ಟಿ20 ವಿಶ್ವಕಪ್ ಮುಂದೂಡಿಕೆ: ಟಿಕೆಟ್ ಮುಂದಿನ ವರ್ಷಕ್ಕೂ ಅನ್ವಯ, ಒಂದು ಷರತ್ತು!

ಪ್ರಸ್ತುತ ಮುಂದೂಡಿಕೆಯಾಗಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಮಾರಾಟವಾಗಿರುವ ಟಿಕೆಟ್ ಗಳು ಮುಂದಿನ ವರ್ಷಕ್ಕೆ ಅನ್ವಯವಾಗಲಿದೆ ಎಂದು ಐಸಿಸಿ ತಿಳಿಸಿದೆ. ಆದರೆ ಮುಂದೂಡಿಕೆಯಾಗಿರುವ ಟೂರ್ನಿ ಆಸ್ಟ್ರೇಲಿಯದಲ್ಲಿ ನಡೆದರೆ ಮಾತ್ರ ಎಂದಿದೆ.
ಟಿ20 ವಿಶ್ವಕಪ್
ಟಿ20 ವಿಶ್ವಕಪ್
Updated on: 

ನವದೆಹಲಿ: ಪ್ರಸ್ತುತ ಮುಂದೂಡಿಕೆಯಾಗಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಮಾರಾಟವಾಗಿರುವ ಟಿಕೆಟ್ ಗಳು ಮುಂದಿನ ವರ್ಷಕ್ಕೆ ಅನ್ವಯವಾಗಲಿದೆ ಎಂದು ಐಸಿಸಿ ತಿಳಿಸಿದೆ. ಆದರೆ ಮುಂದೂಡಿಕೆಯಾಗಿರುವ ಟೂರ್ನಿ ಆಸ್ಟ್ರೇಲಿಯದಲ್ಲಿ ನಡೆದರೆ ಮಾತ್ರ ಎಂದಿದೆ.

ಒಂದು ವೇಳೆ ಈ ಟೂರ್ನಿ 2022ಕ್ಕೆ ಮುಂದೂಡಿಕೆಯಾದರೆ ಅಥವಾ ಭಾರತದ ಆತಿಥ್ಯದಲ್ಲಿ ನಡೆದರೆ ಎಲ್ಲ ಟಿಕೆಟ್ ಹಣವನ್ನು ಮರು ಪಾವತಿ ಮಾಡಲಾಗುವುದು ಎಂದು ಐಸಿಸಿ ತನ್ನ ವೆಬ್ ಸೈಟ್ ನಲ್ಲಿ ಸೋಮವಾರ ತಿಳಿಸಿದೆ. ಕೋವಿಡ್-19ನಿಂದಾಗಿ ವಿಶ್ವ ಕಪ್ ಟೂರ್ನಿಯನ್ನು ಮುಂದೂಡಲಾಗಿದೆ. 

ಅಕ್ಟೋಬರ್-ನವೆಂಬರ್ ನಲ್ಲಿ ಟೂರ್ನಿಯನ್ನು ಆಯೋಜಿಸಲಾಗಿತ್ತು. ಆದರೀಗ ಸಾಂಕ್ರಾಮಿಕ ಪಿಡುಗಿನಿಂದಾಗಿ ಮುಂದೂಡಲಾಗಿದೆ. ಮುಂದೂಡಿಕೆಯಾಗಿರುವ ಟೂರ್ನಿ ಯಾವ ರಾಷ್ಟ್ರದಲ್ಲಿ ನಡೆಯುತ್ತದೆ ಎಂಬುದನ್ನು ಐಸಿಸಿ ಇನ್ನೂ ನಿರ್ಧರಿಸಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com