ಜಿಲ್ಲಾ ಸುದ್ದಿ

ಫೋರಂ ಮಾಲ್‌ಗೆ ಬಂದ 'ಮೂನ್‌ವಾಕ್ ಮ್ಯಾಜಿಶಿಯನ್ಸ್‌' ಎಂಜೆ 5

ಫೋರಂ ಮಾಲ್‌ಗೆ ಬಂದ 'ಮೂನ್‌ವಾಕ್ ಮ್ಯಾಜಿಶಿಯನ್ಸ್‌' ಎಂಜೆ 5
Published On :

ಬೆಂಗಳೂರು: ಕೋರಮಂಗಲದ ಫೋರಂ ಮಾಲ್‌ನಲ್ಲಿ ಶಾಪಿಂಗ್ ಫೆಸ್ಚಿವಲ್ ಸಂಭ್ರಮಾಚರಣೆಯ ನಿಮಿತ್ತ  ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೆಹಲಿ ಮೂಲದ ಡ್ಯಾನ್ಸ್ ತಂಡ ಎಂಜೆ 5 ನೃತ್ಯ ಪ್ರದರ್ಶನ ನೀಡಿತು.

ಇಂಡಿಯಾಸ್ ಡ್ಯಾನ್ಸಿಂಗ್ ಸೂಪರ್ಸ್ಟಾರ್ ಟ್ಯಾಲೆಂಟ್ ಶೋವನ್ನು ಗೆಲ್ಲುವ ಮೂಲಕ ಮೈಕೆಲ್ ಜಾಕ್ಸನ್ ಶೈಲಿಯ ನೃತ್ಯ ಮಾಡುವ ಎಂಜೆ5 ತನ್ನ ಹೆಸರನ್ನು ಅತ್ಯಂತ ಜನಪ್ರಿಯವಾಗಿಸಿಕೊಂಡಿದೆ. ತಮ್ಮ ಬುದ್ಧಿಮತ್ತೆಯನ್ನು ಪ್ರದಶರ್ಿಸಲು ಸೂಪರ್ಸ್ಟಾರ್ಗಳಿಗೆ ಆ ವೇದಿಕೆಯು ಉತ್ತಮ ಅವಕಾಶವನ್ನು ಒದಗಿಸಿಕೊಟ್ಟಿತ್ತು. ಮೂನ್ವಾಕ್ ಮ್ಯಾಜಿಶಿಯನ್ಸ್ ವೃತ್ತಿಪತ ನೃತ್ಯಗಾರರಾಗಿ ಬೆಳೆಯುತ್ತಿದ್ದಂತೆಯೇ ರೆಮೋ ಡಿಸೋಜಾರ ಎಬಿಸಿಡಿ 2 ದಂತಹ ಸಿನಿಮಾಗಳಲ್ಲೂ ಕಾಣಿಸಿಕೊಳ್ಳತೊಡಗಿದರು.

ತಂಡದ ಐವರು ಸದಸ್ಯರು ದೇಶದ ವಿವಿಧ ಭಾಗದಿಂದ ಬಂದವರಾಗಿದ್ದಾರೆ ಮತ್ತು ಕಾಲೇಜು ನೃತ್ಯ ಸಮ್ಮೇಳನದಲ್ಲಿ ಮಾಡಿದ ಅತ್ಯದ್ಭುತ ಪ್ರದರ್ಶನವು ಅವರನ್ನು ಈ ಉನ್ನತಿಗೆ ಕೊಂಡೊಯ್ದಿದೆ. ಐವರು ಸದಸ್ಯರ ಈ ತಂಡದ ಎಲೆಕ್ಟ್ರಿಕ್ ಮತ್ತು ಇತರ ವಿಧದ ನೃತ್ಯವು ಆತ್ಮವಿಶ್ವಾಸ ಹಾಗೂ ಶಕ್ತಿಯುತವಾಗಿರುತ್ತದೆ. ಈ ಸಂಜೆಯಂದು ಫೋರಮ್ ಮಾಲ್ನಲ್ಲಿ ಮೂನ್ವಾಕ್ ಸ್ಟೆಪ್ ಹಾಕುವ ಮೂಲಕ ಮೈಕೆಲ್ ಜಾಕ್ಸನ್ನ ನೆನಪನ್ನು ಮತ್ತೆ ಮತ್ತೆ ಮೂಡಿಸಲಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.