ಎಬಿ ಡಿವಿಲಿಯರ್ಸ್ ಅಂತೆ 360 ಡಿಗ್ರಿಯಲ್ಲಿ ಬ್ಯಾಟಿಂಗ್ ಮಾಡಬಲ್ಲ ಕ್ರಿಕೆಟಿಗ ಕನ್ನಡಿಗ ಕೆಎಲ್ ರಾಹುಲ್, ವಿಡಿಯೋ ವೈರಲ್!

ನ್ಯೂಜಿಲ್ಯಾಂಡ್ ಪ್ರವಾಸದಲ್ಲಿ ಸದ್ಯ ಮಿಂಚುತ್ತಿರುವ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಅವರು 360 ಡಿಗ್ರಿಯಲ್ಲೂ ಬ್ಯಾಟಿಂಗ್ ಮಾಡಬಲ್ಲ ಚಾಣಾಕ್ಷ ಎಂದು ಕರೆಯಲಾಗಿದ್ದು ರಾಹುಲ್ ಬ್ಯಾಟಿಂಗ್ ವಿಡಿಯೋ ಇದೀಗ ವೈರಲ್ ಆಗಿದೆ. 
ಕೆಎಲ್ ರಾಹುಲ್
ಕೆಎಲ್ ರಾಹುಲ್
Updated on: 

ಬೆಂಗಳೂರು: ನ್ಯೂಜಿಲ್ಯಾಂಡ್ ಪ್ರವಾಸದಲ್ಲಿ ಸದ್ಯ ಮಿಂಚುತ್ತಿರುವ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಅವರು 360 ಡಿಗ್ರಿಯಲ್ಲೂ ಬ್ಯಾಟಿಂಗ್ ಮಾಡಬಲ್ಲ ಚಾಣಾಕ್ಷ ಎಂದು ಕರೆಯಲಾಗಿದ್ದು ರಾಹುಲ್ ಬ್ಯಾಟಿಂಗ್ ವಿಡಿಯೋ ಇದೀಗ ವೈರಲ್ ಆಗಿದೆ. 

ನ್ಯೂಜಿಲ್ಯಾಂಡ್ ವಿರುದ್ಧ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 4 ವಿಕೆಟ್ ಗಳಿಂದ ಸೋತಿರಬಹುದು. ಆದರೆ ಟೀಂ ಇಂಡಿಯಾ ಪರ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್ ಮಾಡಿರುವುದು ನಾಲ್ಕನೇ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟ್ಸ್ ಮನ್ ಸಿಕ್ಕಿದ್ದಾರೆ. 

ಕೆಎಲ್ ರಾಹುಲ್ ಬ್ಯಾಟಿಂಗ್ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್, 360 ಡಿಗ್ರಿಯಲ್ಲೂ ಬ್ಯಾಟಿಂಗ್ ಮಾಡಬಲ್ಲ ಅದ್ಭುತ ಆಟಗಾರ ಎಂದರೆ ಅದು ಕೆಎಲ್ ರಾಹುಲ್ ಎಂದು ಬರೆದಿದ್ದಾರೆ.

ಇದೇ ಪಂದ್ಯದಲ್ಲಿ ಕೆಎಲ್ ರಾಹುಲ್ ಅವರು 64 ಎಸೆತಗಳಲ್ಲಿ 6 ಸಿಕ್ಸ್ ಮತ್ತು 3 ಬೌಂಡರಿ ಸೇರಿದಂತೆ 88 ರನ್ ಪೇರಿಸಿದ್ದರು. ಅವರ ಬ್ಯಾಟಿಂಗ್ ಶೈಲಿ ನಿಜಕ್ಕೂ ಅದ್ಭುತವಾಗಿತ್ತು. ಮೈದಾನದ ಪ್ರತಿಯೊಂದು ಕಡೆ ಚೆಂಡನ್ನು ಬಾರಿಸಿದ್ದರು. ಈ ವಿಡಿಯೋಗೆ ಇದೀಗ ನೆಟಿಗರು ಫಿದಾ ಆಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com