ಟ್ಯಾಂಪರ್ ಪ್ರೂಫ್ ಮೀಟರ್ ಹೊಸ ಆಟೋಗಳಲ್ಲಿ ಕಡ್ಡಾಯ

ಕನ್ನಡಪ್ರಭವಾರ್ತೆ, ಬೆಂಗಳೂರು ಅ.16: ಆಟೋಗಳಲ್ಲಿ ಮೀಟರ್ ಟ್ಯಾಂಪರ್ ತಪ್ಪಿಸುವ ಸಲುವಾಗಿ ಟ್ಯಾಂಪರ್ ಪ್ರೂಫ್ ಮೀಟರ್ ಅಳವಡಿಕೆ ಕಡ್ಡಾಯ ಮಾಡಲಾಗುವುದು ಎಂದು ಅಳತೆ ಮತ್ತು ಮಾಪನ ಇಲಾಖೆ ನಿಯಂತ್ರಕ ಎಸ್. ಆರ್ ವೆಂಕಟೇಶ್ ಹೇಳಿದ್ದಾರೆ.
ಬೆಂಗಳೂರು ನಗರದಲ್ಲಿ ಈಗಾಗಲೇ ಇರುವ 1 ಲಕ್ಷಕ್ಕೂ ಅಧಿಕ ಆಟೋಗಳಿಗೆ ಟ್ಯಾಂಪರ್ ಪ್ರೂಫ್ ಮೀಟರ್ ಅಳವಡಿಕೆ ಕಡ್ಡಾಯಗೊಳಿಸುವುದು ಸಾಧ್ಯವಿಲ್ಲ. ಹೊಸ ಆಟೋಗಳಿಗೆ ಮಾತ್ರ ಕಡ್ಡಾಯ ಮಾಡಲು ನಿರ್ಧರಿಸಲಾಗಿದೆ ಎಂದು ಎಫ್ಕೆಸಿಸಿಐನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ತಿಳಿಸಿದರು.
ಇದಲ್ಲದೇ ಪ್ಯಾನಿಕ್ ಬಟನ್ ಹಾಗೂ ಬಿಲ್ ಸಿಗುವಂತೆ ಮಾಡುವ ಬಗೆಗೂ ಚಿಂತನೆಯಿದೆ. ಆದರೆ ಇದಕ್ಕೆ ಹೆಚ್ಚಿನ ಹಣ ಬೇಕಾಗುತ್ತದೆ. ಈಗಿರುವ ಆಟೋಗಳಿಗೆ ಕಡ್ಡಾಯ ಮಾಡಲು ಸಾಧ್ಯವಿಲ್ಲ. ಹೊಸ ಆಟೋಗಳಿಗೆ ಕಡ್ಡಾಯಗೊಳಿಸಲಾಗುತ್ತದೆ. ಪ್ರಯಾಣಿಕರು ಇಂತರ ಸುರಕ್ಷಾ ಕ್ರಮಗಳ ಬಗ್ಗೆ ಜಾಗೃತಗೊಂಡರೆ ಹಾಲಿ ಆಟೋ ಮಾಲೀಕರು ಅನಿವಾರ್ಯವಾಗಿ ಇಂತರ ಮೀಟರ್ಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ ಎಂದು ವೆಂಕಟೇಶ್ ಅಭಿಪ್ರಾಯಪಟ್ಟರು.
ಇ-ಕಾಮರ್ಸ್ ನಿಯಂತ್ರಣಕ್ಕೆ ಕಾಯಿದೆ: ಆನ್ಲೈನ್ ಶಾಪಿಂಗ್ ಹೆಚ್ಚಾಗುತ್ತಿದ್ದು, ಹಾಲಿ ಇರುವ ಕಾಯಿದೆಗಳಿಂದ ಇ-ಕಾಮರ್ಸ್ ವ್ಯವಹಾರಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ವಿಶೇಷ ಕಾಯಿದೆಯ ಅಗತ್ಯವಿದೆ. ಈ ಮೂಲಕ ಅಲ್ಲಿ ಗ್ರಾಹಕರಿಗೆ ಆಗುತ್ತಿರುವ ತೊಂದರೆಗಳಿಗೆ ಪರಿಹಾರ ನೀಡಬಹುದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲಸ ಆರಂಭಿಸಿದೆ. ಸ್ಪಷ್ಟ ಕಾನೂನು ಬಂದ ಬಳಿಕ ಇಲಾಖೆಯು ಕ್ರಮ ಜರುಗಿಸಬಹುದಾಗಿದೆ ಎಂದು ವೆಂಕಟೇಶ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


