ಟೂರ್ನಿಯಿಂದ ವನಿಂದು ಹಸರಂಗ ಔಟ್; ಗೆಲುವಿನ ಖುಷಿಯಲ್ಲಿದ್ದ LSGಗೆ ಸಂಕಷ್ಟ, ಶೀಘ್ರದಲ್ಲೇ ಹೊಸ ಆಟಗಾರನ ಘೋಷಣೆ!

ಈವರೆಗೂ ಐಪಿಎಲ್‌ನಲ್ಲಿ ಆಡಿಲ್ಲದ ದಕ್ಷಿಣ ಆಫ್ರಿಕಾದ ಎಡಗೈ ಸ್ಪಿನ್ನರ್ ಜಾರ್ಜ್ ಲಿಂಡೆ ಅವರನ್ನು ಅನುಭವಿ ಆಲ್‌ರೌಂಡರ್ ಹಸರಂಗ ಅವರ ಬದಲಿ ಆಟಗಾರನಾಗಿ ಹೆಸರಿಸುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.
Wanindu Hasaranga ruled out of IPL 2026, LSG to name replacement soon
ವನಿಂದು ಹಸರಂಗ
Updated on

ಶ್ರೀಲಂಕಾದ ಸ್ಟಾರ್ ಆಲ್‌ರೌಂಡರ್ ವನಿಂದು ಹಸರಂಗ ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆವೃತ್ತಿಯಿಂದಲೇ ಹೊರಗುಳಿದಿದ್ದು, ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಹಿನ್ನಡೆಯಾಗಿದೆ. ಫ್ರಾಂಚೈಸಿ ಮುಂಬರುವ ದಿನಗಳಲ್ಲಿ ಬದಲಿ ಆಟಗಾರನನ್ನು ಘೋಷಿಸಲಿದೆ ಎಂದು ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿ ಮಾಡಿದೆ. ಗುರುವಾರ ಈಡನ್ ಗಾರ್ಡನ್ಸ್‌ನಲ್ಲಿ ಮೂರು ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧದ ಪಂದ್ಯದ ಸಂದರ್ಭದಲ್ಲಿ ಎಲ್‌ಎಸ್‌ಜಿ ಕ್ರಿಕೆಟ್ ನಿರ್ದೇಶಕ ಟಾಮ್ ಮೂಡಿ ಈ ಬೆಳವಣಿಗೆಯನ್ನು ದೃಢಪಡಿಸಿದರು. ವರದಿ ಪ್ರಕಾರ, 'ಮುಂದಿನ 24 ರಿಂದ 48 ಗಂಟೆಗಳಲ್ಲಿ' ಬದಲಿ ಆಟಗಾರನನ್ನು ಹೆಸರಿಸುವುದಾಗಿ ಮೂಡಿ ಹೇಳಿದ್ದಾರೆ.

ಈವರೆಗೂ ಐಪಿಎಲ್‌ನಲ್ಲಿ ಆಡಿಲ್ಲದ ದಕ್ಷಿಣ ಆಫ್ರಿಕಾದ ಎಡಗೈ ಸ್ಪಿನ್ನರ್ ಜಾರ್ಜ್ ಲಿಂಡೆ ಅವರನ್ನು ಅನುಭವಿ ಆಲ್‌ರೌಂಡರ್ ಹಸರಂಗ ಅವರ ಬದಲಿ ಆಟಗಾರನಾಗಿ ಹೆಸರಿಸುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.

'ಅವರು ನಮ್ಮೊಂದಿಗೆ ಸೇರಲು ಸಾಧ್ಯವಾಗುವುದಿಲ್ಲ ಎಂಬ ಅಂಶಕ್ಕೆ ನಾವು ಸಿದ್ಧತೆ ನಡೆಸುತ್ತಿದ್ದೇವೆ. ನಾವು 24-48 ಗಂಟೆಗಳಲ್ಲಿ ಘೋಷಿಸಬೇಕಾದ ಬದಲಿ ಆಟಗಾರರನ್ನು ನೋಡುತ್ತಿದ್ದೇವೆ' ಎಂದು ಗುರುವಾರ ಕೋಲ್ಕತ್ತಾದಲ್ಲಿ ಕೆಕೆಆರ್ ವಿರುದ್ಧದ ಎಲ್‌ಎಸ್‌ಜಿ ಪಂದ್ಯದ ಸಂದರ್ಭದಲ್ಲಿ ಮೂಡಿ ಹೇಳಿದರು ಎಂದು ಇಎಸ್‌ಪಿಎನ್‌ಕ್ರಿಕ್ಇನ್ಫೋ ಉಲ್ಲೇಖಿಸಿದೆ.

Wanindu Hasaranga ruled out of IPL 2026, LSG to name replacement soon
IPL 2026: SRH ವಿರುದ್ಧದ ಪಂದ್ಯಕ್ಕೂ ಮುನ್ನ ಕೊನೇ ಕ್ಷಣದಲ್ಲಿ RCBಗೆ ದೊಡ್ಡ ಹೊಡೆತ; ವಿದೇಶಿ ಆಟಗಾರನಿಗೆ ಸಿಗದ NOC!

ಭಾರತ ಮತ್ತು ಶ್ರೀಲಂಕಾದಲ್ಲಿ ನಡೆದ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾದ ಆರಂಭಿಕ ಪಂದ್ಯದ ಸಮಯದಲ್ಲಿ ಗಾಯಗೊಂಡ ನಂತರ ಫೆಬ್ರುವರಿಯಿಂದ ಹಸರಂಗ ಆಟದಿಂದ ಹೊರಗುಳಿದಿದ್ದಾರೆ. ಈ ಹಿಂದೆ, ಅನುಭವಿ ಆಲ್‌ರೌಂಡರ್ ಶ್ರೀಲಂಕಾ ಕ್ರಿಕೆಟ್‌ನ ಸೂಚನೆಗೆ ಅನುಗುಣವಾಗಿ ಕಡ್ಡಾಯ ಫಿಟ್‌ನೆಸ್ ಪರೀಕ್ಷೆಗಳನ್ನು ತೆಗೆದುಕೊಂಡಿಲ್ಲ ಎಂದು ವರದಿಯಾಗಿತ್ತು. ಇದು ಐಪಿಎಲ್‌ಗೆ ಸೇರಲು ಎನ್‌ಒಸಿ ಪಡೆಯಲು ಅಗತ್ಯವಾಗಿತ್ತು.

ಕಳೆದ ಹರಾಜಿನಲ್ಲಿ LSG ತಂಡವು ಹಸರಂಗ ಅವರನ್ನು ₹2 ಕೋಟಿಗೆ ಖರೀದಿಸಿತ್ತು. ಆದರೆ, ಗಾಯದ ನಂತರ ಅವರು ತಮ್ಮ ತಂಡವನ್ನು ಸೇರಲು ಸಾಧ್ಯವಾಗಿಲ್ಲ. ಹಸರಂಗ ಕಳೆದ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ (RR) ಮತ್ತು 2021ರಿಂದ 2023ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದಲ್ಲಿದ್ದರು.

ಈಡನ್ ಗಾರ್ಡನ್ಸ್‌ನಲ್ಲಿ ನಡೆದ ರೋಮಾಂಚಕ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮೂರು ವಿಕೆಟ್‌ಗಳಿಂದ ಸೋಲಿಸಿದೆ. ಕೆಕೆಆರ್ ನೀಡಿದ್ದ 182 ರನ್‌ಗಳನ್ನು ಯಶಸ್ವಿಯಾಗಿ ಬೆನ್ನಟ್ಟಲು ಆಯುಷ್ ಬದೋನಿ (54) ಮತ್ತು ಮುಕುಲ್ ಚೌಧರಿ (54*) ಅವರ ಅರ್ಧಶತಕಗಳು ನೆರವಾಯಿತು. ಅಂತಿಮ ಓವರ್‌ನಲ್ಲಿ ಚೌಧರಿ ಅವರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತಂಡದ ಗೆಲುವನ್ನು ಖಚಿತಪಡಿಸಿತು.

Wanindu Hasaranga ruled out of IPL 2026, LSG to name replacement soon
ಸೋಲಿನಿಂದ ಕಂಗೆಟ್ಟಿರುವ KKRಗೆ ಮತ್ತೊಂದು ಸಂಕಷ್ಟ; ಪ್ರಮುಖ ವೇಗಿಗೆ ಸಿಗದ NOC; ಗಾಯದ ಮೇಲೆ ಬರೆ ಎಳೆದ ನಿಯಮ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com