ಸಾಂಗ್ಲಿಯಾನಾ ಕುಟುಂಬದಿಂದ ಭೂ ಅಕ್ರಮ?

ಬೆಂಗಳೂರು: ದಕ್ಷ ಪೊಲೀಸ್ ಅಧಿಕಾರಿಯೆಂದೇ ಹೆಸರಾಗುವ ಮೂಲಕ ಈ ಹಿಂದೆ ಒಂದೆರಡು ಸಿನಿಮಾ ಕತೆಗಳಿಗೂ ಪ್ರೇರಣೆಯಾಗಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಮಾಜಿ ಸಂಸಂದ ಎಚ್.ಟಿ ಸಾಂಗ್ಲಿಯಾನಾ ಅವರ ಕುಟುಂಬ, ನಕಲಿ ದಾಖಲೆ ಸೃಷ್ಟಿಸಿ ಗೋಮಾಳ ಜಾಗಕ್ಕೆ ಹಕ್ಕುದಾರಿಕೆ ಪಡೆದಿರುವ ಆರೋಪಕ್ಕೆ ಗುರಿಯಾಗಿದೆ.
ಬೆಂಗಳೂರು ಉತ್ತರ ತಾಲೂಕು ಗಡೇನಹಳ್ಳಿ ಗ್ರಾಮದ ಸರ್ವೆ ನಂಬರ್ 22ರಲ್ಲಿನ ಗೋಮಾಳ ಜಾಗದ ಆರು ಎಕರೆ ಭೂಮಿ ಅರ್ಹತೆಯೇ ಇಲ್ಲದಿದ್ದರೂ ಸಾಂಗ್ಲಿಯಾನಾ ಕುಟುಂಬ ಸದಸ್ಯರ ಹೆಸರಿನಲ್ಲಿದೆ. ಸಾಂಗ್ಲಿಯಾನಾ ಅವರ ಪತ್ನಿ ಎಲಿಜಬೆತ್, ಪುತ್ರಿ ಯೋನ ಪಿಂಟೋ ಹಾಗೂ ಅಳಿಯ ಅಡಿಲ್ ಕಾಮತ್ ಪಿಂಟೋ ಹೆಸರಿಗೆ ತಲಾ 2 ಎಕರೆಯಂತೆ ಒಟ್ಟು 6 ಎಕರೆ ಗೋಮಾಳ ಜಾಗವನ್ನು ನಕಲಿ ದಾಖಲೆಗಳ ಆಧಾರದಲ್ಲಿ ಮಂಜೂರು ಮಾಡಲಾಗಿದೆ ಎಂದು ಭೂ ಕಬಳಿಕೆ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಆರೋಪಿಸಿದ್ದಾರೆ.
ಗೋಮಾಳ ಜಾಗ ಕಬಳಿಕೆಗೆ ಸಂಬಂಧಿಸಿದಂತೆ ಶನಿವಾರ ಸುದ್ಧಿಗೋಷ್ಠಿಯಲ್ಲಿ ದಾಖಲೆಗಳನ್ನು ಬಹಿರಂಗಪಡಿಸಿದ ಅವರು, ಗಡೇನಹಳ್ಳಿ ಗೋಮಾಳ ಜಾಗವನ್ನು ಸಾಂಗ್ಲಿಯಾನಾ ಕುಟುಂಬಕ್ಕೆ ಮಂಜೂರು ಮಾಡಿಕೊಡಲು ಭಾರಿ ಹುನ್ನಾರವೇ ನಡೆದಿದೆ.
1970-80ನೇ ಸಾಲಿನಲ್ಲಿ ದರಖಾಸ್ತು ಮೂಲಕ ಗೋಮಾಳ ಜಾಗ ಮಂಜೂರು ಆಗಿರುವುದಾಗಿ ಪಹಣಿ ಪತ್ರದಲ್ಲಿ ನಮೂದಿಸಲಾಗಿದೆ. ಹಾಗೆಯೇ ಜಾನ್ ಅಡಿಲ್ ಕಾಮತ್ ಪಿಂಟೋ ಹೆಸರಿನ ಆರ್ಟಿಸಿಯಲ್ಲೂ ನ್ಯಾಯಾಲಯದಲ್ಲಿ ಪ್ರಕರಣವಿರುವುದಾಗಿ ಹೇಳಲಾಗಿದೆ.
ಜಾಗಕ್ಕೆ ಸಂಬಂಧಿಸಿದಂತೆ ಯಾವುದೇ ತಡೆಯಾಜ್ಞೆ ಇಲ್ಲದಿದ್ದರೂ ಈ ರೀತಿ ಆರ್ಟಿಸಿಯಲ್ಲಿ ಉದ್ದೇಶಪೂರ್ವಕವಾಗಿ ನ್ಯಾಯಾಲಯದ ಪ್ರಕರಣ ದಾಖಲಿಸಿರುವುದು ಭೂಕಬಳಿಕೆ ಪ್ರಕರಣಗಳನ್ನು ಮುಚ್ಚಿ ಹಾಕುವ ಯತ್ನವಾಗಿದೆ ಎಂದು ಅವರು ದೂರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


