'ನ್ಯಾಯಾಲಯದ ಮೊರೆಹೋಗಬಹುದು': ಭಾರತ ವಿರುದ್ಧದ ಪಂದ್ಯ ಬಹಿಷ್ಕರಿಸಿದರೆ PCBಗೆ ಹಲವು ಸಂಕಷ್ಟ!

ಭಾರತ ಮತ್ತು ಪಾಕಿಸ್ತಾನ ಪಂದ್ಯಗಳನ್ನು ಒಳಗೊಂಡಂತೆ ಐಸಿಸಿಯೊಂದಿಗೆ 4 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿರುವುದರಿಂದ ಪಾಕಿಸ್ತಾನವನ್ನು ನ್ಯಾಯಾಲಯಕ್ಕೆ ಎಳೆಯಲು ಪ್ರಸಾರಕರು ಹಕ್ಕನ್ನು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
Salman Ali Agha - Suryakumar Yadav
ಪಾಕ್ ನಾಯಕ ಸಲ್ಮಾನ್ ಅಲಿ ಅಘಾ- ಭಾರತ ತಂಡದ ನಾಯಕ ಸೂರ್ಯ ಕುಮಾರ್ ಯಾದವ್
Updated on

ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (PCB) ಭಾರತ vs ಪಾಕಿಸ್ತಾನದ ಪಂದ್ಯವನ್ನು ಬಹಿಷ್ಕರಿಸಿದರೆ 2026ರ ಟಿ20 ವಿಶ್ವಕಪ್ ಪ್ರಸಾರಕರಿಂದ ಕಾನೂನು ಮೊಕದ್ದಮೆಗಳನ್ನು ಎದುರಿಸಬೇಕಾಗುತ್ತದೆ. ಬಾಂಗ್ಲಾದೇಶಕ್ಕೆ ಬೆಂಬಲ ವ್ಯಕ್ತಪಡಿಸಿರುವ ಪಿಸಿಬಿ ಭಾರತ ವಿರುದ್ಧದ ಹೈ-ಆಕ್ಟೇನ್ ಘರ್ಷಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದೆ. ಆದಾಗ್ಯೂ, ಈ ಬಗ್ಗೆ ಐಸಿಸಿಗೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಒಂದು ವೇಳೆ ಅವರು ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದ್ದೇ ಆದರೆ, ಪಾಕಿಸ್ತಾನವು ಆರ್ಥಿಕ ದಂಡವನ್ನು ಸಹ ಎದುರಿಸಬೇಕಾಗುತ್ತದೆ ಮಾತ್ರವಲ್ಲದೆ ಇತರ ಸಮಸ್ಯೆಗಳಿಗೂ ಸಿಲುಕಬಹುದು.

ಸುದ್ದಿಸಂಸ್ಥೆ ಪಿಟಿಐ ಪ್ರಕಾರ, ಫೆಬ್ರುವರಿ 15 ರಂದು ಕೊಲಂಬೊದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಬಹಿಷ್ಕರಿಸಲು ಪಾಕಿಸ್ತಾನ ನಿರ್ಧರಿಸಿದರೆ ಪಂದ್ಯಾವಳಿಯ ಪ್ರಸಾರಕರಿಂದ ಮೊಕದ್ದಮೆಗಳನ್ನು ಎದುರಿಸಬೇಕಾಗುತ್ತದೆ ಎಂದು ಪಿಸಿಬಿ ಮೂಲವೊಂದು ಹೇಳಿದೆ. ಹಣಕಾಸಿನ ದಂಡ ಮತ್ತು ಮೊಕದ್ದಮೆಯ ಜೊತೆಗೆ, ಐಸಿಸಿಯ ವಿವಾದ ಪರಿಹಾರ ಸಮಿತಿಗೆ ಹೋಗುವ ಮಂಡಳಿಯ ಪ್ರಯತ್ನಗಳು ಸಹ ವಿಫಲವಾಗುತ್ತವೆ ಎಂದು ಮೂಲಗಳು ಹೇಳಿವೆ.

ಭಾರತ ಮತ್ತು ಪಾಕಿಸ್ತಾನ ಪಂದ್ಯಗಳನ್ನು ಒಳಗೊಂಡಂತೆ ಐಸಿಸಿಯೊಂದಿಗೆ 4 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿರುವುದರಿಂದ ಪಾಕಿಸ್ತಾನವನ್ನು ನ್ಯಾಯಾಲಯಕ್ಕೆ ಎಳೆಯಲು ಪ್ರಸಾರಕರು ಹಕ್ಕನ್ನು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

Salman Ali Agha - Suryakumar Yadav
T20 ವಿಶ್ವಕಪ್ ನಲ್ಲಿ ಪಾಕಿಸ್ತಾನ ಒಂದು ಪಂದ್ಯ ಆಡದಿರಬಹುದೇ? ICC ನಿಯಮ ಏನು? ಆಗುವ ನಷ್ಟ ಎಷ್ಟು!

'ಪಾಕಿಸ್ತಾನವು ಭಾರತದ ವಿರುದ್ಧ ಆಡದಿದ್ದರೆ, ಅವರು ಹಣಕಾಸಿನ ದಂಡವನ್ನು ಎದುರಿಸಬೇಕಾಗುತ್ತದೆ. ಬಹುಶಃ ಪ್ರಸಾರಕರು ಮೊಕದ್ದಮೆ ಹೂಡಬಹುದು, ಜೊತೆಗೆ ಐಸಿಸಿ ವಿವಾದ ಪರಿಹಾರ ಸಮಿತಿ (ಡಿಆರ್‌ಸಿ)ಗೆ ಹೋಗುವ ಯಾವುದೇ ಪ್ರಯತ್ನಗಳು ವಿಫಲಗೊಳ್ಳುವ ಸಾಧ್ಯತೆಯಿದೆ. ಎಲ್ಲ ಐಸಿಸಿ ಕಾರ್ಯಕ್ರಮಗಳಿಗೆ ಪ್ರಸಾರಕರೊಂದಿಗೆ ನಾಲ್ಕು ವರ್ಷಗಳ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಇದರಲ್ಲಿ ಪಾಕಿಸ್ತಾನ ಮತ್ತು ಭಾರತ ಪಂದ್ಯಗಳು ಸೇರಿವೆ. ಅದರ ಆಧಾರದ ಮೇಲೆ ಪ್ರಸಾರಕರು ಐಸಿಸಿಗೆ ಪಾವತಿಸಿರುತ್ತಾರೆ. ಆದ್ದರಿಂದ ಒಪ್ಪಂದದ ಪ್ರಮುಖ ಉಲ್ಲಂಘನೆಗಾಗಿ ಪಿಸಿಬಿ ಮತ್ತು ಐಸಿಸಿಯನ್ನು ನ್ಯಾಯಾಲಯಕ್ಕೆ ಕೊಂಡೊಯ್ಯುವ ಹಕ್ಕು ಪ್ರಸಾರಕರಿಗೆ ಇರುತ್ತದೆ' ಎಂದು ಪಿಸಿಬಿ ಮೂಲವೊಂದು ತಿಳಿಸಿದೆ.

ದಿ ಏಜ್ ಪ್ರಕಾರ, 2023 ರಿಂದ 2027 ರವರೆಗಿನ ಪುರುಷರ ಐಸಿಸಿ ಕಾರ್ಯಕ್ರಮಗಳ ಪ್ರಸಾರ ಹಕ್ಕುಗಳ ಚಕ್ರವು 3 ಬಿಲಿಯನ್ ಯುಎಸ್ ಡಾಲರ್ (ಸರಿಸುಮಾರು ₹27,465 ಕೋಟಿ) ಮೌಲ್ಯದ್ದಾಗಿದೆ. ಈ ಪ್ರಸಾರ ಹಣದ ಶೇ 40 ಕ್ಕಿಂತ ಹೆಚ್ಚು ಭಾರತ ಮತ್ತು ಪಾಕಿಸ್ತಾನ ಪಂದ್ಯಗಳಿಂದಲೇ ಬರುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com