ಎಂಜಿ ರಸ್ತೆಯಲ್ಲಿ ಮಹಿಳೆಯರಿದ್ದ ಕಾರಿನ ಬಾಗಿಲು ತೆರೆಯಲು ದುಷ್ಕರ್ಮಿಗಳ ಯತ್ನ

ನಗರದ ಎಂಜಿ ರಸ್ತೆಯ ಐಸ್‌ಕ್ರೀಂ...
ಕಾರಿನ ಬಾಗಿಲು ತೆರೆಯಲು ಯತ್ನಿಸಿದ ಆರೋಪಿಯ ಚಿತ್ರ
ಕಾರಿನ ಬಾಗಿಲು ತೆರೆಯಲು ಯತ್ನಿಸಿದ ಆರೋಪಿಯ ಚಿತ್ರ
Updated on

ಬೆಂಗಳೂರು: ನಗರದ ಎಂಜಿ ರಸ್ತೆಯ ಐಸ್‌ಕ್ರೀಂ ಪಾರ್ಲರ್ ಬಳಿ ಮಹಿಳೆಯರು ಕುಳಿತಿದ್ದ ಕಾರಿನ ಬಾಗಿಲನ್ನು ದುಷ್ಕರ್ಮಿಗಳು ಬಲವಂತವಾಗಿ ತೆರೆಯಲು ಯತ್ನಿಸಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

ಐವರು ಮಹಿಳೆಯರು ಚಾಲಕನೊಂದಿಗೆ ಕಾರಿನಲ್ಲಿ ರಾತ್ರಿ 11.45ಕ್ಕೆ ಮೆಟ್ರೋ ನಿಲ್ದಾಣ ಸಮೀಪದಲ್ಲಿರುವ ಐಸ್‌ಕ್ರೀಂ ಪಾರ್ಲರ್ ಬಳಿ ಬಂದಿದ್ದರು. ಮಹಿಳೆಯರು ಕಾರಿನಲ್ಲಿ ಕುಳಿತಿದ್ದರು. ಚಾಲಕ ಐಸ್‌ಕ್ರೀಂ ತರಲು ಹೋಗಿದ್ದ. ಈ ವೇಳೆ ಆಗಮಿಸಿದ ದುಷ್ಕರ್ಮಿಗಳು ಕಾರಿನ ಗಾಜನ್ನು ಬಲವಂತವಾಗಿ ತೆಗೆಯಲು ಯತ್ನಿಸಿದ್ದಾರೆ. ಇದರಿಂದ ಗಾಬರಿಗೊಂಡ ಮಹಿಳೆಯರು ಕಾರಿನಲ್ಲೇ ಕಿರುಚಾಡಲು ಆರಂಭಿಸಿದರು ಗಾಬರಿಗೊಂಡ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ಕೇಂದ್ರ ವಿಭಾಗ ಡಿಸಿಪಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಮಹಿಳೆಯರು ನೀಡಿದ ದೂರಿನ ಮೇಲೆ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 509, 506 ಹಾಗೂ 354ಡಿ ಅನ್ವಯ ಪ್ರಕರಣ ದಾಖಲಾಗಿದೆ. ಸಮೀಪದ ಮಳಿಗೆ ಜಂಕ್ಷನ್‌ಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಿಲಾಗುವುದು ಎಂದು ಸಂದೀಪ್ ಪಾಟೀಲ್ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com