ಮಗಳಿಗೆ ಮರುಜನ್ಮ ನೀಡಿದ ಮುದ್ದಿನ ಅಪ್ಪ

ಬೆಂಗಳೂರು: ಮಗಳಿಗೆ ಜನ್ಮ ನೀಡಿದ್ದೇನೆ. ಅವಳಿಗೆ ನನ್ನದೊಂದು ಕಿಡ್ನಿ ದಾನ ಮಾಡಲು ಏಕೆ ಹಿಂಜರಿಯಬೇಕು? ಹೆಣ್ಣು ಮಕ್ಕಳೆಂದರೆ ಇಂದೂ ಮೂಗು ಮುರಿಯುವ ಸಾಕ್ಷರ ಪಾಲಕರಿದ್ದಾರೆ. ಅಂಥವರ ಮಧ್ಯೆ, ತೋಟದಲ್ಲಿ ಕೆಲಸ ಮಾಡುವ ಕೂಲಿ ಕೃಷ್ಣಪ್ಪ ತನ್ನ ಮಗಳಿಗಾಗಿ ಒಂದು ಕಿಡ್ನಿಯನ್ನೇ ದಾನ ಮಾಡಿದ್ದಾರೆ.
ಈ ಮೂಲಕ 12 ವರ್ಷದ ಮಗಳಿಗೆ ಮರುಜನ್ಮ ನೀಡಿದ್ದಾರೆ. ಬದುಕಲು ಸಾಧ್ಯವೇ ಇಲ್ಲ ಎಂದು ವೈದ್ಯರು ಹೇಳಿದಾಗ, ಅದನ್ನು ಸವಾಲಾಗಿ ತೆಗೆದುಕೊಂಡು ಮಗಳಿಗೆ ಕಿಡ್ನಿ ದಾನ ಮಾಡಿ ಮುದ್ದಿನ ಅಪ್ಪ ಎಂದೆನಿಸಿಕೊಂಡಿದ್ದಾರೆ. ಈ ಮೂಲಕ ಅಂಗದಾನದ ಬಗ್ಗೆ ಅಂಧಕಾರದಲ್ಲಿ ಮುಳುಗಿರುವ ಮೂಢರಿಗೆ ಪಾಠ ಹೇಳಿದ್ದಾರೆ.
ಬೆಂಗಳೂರಿನವರಾದ ಕೃಷ್ಣಪ್ಪ ಅವರ ಮಗಳು ದೀಪಿಕಾಗೆ ಜುವೈನಲ್ ನೆಫ್ರೋ ನೋಫೊಥಿಸಿಸ್ ಇರುವುದು ಪತ್ತೆಯಾಗಿತ್ತು. ವಂಶವಾಹಿಯಾಗಿ ಬರುವ ಈ ಮೂತ್ರ ಪಿಂಡ ಸಮಸ್ಯೆ ಬಾಲ್ಯದಲ್ಲಿಯೇ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ರೋಗವು ಬೆಳಕಿಗೆ ಬಂದ ಮೇಲೆ ಒಂದು ವರ್ಷಕ್ಕಿಂತ ಹೆಚ್ಚು ಬದುಕಲು ಸಾಧ್ಯವೂ ಇರಲಿಲ್ಲ. ಆಗ ನಗರದ ನಾರಾಯಣ ಹೃದಯಾಲಯಕ್ಕೆ ದೀಪಿಕಾಳನ್ನು ಸೇರಿಸಲಾಯಿತು. ಕಿಡ್ನಿ ಕಸಿ ಮಾಡುವುದು ಅನಿವಾರ್ಯ ಎಂದು ವೈದ್ಯರು ಸೂಚಿಸಿದ ಬಳಿಕ ನೈಜ ಸಮಸ್ಯೆಗಳು ಎದುರಾದವು.
ಕಿಡ್ನಿ ದಾನ ಮಾಡುವವರು ಯಾರೆಂಬ ಬಗ್ಗೆ ಸಾಕಷ್ಟು ಗೊಂದಲಗಳು ಆರಂಭವಾದವು. ಅಂಗದಾನ ಮಾಡುವುದನ್ನೇ ವಿರೋಧಿಸುವ ದಿನಗಳಲ್ಲಿ ಹೆಣ್ಣುಮಗುವಿಗೆ ಕಿಡ್ನಿ ದಾನ ಮಾಡಲು ತಂದೆ ತಯಾರಿದ್ದರು. ಇದರ ಬಗ್ಗೆ ವಿರೋಧದ ಮಾತನ್ನು ಆಡುವವರ ಸಂಖ್ಯೆ ದೊಡ್ಡದಿತ್ತು. ಇದ್ಯಾವುದನ್ನೂ ಲೆಕ್ಕಿಸದೆ 59 ವರ್ಷದ ಕೃಷ್ಣಪ್ಪ ತನ್ನ ಒಂದು ಕಿಡ್ನಿಯನ್ನು ದಾನ ಮಾಡಿದರು.
ಇದಾದ ಬಳಿಕ ಜುಲೈನಲ್ಲಿ ಕಿಡ್ನಿ ಕಸಿ ಮಾಡಿ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಕೂಡ ಮಾಡಲಾಯಿತು. ಈಗ ತಂದೆ ಹಾಗೂ ಮಗಳಿಬ್ಬರೂ ಆರೋಗ್ಯವಾಗಿದ್ದಾರೆ. ಮುಂದಿನ ತಿಂಗಳಿನಿಂದ ಶಾಲೆಗೆ ಹೋಗಲು ಬಾಲಕಿ ತಯಾರಾಗಿದ್ದಾಳೆ. ಅಂಗದಾನದ ಬಗ್ಗೆ ಮೂಢನಂಬಿಕೆ ಇಟ್ಟುಕೊಂಡಿರುವವರ ಸಂಖ್ಯೆ ದೊಡ್ಡದಿರುವಾಗ ಹೆಣ್ಣು ಮಗಳಿಗೆ ಜೀವದಾನ ಮಾಡಲು ಮುಂದಾದ ತಂದೆಯ ನಡೆ ಪ್ರತಿಯೊಬ್ಬರಿಗೂ ಮಾದರಿಯಾಗಬೇಕು. ಒಂದು ಕಿಡ್ನಿಯಿಂದ 100 ವರ್ಷ ಬಾಳ ಬಹುದು. ಈ ಹಿನ್ನಲೆಯಲ್ಲಿ ಮತ್ತೊಂದು ಕಿಡ್ನಿಯನವ್ನು ದಾನ ಮಾಡಬಹುದು. ಈ ಹಿನ್ನಲೆಯಲ್ಲಿ ಮತ್ತೊಂದು ಕಿಡ್ನಿಯನ್ನು ದಾನ ಮಾಡಬಹುದು. 18 ವರ್ಷ ದಾಟಿದ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ಕಿಡ್ನಿ ದಾನಕ್ಕೆ ಅರ್ಹನಾಗಿರುತ್ತಾನೆ.
ಹಾಗೆಯೇ 14ಕೆಜಿ ತೂಕ ಇರುವ 4 ವರ್ಷಕ್ಕಿಂತ ದೊಡ್ಡವರು ಕಿಡ್ನಿ ಕಸಿ ಮಾಡಿಸಿಕೊಳ್ಳಲು ಅರ್ಹರಿರುತ್ತಾರೆ ಎಂದು ನಾರಾಯಣ ಹೃದಯಾಲಯದ ವೈಧ್ಯ ಡಾ. ಸೌಮಿಲ್ ಗೌರ್ ಅಭಿಪ್ರಾಯಪಡುತ್ತಾರೆ. ಹೆಣ್ಣು ಮಗು ಎಂಬ ಭೇದ ಮಾಡಬೇಡಿ. ಎಲ್ಲರ ಜೀವವೂ ಒಂದೇ. ಇನ್ನು ಅಂಗದಾನದ ಬಗೆಗೂ ಯಾವುದೇ ಹೆದರಿಕೆ ಬೇಡ ಎಂದು ಕೃಷ್ಣಪ್ಪ ಹೇಳುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


