3 ತಿಂಗಳಲ್ಲಿ 9000 ಮೃತ್ಯುಕೂಪಕ್ಕೆ ಮುಕ್ತಿ!

ಬೆಳಗಾವಿ: ಕೆಲಸದಲ್ಲಿ ಶ್ರದ್ಧೆ, ಇಚ್ಛಾಶಕ್ತಿ ಇದ್ದರೆ ಯಾವ ಕೆಲಸವೂ ಅಸಾಧ್ಯವಲ್ಲ ಎಂಬುದನ್ನು ಬೆಳಗಾವಿ ಜಿಲ್ಲಾಡಳಿತ ತೋರಿಸಿಕೊಟ್ಟಿದೆ. ಕೇವಲ ಮೂರೇ ತಿಂಗಳಲ್ಲಿ ಜಿಲ್ಲೆಯಲ್ಲಿ 9 ಸಾವಿರಕ್ಕೂ ಹೆಚ್ಚು ವಿಫಲ ಕೊಳೆವೆ ಬಾವಿಗಳನ್ನು ಮುಚ್ಚಿಸಿ, ಮಾದರಿಯಾಗಿದೆ.
ಸಮರೋಪಾದಿ ಕಾರ್ಯಾಚರಣೆ: ಬೆಳಗಾವಿ ರಾಜ್ಯದಲ್ಲೇ ಅತಿ ದೊಡ್ಡ ಜಿಲ್ಲೆ. ಇಲ್ಲಿನ ಜಿಲ್ಲಾಧಿಕಾರಿ ಎನ್.ಜಯರಾಮ್, ಜಿಲ್ಲಾ ಪಂಚಾಯಿತಿ ಸಿಇಒ ದೀಪಾ ಚೋಳನ್ ಅವರು ಸಮಸ್ಯೆಯ ತೀವ್ರತೆ ಅರಿತು ವಿಫಲ ಕೊಳವೆ ಬಾವಿ ಮುಚ್ಚಿಸಲು ಪಣ ತೊಟ್ಟರು. ಇದರ ಫಲವಾಗಿ 9356 ತೆರೆದ ಕೊಳವೆ ಬಾವಿಗಳನ್ನು ಮುಚ್ಚಲಾಯಿತು.
ಇವುಗಳಲ್ಲಿ ಸರ್ಕಾರ, ಖಾಸಗಿಯವರು ಕೊರೆಸಿರುವ ಕೊಳವೆ ಬಾವಿಗಳೂ ಸೇರಿವೆ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 392 ಮತ್ತು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮೀಣ ಪ್ರದೇಶದಲ್ಲಿ 8964 ತೆರೆದ ಕೊಳವೆ ಬಾವಿಗಳನ್ನು ಮುಚ್ಚಲಾಗಿದೆ. ಇದು ನಿರಂತರವಾಗಿ ನಡೆಯಲಿದೆ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ.
ಜಿಲ್ಲಾಡಳಿತ ಜಿಲ್ಲೆಯ ತಾ. ಮತ್ತು ನಗರ ಮುಚ್ಚಿದ ಕೊಳವೆ ಬಾವಿಗಳ ಅಂಕಿ-ಸಂಖ್ಯೆ
ಸಂಖ್ಯೆ ತಾಲೂಕು ಮುಚ್ಚಿದ ಕೊಳವೆ ಬಾವಿ
1. ಬೆಳಗಾವಿ 1467
2. ಖಾನಾಪುರ 1157
3.ಬೈಲಹೊಂಗಲ 1064
4. ಸವದತ್ತಿ 1345
5 ರಾಮದುರ್ಗ 649
6. ಹುಕ್ಕೇರಿ 636
7. ಗೋಕಾಕ 756
8. ಚಿಕ್ಕೋಡಿ 725
9. ರಾಯಬಾಗ 546
10. ಅಥಣಿ 1011
ಶ್ರೀಧರ ಕೋಟಾರಗಸ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


