ಜಿಲ್ಲಾ ಸುದ್ದಿ

ವಿಂಗ್ಸ್ ಕ್ರಿಯೇಷನ್ಸ್ ಸಂಸ್ಥೆಯಿಂದ ಅನಿಮೇಷನ್ ತರಬೇತಿ

Published On :

ಬೆಂಗಳೂರು: ವಿಂಗ್ಸ್ ಕ್ರಿಯೇಷನ್ಸ್ ಸಂಸ್ಥೆಯು ಕಲೆ ಮಾಧ್ಯಮ ಮತ್ತು ವಿನ್ಯಾಸದ ಕಾಲೇಜಿನಲ್ಲಿ ನೂತನ ಅನಿಮೇಷನ್ ಸ್ಟುಡಿಯೋವನ್ನು ನಿರ್ಮಿಸಿದ್ದು, ಉದ್ಘಾಟನಾ ಸಮಾರಂಭವನ್ನು ಕೋರಮಂಗಲದಲ್ಲಿ ಹಮ್ಮಿಕೊಂಡಿದೆ.

ಈ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಂಗ್ಸ್ ಕ್ರಿಯೇಷನ್ಸ್ ಸಂಸ್ಥೆಯ ಕಾರ್ಯದರ್ಶಿ ರಶ್ಮಿ, ಸಂಸ್ಥೆಯಲ್ಲಿ ಅನಿಮೇಷನ್ ಕಲಿಯಲಿಚ್ಛಿಸುವವರಿಗೆ ಇಂತಹದ್ದೇ ಶಿಕ್ಷಣವನ್ನು ಮುಗಿಸಿರಬೇಕು ಎಂಬ ನಿಯಮಗಳೇನು ಇಲ್ಲ. ಆದರೆ ಕಲಿಯುವ ಆಸಕ್ತಿ ಇರಬೇಕು. ಅನಿಮೇಷನ್ ಕಲಿಯುವ ಆಸಕ್ತಿಯಿದ್ದು, ಬಡತನದಿಂದ ಅವಕಾಶ ವಂಚಿತರಾದವರಿಗೆ ಸಂಸ್ಥೆ ಕೆನರಾ ಬ್ಯಾಂಕ್‌ನಿಂದ ಲೋನ್ ಮೂಲಕ ಹಣ ಕೊಡಿಸುತ್ತಿದೆ. ಇದರಿಂದ ಬಡತನದಲ್ಲಿರುವ ಜನರು ಅನಿಮೇಷನ್ ಕೋರ್ಸ್ ಮಾಡುವಂತಾಗುತ್ತದೆ ಎಂದು ತಿಳಿಸಿದರು.

ಸಂಸ್ಥೆಯಿಂದ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಶೇ.100 ರಷ್ಟು ಉದ್ಯೋಗ ಸಿಗುವುದಾಗಿ ತಿಳಿಸಿದ ಅವರು, ದೂರ ಪ್ರದೇಶದಿಂದ ಬರುವಂತಹ ವಿದ್ಯಾರ್ಥಿಗಳಿಗೆ ಹಾಸ್ಟೇಲ್ ಸೌಲಭ್ಯಗಳನ್ನು ಸಂಸ್ಥೆ ಒದಗಿಸುತ್ತಿದ್ದು, ಕೋರ್ಸ್‌ಗಳು 25 ಸಾವಿರದಿಂದ 1 ಲಕ್ಷಗಳವರೆಗೂ ಇರುತ್ತದೆ. ವಿದ್ಯಾರ್ಥಿಗಳಿಗೆ ಮೈಸೂರು ವಿಶ್ವವಿದ್ಯಾಲಯದಿಂದ ಬೆಚ್ಯುಲರ್ಸ್ ಪದವಿ ಮತ್ತು ಡಿಪ್ಲೋಮ ಹಾಗೂ ಯೋಗ್ಯತಾ ಪ್ರಮಾಣ ಪತ್ರಗಳನ್ನು ನೀಡುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಉದ್ಘಾಟಿಸಲಿದ್ದು, ಸಮಾರಂಭದಲ್ಲಿ ಸಂಸ್ಥೆಯ ನಿರ್ದೇಶಕಿ ಸೌಮ್ಯ ದೇವರಾಜ ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿಲಿದ್ದಾರೆ.
ಸ್ಥಳ: ನಂ.16, 5ನೇ ಕ್ರಾಸ್, 6ನೇ ಬ್ಲಾಕ್,
ಕೋರಮಂಗಲ, ಬೆಂ-95.
ಲ್ಯಾಂಡ್‌ಮಾರ್ಕ್: ಪ್ರಿಂಟೋ, ಸುಜುಕಿ ಶೋರೂಂ ಮುಂದೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.