಾ ವಿರುದ್ಧ 6 ವಿಕೆಟ್ ಗಳ ಭರ್ಜರಿ ಜಯ ಕಂಡಿತ್ತು. 
ಇನ್ನು ನಿನ್ನೆ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲೂ ಗೆಲ್ಲುವ ಮೂಲಕ ತನ್ನ ಗೆಲುವಿನ ಸಂಖ್ಯೆಯನ್ನು 500ಕ್ಕೆ ಏರಿಕೆ ಮಾಡಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com