IPL 2026: ಗುಜರಾತ್ ಟೈಟಾನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ರೋಚಕ ಗೆಲುವು

ಇಂದು ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್, ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
IPL 2026: Cooper Connolly Slams Fifty On Debut, Punjab Kings Win by 3 wicket
ಪಂಜಾಬ್ ಕಿಂಗ್ಸ್ ಆಟಗಾರರು
Updated on

ಚಂಡೀಗಢ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ 19ನೇ ಸೀಸನ್​ನ ನಾಲ್ಕನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್(PBKS) ತಂಡ ಮಂಗಳವಾರ ಗುಜರಾತ್ ಟೈಟಾನ್ಸ್(GT) ವಿರುದ್ಧ 8 ವಿಕೆಟ್ ಗಳ ರೋಚ ಗೆಲುವು ಸಾಧಿಸಿದೆ.

ಇಂದು ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್, ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲ ಬ್ಯಾಟಿಂಗ್‌ ಮಾಡಿದ ಗುಜರಾತ್ ಟೈಟಾನ್ಸ್ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 163 ರನ್​ಗಳ ಸಾಧಾರಣ ಮೊತ್ತ ಕಲೆಹಾಕಿತು.

ಆರಂಭಿಕ ಆಘಾತ ಎದುರಿಸಿದ ಗುಜರಾತ್ ತಂಡ, ಸಾಯಿ ಸುದರ್ಶನ್ ಅವರು ಕೇವಲ 13 ರನ್ ಗಳಿಸಿ ಔಟಾದರು. ನಂತರ ಜೊತೆಯಾದ ಶುಭಮನ್ ಗಿಲ್ 39 ಹಾಗೂ ಜೋಸ್ ಬಟ್ಲರ್ 38 ರನ್ ಗಳಿಸಿದರು. ನಂತರ ಬಂದ ಗ್ಲೆನ್ ಫಿಲಿಪ್ಸ್ 25 ರನ್ ಸಿಡಿಸಿ ಔಟ್ ಆದರು.

IPL 2026: Cooper Connolly Slams Fifty On Debut, Punjab Kings Win by 3 wicket
IPL 2026: ರೋಹಿತ್, ರಿಕಲ್ಟನ್ ಅಬ್ಬರದ ಬ್ಯಾಟಿಂಗ್; KKR ವಿರುದ್ಧ ಮುಂಬೈಗೆ ಭರ್ಜರಿ ಗೆಲುವು

ಗೆಲುವಿಗೆ 163 ರನ್ ಗಳ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್, ಕೂಪರ್ ಕೊನೊಲಿ ಅವರ ಭರ್ಜರಿ ಅರ್ಧ ಶತಕ(72)ದ ನೆರವಿನಿಂದ ಗುಜರಾತ್ ಟೈಟಾನ್ಸ್ ವಿರುದ್ಧ 19.1 ಓವರ್ ಗಳಲ್ಲಿ 165 ರನ್ ಗಳಿಸುವ ಮೂಲಕ ಮೂರು ವಿಕೆಟ್ ಗಳ ರೋಚಕ ಗೆಲುವು ಸಾಧಿಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com