ಕೊರೋನಾ ವೈರಸ್ ಲಾಕ್ ಡೌನ್ ನಡುವೆ ತೆಲುಗು ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ ವಾರ್ನರ್ ದಂಪತಿ

ಕೊರೋನಾ ವೈರಸ್ ಲಾಕ್ ಡೌನ್ ನಡುವೆಯೇ ಆಸಿಸ್ ಕ್ರಿಕೆಟಿಗ ಡೇವಿಡ್ ವಾರ್ನರ್ ದಂಪತಿ ತೆಲುಗು ಚಿತ್ರದ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ.
ವಾರ್ನರ್ ಮತ್ತು ಕ್ಯಾಂಡಿಸ್ ಡ್ಯಾನ್ಸ್
ವಾರ್ನರ್ ಮತ್ತು ಕ್ಯಾಂಡಿಸ್ ಡ್ಯಾನ್ಸ್
Updated on: 

ಸಿಡ್ನಿ: ಕೊರೋನಾ ವೈರಸ್ ಲಾಕ್ ಡೌನ್ ನಡುವೆಯೇ ಆಸಿಸ್ ಕ್ರಿಕೆಟಿಗ ಡೇವಿಡ್ ವಾರ್ನರ್ ದಂಪತಿ ತೆಲುಗು ಚಿತ್ರದ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ.

ಮಾರಕ ಕೊರೋನಾ ವೈರಸ್ ಆರ್ಭಟಕ್ಕೆ ತತ್ತರಿಸಿ ಹೋಗಿರುವ ವಿಶ್ವದ ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಮೊರೆ ಹೋಗಿದ್ದು, ಲಾಕ್​ ಡೌನ್​ನಿಂದಾಗಿ ವಿಶ್ವದಾದ್ಯಂತ ಎಲ್ಲರೂ ತಮ್ಮ ಹೆಚ್ಚಿನ ಸಮಯವನ್ನು ತಮ್ಮ ಕುಟುಂಬದೊಂದಿಗೆ ಕಳೆಯುತ್ತಿದ್ದಾರೆ. ಪ್ರಮುಖವಾಗಿ ಜಗತ್ತಿನ ವಿವಿಧ  ರಂಗದ ಸೆಲೆಬ್ರಿಟಿಗಳು ಮನೆಯಲ್ಲಿದ್ದೇ ತಮ್ಮನ್ನು ತಾವು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವು ತಮ್ಮದೇ ಆದ ವಿಶಿಷ್ಠ ರೀತಿಯ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಯ ಬಿಡುತ್ತಿದ್ದು, ಈ ಪಟ್ಟಿಗೆ ಇದೀಗ ಆಸಿಸ್ ಕ್ರಿಕೆಟ್ ತಂಡ ಸ್ಫೋಟಕ ಬ್ಯಾಟ್ಸ್  ಮನ್ ಡೇವಿಡ್ ವಾರ್ನರ್ ಕೂಡ ಸೇರ್ಪಡೆಯಾಗಿದ್ದಾರೆ.

ಹೌದು.. ಐಪಿಎಲ್ ಗೆ ಭರ್ಜರಿ ತಯಾರಿ ನಡೆಸುವ ಯೋಜನೆಯಲ್ಲಿದ್ದ ಡೇವಿಡ್ ವಾರ್ನರ್ ಕೊರೋನಾದಿಂದಾಗಿ ಮನೆಯಲ್ಲೇ ಇರಬೇಕಾದ ಅನಿವಾರ್ಯತೆಯಲ್ಲಿದ್ದಾರೆಯಾದರೂ, ಮನೆಯಲ್ಲಿದ್ದುಕೊಂಡೇ ವಿಶೇಷ ವಿಡಿಯೋ ಮೂಲಕ ಭಾರತೀಯ ಅಭಿಮಾನಿಗಳನ್ನು ರಂಜಿಸಿದ್ದಾರೆ.  ಐಪಿಎಲ್​ನಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದ ನಾಯಕನಾಗಿರುವ ವಾರ್ನರ್, ತಮ್ಮ ಹೈದರಾಬಾದ್‌ ಅಭಿಮಾನಿಗಳ ಮನ ಗೆಲ್ಲಲು ತೆಲುಗು ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ. ವಾರ್ನರ್ ಮತ್ತು ಅವರ ಪತ್ನಿ ಕ್ಯಾಂಡೀಸ್‌ ತೆಲುಗು ಚಿತ್ರದ ಹಾಡೊಂದಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ.   ತೆಲುಗಿನ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್‌ ಮತ್ತು ಪೂಜಾ ಹೆಗ್ಡೆ ನಟಿಸಿರುವ ಅಲಾ ವೈಕುಂಠಪುರಮುಲೋ ಸಿನಿಮಾದ ‘ಬುಟ್ಟ ಬೊಮ್ಮ’ ಹಾಡಿಗೆ ಸ್ಟೆಪ್‌ ಹಾಕಿ ಮಿಂಚಿದ್ದಾರೆ.

ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಈ ಹಿಂದೆ ಡೇವಿಡ್ ವಾರ್ನರ್ ತಮ್ಮ ಮುದ್ದಿನ ಮಗಳಾದ ಐವೀ ಜೊತೆ ಕತ್ರೀನಾ ಕೈಫ್‌ ನಟಿಸಿದ್ದ ಸೂಪರ್‌ ಹಿಟ್‌ ಶೀಲಾ ಕಿ ಜವಾನಿ ಹಾಡಿಗೆ ಸ್ಟೆಪ್‌ ಹಾಕಿರೋ ವಿಡಿಯೋ ವೈರಲ್ ಆಗಿತ್ತು.

 
 
 
 
 
 
 
 
 
 
 
 
 

It’s tiktok time #buttabomma get out of your comfort zone people lol @candywarner1

A post shared by David Warner (@davidwarner31) on

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com