ಆ್ಯಷಸ್ 2019: ಪಾಕಿಸ್ತಾನದ ಲೆಜೆಂಡ್ ಆಟಗಾರನ ದಾಖಲೆ ಧೂಳಿಪಟ ಮಾಡಿದ ಸ್ಟೀವ್ ಸ್ಮಿತ್

ಹಾಲಿ ಆ್ಯಷಸ್ ಸರಣಿಯ ಐದನೇ ಪಂದ್ಯದಲ್ಲೂ ಆಸೀಸ್‌ ರನ್‌ ಮಷಿನ್‌ ಸ್ಟೀವನ್‌ ಸ್ಮಿತ್‌ ಯಶಸ್ಸಿನ ನಾಗಾಲೋಟ ಮುಂದುವರೆದಿದ್ದು, ಐದನೇ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಅರ್ಧಶತಕ ಗಳಿಸುವ ಮೂಲಕ ದಾಖಲೆ ನಿರ್ಮಾಣ ಮಾಡಿದ್ದಾರೆ.

Published: 14th September 2019 11:29 AM  |   Last Updated: 14th September 2019 11:29 AM   |  A+A-


Steve Smith

ಸಂಗ್ರಹ ಚಿತ್ರ

Posted By : Srinivasamurthy VN
Source : UNI

ಇಂಜಾಮಾಮ್‌ ಉಲ್ ಹಕ್ ದಾಖಲೆ ಮುರಿದ ಆಸೀಸ್‌ ರನ್‌ ಮಷಿನ್‌ ಸ್ಟೀವನ್‌ ಸ್ಮಿತ್‌

ಲಂಡನ್‌: ಹಾಲಿ ಆ್ಯಷಸ್ ಸರಣಿಯ ಐದನೇ ಪಂದ್ಯದಲ್ಲೂ ಆಸೀಸ್‌ ರನ್‌ ಮಷಿನ್‌ ಸ್ಟೀವನ್‌ ಸ್ಮಿತ್‌ ಯಶಸ್ಸಿನ ನಾಗಾಲೋಟ ಮುಂದುವರೆದಿದ್ದು, ಐದನೇ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಅರ್ಧಶತಕ ಗಳಿಸುವ ಮೂಲಕ ದಾಖಲೆ ನಿರ್ಮಾಣ ಮಾಡಿದ್ದಾರೆ.

ಇಂಗ್ಲೆಂಡ್‌ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಆ್ಯಷಸ್‌ ಟೆಸ್ಟ್ ಸರಣಿಯಲ್ಲಿ ರನ್‌ ಹೊಳೆ ಹರಿಸುತ್ತಿರುವ ಆಸ್ಟ್ರೇಲಿಯಾದ ರನ್‌ ಮಿಷನ್‌ ಸ್ಟೀವನ್‌ ಸ್ಮಿತ್‌ ಅವರು ದೀರ್ಘ ಅವಧಿಯ ಕ್ರಿಕೆಟ್‌ನಲ್ಲಿ ಮತ್ತೊಂದು ಮೈಲಿಗಲ್ಲು ಸೃಷ್ಠಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದೇ ಎದುರಾಳಿ ತಂಡದ ವಿರುದ್ಧ ಸತತ ಅತಿ ಹೆಚ್ಚು ಅರ್ಧ ಶತಕ ಬಾರಿಸಿದ ವಿಶ್ವದ ಮೊದಲ ಬ್ಯಾಟ್ಸ್ ಮನ್‌ ಎಂಬ ದಾಖಲೆ ನಿರ್ಮಾಣ ಮಾಡಿದರು. ಆ ಮೂಲಕ ಪಾಕಿಸ್ತಾನದ ಮಾಜಿ ನಾಯಕ ಇಂಜಾಮಾಮ್‌ ಉಲ್‌ ಹಕ್‌ ಅವರ ದಾಖಲೆಯನ್ನು ಮುರಿದರು. ಟೂರ್ನಿಯಲ್ಲಿ ಸ್ಮಿತ್ ಗೆ ಇದು ಎರಡನೇ ಅರ್ಧಶತಕವಾಗಿದೆ.

ಇಲ್ಲಿನ ಕೆನ್ನಿಂಗ್ಟನ್ ಓವಲ್‌ ಕ್ರೀಡಾಂಗಣದಲ್ಲಿ ಐದನೇ ಹಾಗೂ ಕೊನೆಯ ಟೆಸ್ಟ್‌ ಪಂದ್ಯದ ಎರಡನೇ ದಿನ ಸ್ಟೀವನ್‌ ಸ್ಮಿತ್‌ 80 ರನ್‌ ಗಳಿಸಿದರು. ಆ ಮೂಲಕ ಇಂಗ್ಲೆಂಡ್‌ ವಿರುದ್ಧ ಸತತ 10 ಅರ್ಧ ಶತಕ ಪೂರ್ಣಗೊಳಿಸಿದರು. ಆ ಮೂಲಕ ಒಂದೇ ಎದುರಾಳಿ ತಂಡದ ವಿರುದ್ಧ ಅತೀ ಹೆಚ್ಚು ಅರ್ಧಶತಕ ಸಿಡಿಸಿದ ವಿಶ್ವದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.  ಅಂತೆಯೇ ಟೂರ್ನಿಯಲ್ಲಿ ಸ್ಮಿತ್ ಒಟ್ಟು 751 ರನ್ ಗಳಿಸಿದ್ದಾರೆ.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp