ಧೋನಿ ತವರು ರಾಂಚಿಯಲ್ಲೇ ಮಾಜಿ ನಾಯಕನ ದಾಖಲೆ ಮುರಿದ ರನ್ ಮೆಶಿನ್ ಕೊಹ್ಲಿ!

ಟೀಂ ಇಂಡಿಯಾದ ನಾಯಕ, ರನ್ ಮೆಶಿನ್ ವಿರಾಟ್ ಕೊಹ್ಲಿ ಅವರು ಎಬಿ ಡಿವಿಲಿಯರ್ಸ್ ಹಾಗೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ದಾಖಲೆಯನ್ನು ಮುರಿದಿದ್ದಾರೆ.
ವಿರಾಟ್ ಕೊಹ್ಲಿ, ಎಂಎಸ್ ಧೋನಿ
ವಿರಾಟ್ ಕೊಹ್ಲಿ, ಎಂಎಸ್ ಧೋನಿ
ರಾಂಚಿ: ಟೀಂ ಇಂಡಿಯಾದ ನಾಯಕ, ರನ್ ಮೆಶಿನ್ ವಿರಾಟ್ ಕೊಹ್ಲಿ ಅವರು ಎಬಿ ಡಿವಿಲಿಯರ್ಸ್ ಹಾಗೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ದಾಖಲೆಯನ್ನು ಮುರಿದಿದ್ದಾರೆ.
ಕೊಹ್ಲಿ ನಾಯಕನಾಗಿ 4000 ರನ್ ಪೂರೈಸಿದ ನಾಲ್ಕನೇ ಭಾರತೀಯ ಆಟಗಾರ ಹಾಗೂ ಜಗತ್ತಿನ 12ನೇ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಇನ್ನು ವೇಗವಾಗಿ 4000 ರನ್ ಪೂರೈಸುವ ಮೂಲಕ ಎಬಿ ಡಿವಿಲಿಯರ್ಸ್ ಹಾಗೂ ಎಂಎಸ್ ಧೋನಿ ದಾಖಲೆಯನ್ನು ಮುರಿದಿದ್ದಾರೆ.
4000 ರನ್ ಪೂರೈಸಲು ವಿರಾಟ್ ಕೊಹ್ಲಿ 63 ಇನ್ನಿಂಗ್ಸ್ ತೆಗೆದುಕೊಂಡಿದ್ದರೆ, ಎಬಿಡಿ 77 ಇನ್ನಿಂಗ್ಸ್ ಹಾಗೂ ಎಂಎಸ್ ಧೋನಿ 100 ಇನ್ನಿಂಗ್ಸ್ ತೆಗೆದುಕೊಂಡಿದ್ದರು. 
4 ಸಾವಿರ ರನ್ ಪೂರೈಸಿರುವ ಆಟಗಾರರ ಪೈಕಿ ಎಂಎಸ್ ಧೋನಿ 6641 ರನ್, ಮೊಹಮ್ಮದ್ ಅಜರುದ್ದೀನ್ 5169 ರನ್ ಹಾಗೂ ಸೌರವ್ ಗಂಗೂಲಿ 5105 ರನ್ ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com