

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಿಂಗ್, ಕೊಹ್ಲಿಯ ಹೊಸದಾದ ಹೇರ್ ಸ್ಟೈಲ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಹೊಸ ಪ್ಯಾಸ್ಟೆಲ್ ಹೇರ್ ಕಲರ್ ಪ್ರಯೋಗಿಸಿದ್ದಾರೆ. RCB ಐಪಿಎಲ್ ಚಾಂಪಿಯನ್ ಆದ ಒಂದು ವಾರದ ನಂತರ ಕೊಹ್ಲಿ ಈ ರೀತಿಯ ಕೇಶ ವಿನ್ಯಾಸ ಮಾಡಿಸಿಕೊಂಡಿದ್ದು, ಲುಕ್ ಆಕರ್ಷಕವಾಗಿದೆ.
ಕೊಹ್ಲಿ ಅವರ ಹೊಸ ಲುಕ್ ನ್ನು ಸೆಲೆಬ್ರಿಟಿ ಕೇಶ ವಿನ್ಯಾಸಕ ರಶೀದ್ ಸಲ್ಮಾನಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಿಂಗ್ ಕೊಹ್ಲಿ ಈಗ ಪ್ಯಾಸ್ಟೆಲ್‌ನಲ್ಲಿ ಎಂದು ಕೊಹ್ಲಿ ಸೆಲ್ಫಿ ವೀಡಿಯೊವನ್ನು ಪೋಸ್ಟ್ ಮಾಡಿ ಬರೆದುಕೊಂಡಿದ್ದಾರೆ.
ಮಂಡಿರಜ್ಜು ಗಾಯದ ಸಮಸ್ಯೆಯಿಂದ ಇನ್ನೂ ಚೇತರಿಸಿಕೊಳ್ಳದ ಕೊಹ್ಲಿ, ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಅವರ ಜಾಗಕ್ಕೆ ಯಶಸ್ವಿ ಜೈಸ್ವಾಲ್ ಅವರನ್ನು ಆಯ್ಕೆದಾರರು ನೇಮಕ ಮಾಡಿದ್ದಾರೆ.
ಜೂನ್ 13, 17 ಮತ್ತು 20 ರಂದು ಕ್ರಮವಾಗಿ ಧರ್ಮಶಾಲಾ, ಲಖನೌ ಮತ್ತು ಚೆನ್ನೈನಲ್ಲಿ ಮೂರು ಏಕದಿನ ಪಂದ್ಯಗಳು ನಡೆಯಲಿವೆ.
ಟೆಸ್ಟ್ ಮತ್ತು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿದ ನಿವೃತ್ತರಾದ ನಂತರ ಕೊಹ್ಲಿ ಇತ್ತೀಚೆಗೆ ಅಹಮದಾಬಾದ್‌ನಲ್ಲಿ ನಡೆದ ಆರ್ ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್ ಫೈನಲ್‌ನಲ್ಲಿ ಗಾಯದ ಸಮಸ್ಯೆಯಲ್ಲೂ ಅಜೇಯ 75 ರನ್ ಗಳಿಸುವ ಮೂಲಕ ಸತತ ಎರಡನೇ ಬಾರಿಗೆ ಆರ್ ಸಿಬಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
Advertisement