ಟ್ರಿಬ್ಯೂಟ್ ಜರ್ಸಿ ಧರಿಸಿ ಕೋವಿಡ್ ಹಿರೋಗಳನ್ನು ಗೌರವಿಸಲಿರುವ ಆರ್ ಸಿಬಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೋವಿಡ್-19 ಹಿರೋಗಳನ್ನು ಗೌರವಿಸಲು ಟೂರ್ನಿಯಾದ್ಯಂತ  My COVID Heroes ಎಂಬ ಸಂದೇಶವಿರುವ ಜರ್ಸಿ ಧರಿಸಲಿದ್ದಾರೆ. 
ಟ್ರಿಬ್ಯೂಟ್ ಜರ್ಸಿ ಧರಿಸಿ ಕೋವಿಡ್ ಹಿರೋಗಳನ್ನು ಗೌರವಿಸಲಿರುವ ಆರ್ ಸಿಬಿ
ಟ್ರಿಬ್ಯೂಟ್ ಜರ್ಸಿ ಧರಿಸಿ ಕೋವಿಡ್ ಹಿರೋಗಳನ್ನು ಗೌರವಿಸಲಿರುವ ಆರ್ ಸಿಬಿ
Updated on

ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೋವಿಡ್-19 ಹಿರೋಗಳನ್ನು ಗೌರವಿಸಲು ಟೂರ್ನಿಯಾದ್ಯಂತ My COVID Heroes ಎಂಬ ಸಂದೇಶವಿರುವ ಜರ್ಸಿ ಧರಿಸಲಿದ್ದಾರೆ. 

ಜೆರ್ಸಿ ಹಿಂಬದಿಯಲ್ಲಿ ಈ ಸಂದೇಶ ಮುದ್ರಿತವಾಗಿರಲಿದ್ದು, ತರಬೇತಿಯ ವೇಳೆ ಬಳಸುವ ಜೆರ್ಸಿಗಳಲ್ಲೂ ಇದನ್ನು ಕಾಣಬಹುದಾಗಿದೆ. ಐಪಿಎಲ್ ಸೆಷನ್ ನ ಆರ್ ಸಿಬಿಯ ಮೊದಲ ಪಂದ್ಯದಲ್ಲಿ ಆಟಗಾರರು ಧರಿಸಿದ್ದ ಜೆರ್ಸಿಯನ್ನು ಹರಾಜು ಹಾಕಿ ಅದರಿಂದ ಬರುವ ಹಣವನ್ನು ಗೀವ್ ಇಂಡಿಯಾ ಫೌಂಡೇಶನ್ ಗೆ ನೀಡಲಾಗುತ್ತದೆ. 

ಈ ಘೋಷಣಾ ಕಾರ್ಯಕ್ರಮದ ವರ್ಚ್ಯುಯಲ್ ಉದ್ಘಾಟನೆಯಲ್ಲಿ ಆರ್ ಸಿಬಿ ಅಧ್ಯಕ್ಷ ಸಂಜೀವ್ ಚುರಿವಾಲ, ನಾಯಕ ವಿರಾಟ್ ಕೊಹ್ಲಿ, ಪಾರ್ಥಿವ್ ಪಟೇಲ್ ಹಾಗೂ ಪ್ರಾರಂಭಿಕ ಆಟಗಾರ ದೇವ್ ದತ್ ಪಡ್ಡಿಕಲ್ ಇದ್ದರು. 

ಕೋವಿಡ್ ಸಾಂಕ್ರಾಮಿಕದ ವೇಳೆ ಕೋವಿಡ್-19 ಹಿರೋಗಳು ಸಲ್ಲಿಸಿರುವ ಸೇವೆಗೆ ಮನುಕುಲ ಕೃತಜ್ಞರಾಗಿರಲಿದೆ. ಈ ಅಭಿಯಾನದ ಮೂಲಕ ಅವರ ಶ್ರಮವನ್ನು ಗೌರವಿಸುತ್ತಿದ್ದೇವೆ ಎಂದು ಚುರಿವಾಲ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com