'ರೋಹಿತ್ ಶರ್ಮಾ ಜೊತೆ ಡೇಟಿಂಗ್ ಮಾಡಿದ್ದೆ': ಬಿಗ್ ಬಾಸ್ 7 ಸ್ಪರ್ಧಿ ಸೋಫಿಯಾ ಹಯಾತ್ ಸ್ಫೋಟಕ ಹೇಳಿಕೆ, Video

ಇತ್ತೀಚಿಗೆ 'ಸ್ಟ್ರೈಟ್ ಟಾಕ್ ಕ್ವೀರ್ ವಿಸ್ಡಮ್' (Straight Talk Queer Wisdom) ಪಾಡ್‌ಕಾಸ್ಟ್‌ನಲ್ಲಿ ಅವರು ನೀಡಿರುವ ಹೇಳಿಕೆಗಳು ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
Sofia Hayat
ಸೋಫಿಯಾ ಹಯಾತ್
Updated on

ಭಾರತೀಯ ಕ್ರಿಕೆಟ್ ನಲ್ಲಿ ಹಿಟ್ ಮ್ಯಾನ್ ಎಂದೇ ಖ್ಯಾತರಾದ ರೋಹಿತ್ ಶರ್ಮಾ ಜೊತೆಗಿನ ಡೇಟಿಂಗ್ ವಿಚಾರದಲ್ಲಿ ಬ್ರಿಟಿಷ್ ನಟಿ ಮತ್ತು ಗಾಯಕಿ ಸೋಫಿಯಾ ಹಯಾತ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸಲ್ಮಾನ್ ಖಾನ್ ನಡೆಸಿಕೊಡುವ 'ಬಿಗ್ ಬಾಸ್ 7' ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದ ಸೋಫಿಯಾ, ಹಲವು ವರ್ಷಗಳ ಕಾಲ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನೊಂದಿಗೆ ಗುರುತಿಸಿಕೊಂಡಿದ್ದರು. ಅಲ್ಲದೆ, ಅವರು ತಮ್ಮನ್ನು ಐಪಿಎಲ್‌ನ "ಲಕ್ಕಿ ಮ್ಯಾಸ್ಕಾಟ್" (ಅದೃಷ್ಟದ ಸಂಕೇತ) ಎಂದು ಕರೆದುಕೊಳ್ಳುವ ಮೂಲಕ ಜನಪ್ರಿಯರಾಗಿದ್ದರು.

ಇತ್ತೀಚಿಗೆ 'ಸ್ಟ್ರೈಟ್ ಟಾಕ್ ಕ್ವೀರ್ ವಿಸ್ಡಮ್' (Straight Talk Queer Wisdom) ಪಾಡ್‌ಕಾಸ್ಟ್‌ನಲ್ಲಿ ಅವರು ನೀಡಿರುವ ಹೇಳಿಕೆಗಳು ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದರಲ್ಲಿ ಐಪಿಎಲ್ ದಿನಗಳ ಅನುಭವಗಳು, ಭಾರತದಲ್ಲಿ ತಮಗೆ ಸಿಕ್ಕ ಜನಪ್ರಿಯತೆ ಮತ್ತು ರೋಹಿತ್ ಶರ್ಮಾ ಜೊತೆಗಿನ ಸಂಬಂಧ ಕುರಿತು ಮಾತನಾಡಿದ್ದಾರೆ.

ರೋಹಿತ್ ಶರ್ಮಾ ಕುರಿತು ಸೋಫಿಯಾ ಹಯಾತ್ ಹೇಳಿದ್ದೇನು? ಐಪಿಎಲ್ ಟೂರ್ನಿಯೊಂದಿಗೆ ಗುರುತಿಸಿಕೊಂಡ ಆರಂಭದಲ್ಲಿ ತಮಗೆ ಕ್ರಿಕೆಟ್ ಬಗ್ಗೆ ಹೆಚ್ಚಿನ ಜ್ಞಾನವಿರಲಿಲ್ಲ. ತಮ್ಮ ಮ್ಯಾನೇಜರ್ ಪ್ರೋತ್ಸಾಹದಿಂದ ಕ್ರಿಕೆಟ್ ಕ್ಷೇತ್ರಕ್ಕೆ ಪ್ರವೇಶಿಸಿದ್ದಾಗಿ ಹೇಳಿದ ಅವರು, ಆ ಅವಧಿಯಲ್ಲಿ ತಮ್ಮ ಬಗ್ಗೆ ಮಾಡಿದ್ದ ಹಲವು ಹೇಳಿಕೆಗಳು ಸತ್ಯಕ್ಕೆ ದೂರವಾಗಿದ್ದವು ಎಂಬುದನ್ನೂ ಒಪ್ಪಿಕೊಂಡರು. ತಮ್ಮ ವಯಸ್ಸಿನ ಬಗ್ಗೆ ಸುಳ್ಳು ಹೇಳಿದ್ದಾಗಿಯೂ ಸೋಫಿಯಾ ತಿಳಿಸಿದರು. ಈ ಸುಳ್ಳು ತಮಗೆ 'ಯೂತ್ ಐಕಾನ್'ಎಂದು ಗುರುತಿಸಿಕೊಳ್ಳಲು ಮತ್ತು ಭಾರತದಲ್ಲಿ ಜನಪ್ರಿಯತೆ ಗಳಿಸಲು ನೆರವಾಯಿತು ಎಂದು ಹೇಳಿದರು.

ಭಾರತೀಯ ಬ್ಯಾಟರ್ ರೋಹಿತ್ ಶರ್ಮಾ ಜೊತೆಗೆ ಡೇಟಿಂಗ್ ಮಾಡಿದ್ದಾಗಿ ಅವರು ಪಾಡ್ ಕಾಸ್ಟ್ ನಲ್ಲಿ ಹೇಳಿಕೊಂಡರು. ರೋಹಿತ್ ಜೊತೆಗಿನ ಡೇಟಿಂಗ್ ಬಗ್ಗೆ ಸೋಫಿಯಾ ಸಾರ್ವಜನಿಕವಾಗಿ ಮಾತನಾಡುತ್ತಿರುವುದು ಇದೇ ಮೊದಲ ಬಾರಿಯಲ್ಲ. ಹಲವು ವರ್ಷಗಳ ಹಿಂದೆ ನೀಡಿದ ಸಂದರ್ಶನವೊಂದರಲ್ಲೂ ಅವರು ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದರು. ತಮ್ಮ ಸಂಬಂಧದ ಕುರಿತು ಪುಸ್ತಕವೊಂದನ್ನು ಬರೆಯುವ ಯೋಜನೆ ಬಗ್ಗೆಯೂ ಮಾತನಾಡಿದ್ದರು. ಸೋಫಿಯಾ ಪ್ರಕಾರ, 2012 ರಲ್ಲಿ ಶುರುವಾದ ಇವರಿಬ್ಬರ ಡೇಟಿಂಗ್ ಸುಮಾರು ಒಂದು ವರ್ಷದವರೆಗೆ ಮುಂದುವರಿದಿತ್ತು.

ತಮ್ಮ ನಡುವಿನ ಸಂಬಂಧ ಬ್ರೇಕ್ ಅಪ್ ಗೆ ಏನು ಕಾರಣ ಎಂಬುದರ ಬಗ್ಗೆಯೂ ಆಕೆ ಮಾತನಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾಗ ರೋಹಿತ್ ತಮ್ಮನ್ನು ಕೇವಲ ಒಬ್ಬ "ಅಭಿಮಾನಿ" (fan) ಎಂದು ಕರೆದಿದ್ದರಿಂದ ತಮಗೆ ಬೇಸರ ಉಂಟಾಯಿತು. ಆ ಮಾತು ತಮಗೆ ನೋವುಂಟುಮಾಡಿತು. ಅಂತಿಮವಾಗಿ ಆ ಕ್ರಿಕೆಟಿಗರನ್ನು ಸಾಮಾಜಿಕ ಜಾಲತಾಣದಲ್ಲಿ 'ಬ್ಲಾಕ್' (block) ಮಾಡುವ ನಿರ್ಧಾರಕ್ಕೆ ಕಾರಣವಾಯಿತು ಎಂದು ಸೋಫಿಯಾ ತಿಳಿಸಿದರು. ಆದಾಗ್ಯೂ, ತಮ್ಮ ನಡುವೆ ಸಂಬಂಧವಿತ್ತು ಎಂಬ ಸೋಫಿಯಾ ಹಯಾತ್ ಅವರ ಹೇಳಿಕೆಗಳನ್ನು ರೋಹಿತ್ ಶರ್ಮಾ ಎಂದಿಗೂ ಸಾರ್ವಜನಿಕವಾಗಿ ದೃಢಪಡಿಸಿಲ್ಲ.

Sofia Hayat
'ನಿನಗೆ ಖಂಡಿತಾ ಗರ್ಲ್ ಫ್ರೆಂಡ್ ಇಲ್ಲ ಅನಿಸುತ್ತೆ': ಕ್ರಿಕೆಟರ್ ಜೊತೆ ಡೇಟಿಂಗ್ ರೂಮರ್‌, ಅಭಿಮಾನಿಗೆ ನಟಿ Ameesha Patel ಖಡಕ್ ತಿರುಗೇಟು!

ರೋಹಿತ್ ಶರ್ಮಾ ಅವರು ರಿತಿಕಾ ಸಜ್ದೇಹ್ ಅವರನ್ನು ವಿವಾಹವಾಗಿದ್ದಾರೆ. ರಿತಿಕಾ ಅವರ ವೃತ್ತಿಪರ ನಿರ್ವಹಣಾ ಕಾರ್ಯಗಳಲ್ಲೂ (professional management) ತೊಡಗಿಸಿಕೊಂಡಿದ್ದಾರೆ. ಈ ದಂಪತಿ 2015ರಲ್ಲಿ ವಿವಾಹವಾದರು. ಇವರಿಗೆ 2018ರಲ್ಲಿ ಸಮೈರಾ ಎಂಬ ಮಗಳು ಮತ್ತು 2024ರಲ್ಲಿ ಮಗನಿದ್ದಾರೆ. ಇದಲ್ಲದೆ, ರೋಹಿತ್ ತಮ್ಮ ಕ್ರಿಕೆಟ್ ವೃತ್ತಿಜೀವನದ ಹೊರತಾಗಿ 'ಫ್ಯಾಮಿಲಿ ಫುಲ್ ಹೌಸ್ ವಿತ್ ರೋಹಿತ್ ಶರ್ಮಾ' (Family Full House with Rohit Sharma) ಎಂಬ ಅವರ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಇದು ಈ ವಾರ ಸೋನಿ ಟಿವಿಯಲ್ಲಿ ಪ್ರಸಾರವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com