Cricket: ಭ್ರಷ್ಟಾಚಾರ ಆರೋಪ, 6 ವರ್ಷ ನಿಷೇಧ ಹೇರಿದ ECB

ಭ್ರಷ್ಟಾಚಾರ-ವಿರೋಧಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಭ್ರಷ್ಟಾಚಾರ-ವಿರೋಧಿ ನ್ಯಾಯಮಂಡಳಿಯು ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿ ನಿಷೇಧ ಹೇರಿದೆ.
6 year ban for assistant coach
ಕ್ರಿಕೆಟ್ ಭ್ರಷ್ಟಾಚಾರ (ಸಾಂದರ್ಭಿಕ ಚಿತ್ರ)
Updated on: 

ದುಬೈ: ಅಬುಧಾಬಿ ಟಿ10 ಲೀಗ್ ಭ್ರಷ್ಟಾಚಾರದಲ್ಲಿ ಭಾಗಿಯಾದ ಆರೋಪದ ಮೇರೆಗೆ ಸಹಾಯಕ ಕೋಚ್‌ಗೆ ಆರು ವರ್ಷಗಳ ನಿಷೇಧ ಹೇರಲಾಗಿದೆ.

ಹೌದು.. ಅಬುಧಾಬಿ T10 ಲೀಗ್‌ನಲ್ಲಿ ಫ್ರಾಂಚೈಸಿಯಲ್ಲಿ ಮಾಜಿ ಸಹಾಯಕ ಕೋಚ್ ಆಗಿದ್ದ ಸನ್ನಿ ಧಿಲ್ಲೋನ್ ಭ್ರಷ್ಟಾಚಾರದಲ್ಲಿ ಭಾಗಿಯಾದ ಆರೋಪದ ಮೇರೆಗೆ ಬರೊಬ್ಬರಿ 6 ವರ್ಷಗಳ ಕಾಲ ನಿಷೇಧ ಹೇರಲಾಗಿದೆ.

ಭ್ರಷ್ಟಾಚಾರ-ವಿರೋಧಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಭ್ರಷ್ಟಾಚಾರ-ವಿರೋಧಿ ನ್ಯಾಯಮಂಡಳಿಯು ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿ ಅವರಿಗೆ ನಿಷೇಧ ಹೇರಿದೆ.

ಈ ನಿಷೇಧದ ಅವಧಿಯಲ್ಲಿ ಯಾವುದೇ ರೀತಿಯ ಕ್ರಿಕೆಟ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಸನ್ನಿ ಧಿಲ್ಲೋನ್ ಗೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

6 year ban for assistant coach
ಭಾರತಕ್ಕೆ ಪಾಕಿಸ್ತಾನ ಕ್ರಿಕೆಟ್ ತಂಡ ಪ್ರಯಾಣ ಬೇಡ, ಬಹಿಷ್ಕರಿಸಿ: PCBಗೆ ಶಾಹಿದ್ ಅಫ್ರಿದಿ ಒತ್ತಾಯ

ಮೂಲಗಳ ಪ್ರಕಾರ 2021ರ ಆವೃತ್ತಿಯ ಪಂದ್ಯಾವಳಿಯಲ್ಲಿ ಫಲಿತಾಂಶದ ಮೇಲೆ ಪರಿಣಾಮ ಬೀರಲು ಭ್ರಷ್ಟಾಚಾರ ಮಾಡಿದ್ದಕ್ಕಾಗಿ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ಆರು ವರ್ಷಗಳ ಕಾಲ ನಿಷೇಧ ಹೇರಲಾಗಿದೆ. ಸನ್ನಿ ಧಿಲ್ಲೋನ್ ಕಳೆದ ವರ್ಷ ಆರೋಪ ಹೊರಿಸಲಾದ ಎಂಟು ಜನರಲ್ಲಿ ಅವರು ಒಬ್ಬರಾಗಿದ್ದರು.

ಇದೀಗ ಈ ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದು, ಧಿಲ್ಲೋನ್ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಭ್ರಷ್ಟಾಚಾರ-ವಿರೋಧಿ ನಿಯಮ ಆರ್ಟಿಕಲ್ 2.1.1, ಆರ್ಟಿಕಲ್ 2.4.4 - DACO (ನಿಯೋಜಿತ ಭ್ರಷ್ಟಾಚಾರ-ವಿರೋಧಿ ಅಧಿಕಾರಿ), ಆರ್ಟಿಕಲ್ 2.4.6 ರ ಅಪರಾಧಿ ಎಂದು ತೀರ್ಮಾನಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com