'ಇದನ್ನೆಲ್ಲ ಖಾಸಗಿಯಾಗಿಟ್ಟುಕೊಳ್ಳಿ, ಹೆಚ್ಚಿನ ಜವಾಬ್ದಾರಿ ನಿಮ್ಮ ಮೇಲಿದೆ': ರಿಯಾನ್ ಪರಾಗ್‌ಗೆ ಆರ್ ಅಶ್ವಿನ್ ಸಲಹೆ

ಅಸ್ಸಾಂ ಮೂಲದ ಆಟಗಾರ ಪರಾಗ್‌ಗೆ ತಮ್ಮ ಪಂದ್ಯ ಶುಲ್ಕದ ಶೇ 25ರಷ್ಟು ದಂಡ ವಿಧಿಸಲಾಗಿದ್ದರೂ, ಟೀಂ ಇಂಡಿಯಾದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಸೇರಿದಂತೆ ಹಲವಾರು ಮಾಜಿ ಆಟಗಾರು ಈ ಬಗ್ಗೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
Riyan Parag
ರಿಯಾನ್ ಪರಾಗ್
Updated on

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ನೇ ಆವೃತ್ತಿಯ ಮೊದಲ ನಾಲ್ಕು ಸ್ಥಾನಗಳಿಗಾಗಿ ತಂಡಗಳು ಇದೀಗ ಹೋರಾಟದಲ್ಲಿ ತೊಡಗಿದ್ದು, ಪಂದ್ಯಾವಳಿಯು ಹಲವಾರು ವಿವಾದಗಳಿಂದ ಕೂಡಿದೆ. ರಾಜಸ್ಥಾನ ರಾಯಲ್ಸ್ (ಆರ್‌ಆರ್) ಫ್ರಾಂಚೈಸಿಯ ಮ್ಯಾನೇಜರ್ ರೋಮಿ ಭಿಂದರ್ ಡಗೌಟ್‌ನಲ್ಲಿ ತಮ್ಮ ಸೆಲ್‌ಫೋನ್ ಬಳಸುತ್ತಿರುವುದು ಮತ್ತು ಆರ್‌ಆರ್ ನಾಯಕ ರಿಯಾನ್ ಪರಾಗ್ ಡ್ರೆಸ್ಸಿಂಗ್ ಕೋಣೆಯೊಳಗೆ ವೇಪ್ ಬಳಸಿದ್ದು ಸೇರಿದಂತೆ ವಿವಾದಗಳ ಸುತ್ತ ಸಾಕಷ್ಟು ಚರ್ಚೆಯಾಗುತ್ತಿದೆ.

ಆಟಗಾರನೊಬ್ಬ ಡ್ರೆಸ್ಸಿಂಗ್ ಕೋಣೆಯಲ್ಲಿ ವೇಪ್ ಬಳಸುತ್ತಿರುವುದು ಇದೇ ಮೊದಲಲ್ಲದಿದ್ದರೂ, ಕ್ರಿಕೆಟ್ ಶಿಷ್ಟಾಚಾರಗಳನ್ನು ಉಲ್ಲಂಘಿಸಿದ್ದಕ್ಕಾಗಿ ಚರ್ಚೆಗೆ ಗ್ರಾಸವಾಗಿತು. ಇದಕ್ಕಾಗಿ ಅಸ್ಸಾಂ ಮೂಲದ ಆಟಗಾರ ಪರಾಗ್‌ಗೆ ತಮ್ಮ ಪಂದ್ಯ ಶುಲ್ಕದ ಶೇ 25ರಷ್ಟು ದಂಡ ವಿಧಿಸಲಾಗಿದ್ದರೂ, ಟೀಂ ಇಂಡಿಯಾದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಸೇರಿದಂತೆ ಹಲವಾರು ಮಾಜಿ ಆಟಗಾರು ಈ ಬಗ್ಗೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅಶ್ವಿನ್, 'ಇದು ಸಂಪೂರ್ಣವಾಗಿ ತಪ್ಪಿಸಬಹುದಾಗಿದ್ದ ಪರಿಸ್ಥಿತಿ ಎಂದು ನಾನು ಭಾವಿಸುತ್ತೇನೆ. ಆಟಗಾರರು ಅಂತಹ ವಿಷಯಗಳಲ್ಲಿ ಸಿಲುಕಿಕೊಳ್ಳಬಾರದು ಎಂದು ನಾನು ಬಯಸುತ್ತೇನೆ. ಯುವ ಆಟಗಾರ ಅದರಲ್ಲಿ ಸಿಲುಕಿಕೊಳ್ಳುವುದನ್ನು ನಾನು ನಿಜವಾಗಿಯೂ ಅದನ್ನು ಬಯಸುವುದಿಲ್ಲ ಮತ್ತು ಇದು ಸ್ವಲ್ಪ ಸೂಕ್ಷ್ಮವೂ ಆಗಿದೆ. ಎಲ್ಲ ಕ್ವಾಡ್ರಾಂಟ್‌ಗಳಲ್ಲಿ, ನಾವು ಅನೇಕ ವಿಷಯಗಳನ್ನು ನೋಡಿದರೆ, ಇದನ್ನು ತಪ್ಪಿಸಬಹುದಿತ್ತು ಎಂದು ನಾನು ಭಾವಿಸುತ್ತೇನೆ' ಎಂದಿದ್ದಾರೆ.

'ಇಂತಹ ಘಟನೆಗಳನ್ನು ಸುಮ್ಮನೆ ಪಕ್ಕಕ್ಕೆ ತಳ್ಳಬಾರದು ಮತ್ತು ಕಠಿಣ ಕ್ರಮ ಕೈಗೊಳ್ಳಬೇಕು. ಕೆಲವೊಮ್ಮೆ ಏನಾಗುತ್ತದೆಯೋ ಅದು ವೈಯಕ್ತಿಕ ಆಯ್ಕೆಯಾಗಿರುತ್ತದೆ. ಆದರೆ, ನಿಮ್ಮ ವೈಯಕ್ತಿಕ ಆಯ್ಕೆಯು ನಿಮ್ಮ ವೈಯಕ್ತಿಕ ಜಾಗದಲ್ಲಿರಬೇಕು. ನೀವು ಇದನ್ನೆಲ್ಲ ಸಾರ್ವಜನಿಕ ಸ್ಥಳದಲ್ಲಿ ಮಾಡುವುದನ್ನು ತಪ್ಪಿಸಬಹುದು' ಎಂದರು.

'ನಿಮ್ಮ ವೈಯಕ್ತಿಕ ಜೀವನದಲ್ಲಿ ಏನೇ ನಡೆದರೂ, ಯಾರಿಗೂ ಅದರ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ನಾನು ರಿಯಾನ್ ಪರಾಗ್‌ಗೆ ಹೇಳಲು ಬಯಸುತ್ತೇನೆ. ಯಾರೂ ಅದರ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ. ಆದರೆ ನೀವು ಏನೇ ಮಾಡಿದರೂ, ಅದನ್ನು ನಿಮ್ಮ ವೈಯಕ್ತಿಕ ಜಾಗದಲ್ಲಿ ಮಾಡಿ, ಏಕೆಂದರೆ ನೀವು ಒಂದು ತಂಡದ ನಾಯಕ, ನೀವು ಫ್ರಾಂಚೈಸಿಯೊಂದರ ನಾಯಕ. ನೀವು ಬಹುಶಃ ಅನೇಕ ಕ್ರಿಕೆಟಿಗರಿಗೆ, ಅನೇಕ ಯುವಕರಿಗೆ, ಅನೇಕ ಯುವ ಭಾರತೀಯರಿಗೆ ಮತ್ತು ಪ್ರಪಂಚದಾದ್ಯಂತದ ಯುವಜನರಿಗೆ ಸ್ಫೂರ್ತಿಯಾಗಿದ್ದೀರಿ. ಆದ್ದರಿಂದ ಸ್ವಲ್ಪ ಜವಾಬ್ದಾರಿಯೂ ಇರಬೇಕಾಗುತ್ತದೆ' ಎಂದು ಸಲಹೆ ನೀಡಿದರು.

ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವಿರುದ್ಧದ ಪಂದ್ಯದ ವೇಳೆ ಅವರ ವರ್ತನೆಗೆ ಆರ್‌ಆರ್ ನಾಯಕನಿಗೆ ದಂಡ ಮತ್ತು ಡಿಮೆರಿಟ್ ಪಾಯಿಂಟ್ ವಿಧಿಸಲಾಗಿದೆ. ಆದರೆ, ಅವರು ತಮ್ಮ ಪ್ರದರ್ಶನದತ್ತ ಗಮನ ಹರಿಸಲು ಪ್ರಯತ್ನಿಸುತ್ತಿದ್ದಾರೆ. 24 ವರ್ಷದ ಆಟಗಾರ ಐಪಿಎಲ್ 2026 ರಲ್ಲಿ ಆಡಿರುವ 9 ಪಂದ್ಯಗಳಲ್ಲಿ ಕೇವಲ 200ಕ್ಕೂ ಅಧಿಕ ರನ್ ಗಳಿಸಿದ್ದಾರೆ.

Riyan Parag
IPL 2026: PBKS vs RR ಪಂದ್ಯದ ವೇಳೆ ನಿಷೇಧಿತ ಇ-ಸಿಗರೇಟ್ ಸೇದಿ ಸಿಕ್ಕಿಬಿದ್ದ ರಿಯಾನ್ ಪರಾಗ್!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com