ಧೋನಿ ಮಗಳು ಝೀವಾಗೆ ಅತ್ಯಾಚಾರ ಬೆದರಿಕೆ ಹಾಕಿದ್ದ ಯುವಕನ ಬಂಧನ

ಚೆನ್ನೈ ತಂಡದ ನಾಯಕ ಎಂಎಸ್ ಧೋನಿ ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ನೀಡದ ಕಾರಣಕ್ಕೆ ಅವರ ಮಗಳಿಗೆ ಅತ್ಯಾಚಾರಕ್ಕೆ ಬೆದರಿಕೆ ಹಾಕಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. 
ಧೋನಿ ಪುತ್ರಿ ಝೀವಾ
ಧೋನಿ ಪುತ್ರಿ ಝೀವಾ

ಅಹಾಮದಾಬಾದ್: ಚೆನ್ನೈ ತಂಡದ ನಾಯಕ ಎಂಎಸ್ ಧೋನಿ ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ನೀಡದ ಕಾರಣಕ್ಕೆ ಅವರ ಮಗಳಿಗೆ ಅತ್ಯಾಚಾರಕ್ಕೆ ಬೆದರಿಕೆ ಹಾಕಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
 
ಗುಜರಾತಿನ ಕಚ್ ಜಿಲ್ಲೆಯ ನಮ್ಮ ಕಪಾಯ ಗ್ರಾಮದ 12ನೇ ತರಗತಿಯ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ತೆಗದುಕೊಂಡಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿ ಧೋನಿ ಇನ್ ಸ್ಟಾಗ್ರಾಂ ಖಾತೆಯಲ್ಲಿ ಅಸಭ್ಯವಾಗಿ ನಿಂದನೆ ಮಾಡಿದ್ದ ಆರೋಪ ಅತ್ಯಾಚಾರ ಬೆದರಿಕೆ ಹಾಕಿದ್ದ.

ಇನ್ನೂ ವಿಚಾರಣೆ ವೇಳೆ ತಾನು ಬೆದರಿಕೆ ಹಾಕಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಜಾರ್ಖಂಡ್‍ನ ರಾಂಚಿಯಲ್ಲಿರುವ ರತು ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.
 
ಯುಎಇ ನಡೆಯುತ್ತಿರುವ ಐಪಿಎಲ್-2020 ಈಗಾಗಲೇ 26 ಪಂದ್ಯಗಳನ್ನು ಪೂರ್ಣಗೊಳಿಸಿದೆ. ಈ ಟೂರ್ನಿಯಲ್ಲಿ ಧೋನಿ ನೇತೃತ್ವದ ಚೆನ್ನೈ ತಂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಇದರ ಜೊತೆಗೆ ನಾಯಕನಾಗಿ ಮತ್ತು ಬ್ಯಾಟ್ಸ್ ಮ್ಯಾನ್ ಅಗಿ ಕೂಡ ಎಂಎಸ್ ಧೋನಿಯವರು ನೀರಸ ಪ್ರದರ್ಶನ ತೋರುತ್ತಿದ್ದಾರೆ.  ಬೆಂಗಳೂರು ವಿರುದ್ಧಪಂದ್ಯದಲ್ಲಿ ಚೆನ್ನೈ ಸೋತಿತ್ತು.

ಕಳೆದ ಬುಧವಾರ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯದಲ್ಲಿ ಹೀನಾಯವಾಗಿ ಸೋತಿತ್ತು. ಗೆಲುವಿನ ಹಾದಿಯಲ್ಲಿ ಇದ್ದ ಚೆನೈ ತಂಡ ದಿಢೀರ್ ಕುಸಿತದಿಂದ 10 ರನ್‍ಗಳ ಅಂತರದಲ್ಲಿ ಸೋಲನ್ನು ಒಪ್ಪಿಕೊಂಡಿತ್ತು. ಈ ನಂತರ ಟ್ವಿಟ್ಟರಿನಲ್ಲಿ ಕಮೆಂಟ್ ಮಾಡಿರುವ ವಿಜಯ್ ಎಂಬ ವ್ಯಕ್ತಿ ಧೋನಿ ಮಗಳನ್ನು ಅತ್ಯಾಚಾರ ಮಾಡುವುದಾಗಿ ಹೇಳಿದ್ದನು. ಜೊತೆಗೆ ಅಸಭ್ಯ ಪದಗಳನ್ನು ಬಳಸಿ ಐದು ವರ್ಷದ ಕಂದಮ್ಮನನ್ನು ನಿಂದಿಸಿದ್ದನು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com