ತಾಳ್ಮೆ ಕಳೆದುಕೊಂಡು ಸುಂದರ್‌ಗೆ ಕೆಟ್ಟ ಪದ ಬಳಸಿದ ರೋಹಿತ್ ಶರ್ಮಾ: ವಿಡಿಯೋ ನೋಡಿ ನೆಟ್ಟಿಗರ ಆಕ್ರೋಶ
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿದೆ. ಇನ್ನು ತಂಡ ಸೋಲಿನ ಸುಳಿಯಲ್ಲಿದ್ದಾಗ ಕ್ಯಾಚ್ ಬಿಟ್ಟ ವಾಷಿಂಗ್ಟನ್ ಸುಂದರ್ ಗೆ ನಾಯಕ ರೋಹಿತ್ ಶರ್ಮಾ ಕೆಟ್ಟ ಪದ ಬಳಸಿರುವುದು ಇದೀಗ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
Published: 04th December 2022 11:37 PM | Last Updated: 04th December 2022 11:42 PM | A+A A-

ರೋಹಿತ್ ಶರ್ಮಾ
ನವದೆಹಲಿ: ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿದೆ. ಇನ್ನು ತಂಡ ಸೋಲಿನ ಸುಳಿಯಲ್ಲಿದ್ದಾಗ ಕ್ಯಾಚ್ ಬಿಟ್ಟ ವಾಷಿಂಗ್ಟನ್ ಸುಂದರ್ ಗೆ ನಾಯಕ ರೋಹಿತ್ ಶರ್ಮಾ ಕೆಟ್ಟ ಪದ ಬಳಸಿರುವುದು ಇದೀಗ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಶೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಒಂದು ವಿಕೆಟ್ ಸೋಲು ಅನುಭವಿಸಿದೆ. ಭಾರತ ತಂಡದ ಬ್ಯಾಟಿಂಗ್ ವೈಫಲ್ಯ ಕಂಡ ಈ ಪಂದ್ಯದಲ್ಲಿ ಮತ್ತೊಂದೆಡೆ ಕಳಪೆ ಫೀಲ್ಡಿಂಗ್ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.
ಇದನ್ನೂ ಓದಿ: ಮೊದಲ ಏಕದಿನ ಪಂದ್ಯ: ಟೀಂ ಇಂಡಿಯಾ ವಿರುದ್ಧ 1 ವಿಕೆಟ್ನಿಂದ ರೋಚಕ ಗೆಲುವು ಕಂಡ ಬಾಂಗ್ಲಾದೇಶ
ಕೆಎಲ್ ರಾಹುಲ್, ವಾಷಿಂಗ್ಟನ್ ಸುಂದರ್ ಸೇರಿದಂತೆ ಹಲವು ಆಟಗಾರರ ಕಳಪೆ ಫೀಲ್ಡಿಂಗ್ ಕೂಡ ಪಂದ್ಯದಲ್ಲಿ ಕಂಡುಬಂತು. ಇದೇ ಕಾರಣಕ್ಕೆ ಒಂದು ಕಾಲದಲ್ಲಿ ಕಠಿಣ ಹೋರಾಟ ನೀಡುತ್ತಿದ್ದ ಟೀಂ ಇಂಡಿಯಾ ಸಣ್ಣಪುಟ್ಟ ತಪ್ಪುಗಳಿಂದಾಗಿ ಪಂದ್ಯ ಸೋತಿತ್ತು. ಕ್ಯಾಚ್‌ನ ಯತ್ನವನ್ನು ಮಾಡದ ನಂತರ ವಾಷಿಂಗ್ಟನ್ ಸುಂದರ್ ಅವರ ಕಳಪೆ ಫೀಲ್ಡಿಂಗ್ ನೋಡಿ ರೋಹಿತ್ ಶರ್ಮಾ ಆಘಾತಕ್ಕೊಳಗಾಗಿದ್ದರು. ಕ್ಯಾಪ್ಟನ್ ರೋಹಿತ್ ಕೋಪ ಎಷ್ಟರ ಮಟ್ಟಿಗೆ ಸ್ಫೋಟಗೊಂಡಿತೆಂದರೆ ವಾಷಿಂಗ್ಟನ್ ಬಗ್ಗೆ ಕೆಟ್ಟ ಪದ ಬಳಿಸಿದ್ದಾರೆ.
Shame on Rohit Sharma Abusing an Youngster , Feel for Washington Sundar#ViratKohli , #INDvsBAN , #INDvsBangladesh , Rohit , Siraj , Deepak Chahar , @BCCI , @ImRo45 pic.twitter.com/edX1mWzmgr
— Rɪsʜᴀʙʜ (@Pant_life) December 4, 2022
ಮೀರ್‌ಪುರ್ ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 186 ರನ್ ಗಳ ಅಲ್ಪಮೊತ್ತಕ್ಕೆ ಆಲೌಟ್ ಆಯಿತು. ಭಾರತ ನೀಡಿದ 187 ರನ್ ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಬಾಂಗ್ಲಾದೇಶ 9 ವಿಕೆಟ್ ನಷ್ಟಕ್ಕೆ 187 ರನ್ ಬಾರಿಸಿ ಗೆಲುವಿನ ನಗೆ ಬೀರಿತು.