1st Test: ಭಾರತ ತಂಡಕ್ಕೆ ಮಾರಕವಾಯ್ತಾ ಹೊಸ ಚೆಂಡು?; 62 ರನ್ ಅಂತರದಲ್ಲಿ 7 ವಿಕೆಟ್ ಪತನ!

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಭಾರತ ತಂಡಕ್ಕೆ ಹೊಸ ಚೆಂಡು ಮುಳುವಾಯಿತು ಎಂಬ ಚರ್ಚೆ ಆರಂಭವಾಗಿದೆ.
India vs New Zealand
ಅಬ್ಬರಿಸಿದ ನ್ಯೂಜಿಲೆಂಡ್ ಬೌಲರ್ ಗಳು
Updated on: 

ಬೆಂಗಳೂರು: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದ ಭಾರತ ತಂಡ ದಿಢೀರ್ ಕುಸಿದು, ಕೇವಲ 62 ರನ್ ಅಂತರದಲ್ಲಿ 7 ವಿಕೆಟ್ ಕಳೆದುಕೊಂಡಿತು. ಭಾರತ ತಂಡದ ಈ ದಿಢೀರ್ ಪತನಕ್ಕೆ ಹೊಸ ಚೆಂಡು ಕಾರಣ ಎನ್ನಲಾಗುತ್ತಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಭಾರತ ತಂಡಕ್ಕೆ ಹೊಸ ಚೆಂಡು ಮುಳುವಾಯಿತು ಎಂಬ ಚರ್ಚೆ ಆರಂಭವಾಗಿದ್ದು, ಅಷ್ಟು ಹೊತ್ತು ಭರ್ಜರಿಯಾಗಿ ಬ್ಯಾಟಿಂಗ್ ಮಾಡುತ್ತಿದ್ದ ಭಾರತ ತಂಡ ದಿಢೀರನೇ ಗೊಂದಲಕ್ಕೆ ಒಳಗಾಗಿ ಒಂದರ ಹಿಂದೆ ಒಂದರಂತೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು.

ಭಾರತದ ಇನ್ನಿಂಗ್ಸ್ ನ 81ನೇ ಓವರ್ ನಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಅಂಪೈರ್ ಗಳು ಹೊಸ ಚೆಂಡು ನೀಡಿದ ಬಳಿಕವೇ ಭಾರತದ ಪರವಾಗಿದ್ದ ಮೊಮೆಂಟ್ ನ್ಯೂಜಿಲೆಂಡ್ ಪರ ವಾಲಿತು ಎನ್ನಲಾಗಿದೆ.

ಆ ಹೊತ್ತಿಗಾಗಲೇ ಭಾರತ ಕೇವಲ 3 ವಿಕೆಟ್ ನಷ್ಟಕ್ಕೆ 400 ರನ್ ಸಿಡಿಸಿತ್ತು. 146 ರನ್ ಗಳಿಸಿದ್ದ ಸರ್ಫರಾಜ್ ಖಾನ್ ಮತ್ತು 87 ರನ್ ಸಿಡಿಸಿದ್ದ ರಿಷಬ್ ಪಂತ್ ಕ್ರೀಸ್ ನಲ್ಲಿದ್ದರು. ಆಗ ನ್ಯೂಜಿಲೆಂಡ್ ನ ಟಿಮ್ ಸೌಥಿ ಹೊಸ ಚೆಂಡಿನೊಂದಿಗೆ ದಾಳಿ ಆರಂಭಿಸಿದರು. ಆ ಓವರ್ ನಲ್ಲಿ ಭಾರತ ತಂಡ ಕೇವಲ 1 ರನ್ ಮಾತ್ರ ಕಲೆ ಹಾಕಿತು. ಅದಾಗಲೇ ಚೆಂಡು ಹೆಚ್ಚು ತಿರುವು ಪಡೆಯುತ್ತಿರುವುದು ನಂತರದ ಓವರ್ ನಲ್ಲೇ ಖಾತ್ರಿಯಾಗಿತ್ತು.

India vs New Zealand
1st test: 2ನೇ ಇನ್ನಿಂಗ್ಸ್ ನಲ್ಲಿ 462 ರನ್ ಚಚ್ಚಿದ ಭಾರತ; Rohit Sharma ಪಡೆಯ ಭರ್ಜರಿ 'ರನ್ ರೇಟ್', 34 ವರ್ಷಗಳ ದಾಖಲೆ ಪತನ!

ಮ್ಯಾಟ್ ಹೆನ್ರಿ ಎಸೆದ ಆ ಓವರ್ ನಲ್ಲೂ ಕೂಡ ಕೇವಲ 1 ರನ್ ದೊರೆಯಿತು. ಅದೂ ಕೂಡ ಬೈಸ್ ನಿಂದಾಗಿ. ಆಗಲೇ ಚೆಂಡು ತಿರುವು ಪಡೆಯುತ್ತಿರುವುದನ್ನು ಮನಗಂಡ ನ್ಯೂಜಿಲೆಂಡ್ ಬೌಲರ್ ಗಳು ಕ್ರಮೇಣ ಭಾರತದ ಮೇಲೆ ಒತ್ತಡ ಹೇರಲು ಪ್ರಯತ್ನಿಸಿ ಅದರಲ್ಲಿ ಯಶಸ್ವಿ ಕೂಡ ಆದರು. ಸರ್ಫರಾಜ್ ಖಾನ್ 150 ರನ್ ಗಳಿಸಿ ಟಿಮ್ ಸೌಥಿ ಬೌಲಿಂಗ್ ನಲ್ಲಿ ಔಟಾದರೆ, ಅವರ ಹಿಂದೆಯೇ ವಿಲಿಯಂ ಓ ರೌರ್ಕಿ ಬೌಲಿಂಗ್ ನಲ್ಲಿ 99ರನ್ ಗಳಿಸಿದ್ದ ಪಂತ್ ಕೂಡ ಔಟಾಗಿ ಹೊರ ನಡೆದರು.

ಮೊದಲ ಬಾಲ್ ನಲ್ಲಿ 400 ರನ್, 2ನೇ ಚೆಂಡಿನಲ್ಲಿ ಕೇವಲ 62 ರನ್, 7 ವಿಕೆಟ್ ಪತನ

ಭಾರತ ತಂಡ ಎದುರಿಸಿದ ಮೊದಲ ಚೆಂಡಿನಲ್ಲಿ ಒಟ್ಟು 80 ಓವರ್ ಗಳನ್ನು ಆಡಲಾಯಿತು. ಆಗ ಭಾರತ ತಂಡ ಬರೊಬ್ಬರಿ 5ರ ಸರಾಸರಿಯಲ್ಲಿ 400 ರನ್ ಕಲೆ ಹಾಕಿ ಕೇವಲ 3 ವಿಕೆಟ್ ಮಾತ್ರ ಕಳೆದುಕೊಂಡಿತ್ತು. ಆದರೆ 81ನೇ ಓವರ್ ನಲ್ಲಿ ಹೊಸ SG cherry ಚೆಂಡು ಬಂದ ಬಳಿಕ ಕೇವಲ 19 ಓವರ್ ನಲ್ಲಿ ಕೇವಲ 3.18 ಸರಾಸರಿ ರನ್ ರೇಟ್ ನಲ್ಲಿ 62 ರನ್ ಗಳಿಸಿ 7 ವಿಕೆಟ್ ಕಳೆದುಕೊಂಡಿತು. ಈ ಅಂಕಿ ಅಂಶಗಳೇ ಭಾರತಕ್ಕೆ ಹೊಸ ಚೆಂಡು ಮಾರಕವಾಯಿತು ಎಂದು ಹೇಳಲಾಗುತ್ತಿದೆ.

India’s innings

  • First new ball (Overs 1-80): 400/3 (RR: 5)

  • Second new-ball (Overs 81-99.3): 62/7 (RR: 3.18)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com