ಸುವರ್ಣಸೌಧಕ್ಕೆ ಆನೆ ದಾಳಿ

ಬೆಳಗಾವಿ: ಕಾಡಿನಿಂದ ನಾಡಿಗೆ ಬಂದಿದ್ದ ಎರಡು ಗಂಡಾನೆಗಳನ್ನು ಸುರಕ್ಷಿತವಾಗಿ ಖಾನಾಪುರ ತಾಲೂಕಿನ ಗರ್ಲಗುಂಜಿ ಗ್ರಾಮಕ್ಕೆ ಕಳುಹಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಗುರುವಾರ ಬೆಳಗಿನ ಜಾವ 6 ಗಂಟೆಗೆ ಸುವರ್ಣ ವಿಧಾನಸೌಧದ ಬಳಿಯಿರುವ ಹಲಗಾ-ಬಸ್ತವಾಡ ಗ್ರಾಮದ ಸರಹದ್ದಿನಲ್ಲಿ ಸಂಚರಿಸುತ್ತಿದ್ದ ಆನೆಗಳನ್ನು ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ಸುನೀತಾ ನಿಂಬರಗಿ ನೇತೃತ್ವದ 25 ಸಿಬ್ಬಂದಿ ಬ್ಯಾಂಡ್ ಬಾರಿಸುತ್ತ ಧಾಮನೆ, ಯಳ್ಳೂರ, ಸುಳಗಾ ರಾಜಹಂಸಗಢ ಮಾರ್ಗವಾಗಿ ಖಾನಾಪುರ ತಾಲೂಕಿನ ಗರ್ಲಗುಂಜಿ ಹದ್ದಿನವರೆಗೆ ಓಡಿಲಸಲಾಯಿತು. ಸಂಜೆ ವೇಳೆಗೆ ಖಾನಾಪುರ ತಾಲೂಕಿನ ದಟ್ಟಾರಣ್ಯಕ್ಕೆ ಕಳುಹಿಸಲಾಯಿತು.
ಆನೆಗಳನ್ನು ವೀಕ್ಷಿಸುವುದಕ್ಕಾಗಿ ಭಾರಿ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದರು. ಹಲಗಾ ಗ್ರಾಮದ ಬಳಿ ರೈತನೊಬ್ಬ, ಕಳೆದ 2 ವರ್ಷಗಳಿಂದ ಏಕೆ ನನ್ನನ್ನು ಹಾಳು ಮಾತುತ್ತಿದ್ದಿಯಾ? ಇಲ್ಲಿಂದ ಮೊದ್ಲು ತೊಲಗು ಎಂದು ಶಪಿಸುತ್ತ ನೂರು ಮೀಟರ್ನಷ್ಟು ಸಮೀಪ ಹೋಗುತ್ತಿದ್ದಂತೆಯೇ ಕೋಪೋದ್ರಿಕ್ತ ಆನೆಯು ಆತನನ್ನು ಬೆನ್ನಟ್ಟಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


