T20 World Cup: ಆಸೀಸ್‌ಗೆ ಗೆಲುವಿನ ವಿದಾಯ; ಓಮನ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ

ಇಂದು ಕ್ಯಾಂಡಿಯಲ್ಲಿ ನಡೆದ ಟಿ20 ವಿಶ್ವಕಪ್‌ನ ಲೀಗ್‌ ಹಂತದ ಅಂತಿಮ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಒಮಾನ್, ಕೇವಲ 104 ರನ್ ಗಳಿಗೆ ಆಲೌಟ್ ಅಯಿತು.
T20 World Cup: Australia crush Oman by 9 wickets, sign off in style
ಆಸೀಸ್‌ ಆಟಗಾರರು
Updated on

ಪಲ್ಲೆಕೆಲೆ: 17 ವರ್ಷಗಳ ನಂತರ ಈಗಾಗಲೇ ಟಿ20 ವಿಶ್ವಕಪ್‌ ಲೀಗ್ ಹಂತದಿಂದ ಹೊರ ನಡೆದಿರುವ ಬಲಿಷ್ಠ ಆಸ್ಟ್ರೇಲಿಯಾ ತಂಡ ಶುಕ್ರವಾರ ತನ್ನ ಲೀಗ್‌ನ ಕೊನೆಯ ಪಂದ್ಯದಲ್ಲಿ ಓಮನ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವಿನೊಂದಿಗೆ ವಿದಾಯ ಹೇಳಿದೆ.

ಇಂದು ಕ್ಯಾಂಡಿಯ ಪಲ್ಲೆಕೆಲೆಯಲ್ಲಿ ನಡೆದ ಟಿ20 ವಿಶ್ವಕಪ್‌ನ ಲೀಗ್‌ ಹಂತದ ಅಂತಿಮ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಒಮಾನ್, ಕೇವಲ 104 ರನ್ ಗಳಿಗೆ ಆಲೌಟ್ ಅಯಿತು.

ಗೆಲುವಿಗೆ 105 ರನ್ ಗಳ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಆಸ್ಟ್ರೇಲಿಯಾ, ತಂಡದ ನಾಯಕ ಮಿಚೆಲ್ ಮಾರ್ಷ್ ಅವರ ಭರ್ಜರಿ ಅರ್ಧ ಶತಕ(64)ದ ನೆರವಿನಿಂದ ಕೇವಲ 9.4 ಓವರ್​ಗಳಲ್ಲಿ ಗೆದ್ದು ಬೀಗಿತು.

T20 World Cup: Australia crush Oman by 9 wickets, sign off in style
T20 World Cup: Super 8 ಪ್ರವೇಶಿಸಿ ಜಿಂಬಾಬ್ವೆ ಇತಿಹಾಸ ಸೃಷ್ಟಿ; 17 ವರ್ಷಗಳ ನಂತರ Australia ಟೂರ್ನಿನಿಂದ ಔಟ್!

ಆಸ್ಟ್ರೇಲಿಯಾ 105 ರನ್‌ಗಳ ಸಾಧಾರಣ ಗುರಿಯನ್ನು ಇನ್ನೂ 62 ಎಸೆತಗಳು ಬಾಕಿ ಇರುವಾಗಲೇ ತಲುಪಿತು, 9.4 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 108 ರನ್ ಗಳಿಸಿತು.

ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಆಸ್ಟ್ರೇಲಿಯಾ ಆಡಿದ 4 ಪಂದ್ಯಗಳಲ್ಲಿ 2 ಪಂದ್ಯಗಳಲ್ಲಿ ಗೆಲುವು, 2 ಸೋಲು ಕಂಡಿದ್ದು, 4 ಅಂಕವನ್ನು ಕಲೆ ಹಾಕಿ ಮೂರನೇ ಸ್ಥಾನ ಪಡೆದಿದೆ.

ಸೂಪರ್ 8 ಹಂತಕ್ಕೆ ಅರ್ಹತೆ ಪಡೆಯಲು ತಂಡಗಳು ತಮ್ಮ ತಮ್ಮ ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆಯುವುದು ಅನಿವಾರ್ಯವಾಗಿತ್ತು. ಬಿ ಗುಂಪಿನಲ್ಲಿ ಜಿಂಬಾಬ್ವೆ ಹಾಗೂ ಶ್ರೀಲಂಕಾ ತಂಡಗಳು ಮುಂದಿನ ಹಂತಕ್ಕೆ ಪ್ರವೇಶ ಪಡೆದಿವೆ. ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ಪ್ರಯಾಣ ಲೀಗ್‌ ಹಂತಕ್ಕೆ ಮುಕ್ತಾಯವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com