ಕಸದ ರಾಶಿ ಕಣ್ಣಿನ ಸೋಂಕಿಗೆ ಕಾರಣ!

ಬೆಂಗಳೂರು: ರಾಮಚಂದ್ರ ರಾವ್ ಅವರು ಪ್ರತಿದಿನ ಬೆಳಗ್ಗೆ ಬೇಗನೆ ಎದ್ದು ತಮ್ಮ ಮನೆಯ ಗೇಟಿನ ಬಳಿ ನಿಂತು ಮನೆಯ ಹತ್ತಿರ ಕಸ ಎಸೆಯದಂತೆ ಜನರಿಗೆ ಮನವಿ ಮಾಡಿಕೊಳ್ಳುತ್ತಾರೆ. ಇದು ಕಳೆದು ಕೆಲವು ತಿಂಗಳಿಂದ ರಾಜರಾಜೇಶ್ವರಿ ನಗರದ ನಿವಾಸಿಗಳಿಗೆ ನಿತ್ಯದ ವಾಡಿಕೆಯಾಗಿಬಿಟ್ಟಿದೆ.
ಕಳೆದ ಎರಡು ವಾರಗಳಿಂದ ಬಿಬಿಎಂಪಿಯವರು ಕಸವನ್ನು ಎತ್ತದೆ, ಜನರ ಮನೆಗಳ ಹತ್ತಿರ ಇರುವ ಈ ಕಸದ ಬುಟ್ಟಿಗಳು ತುಂಬಿ ನೆಲಕ್ಕೆ ಚೆಲ್ಲಿ ಗಬ್ಬು ನಾರುತ್ತಿವೆ.
ಗಬ್ಬು ವಾಸನೆಯಲ್ಲದೇ, ಸೊಳ್ಳೆಗಳಿಂದ ಹರಡುವ ಮಾರಕ ರೋಗಗಳಲ್ಲದೆ, ಈ ಕಸ ಕಣ್ಣಿನ ಸೋಂಕನ್ನೂ ಹರಡುವ ಸಾಧ್ಯತೆ ಇದೆ. ಈ ಕಸದ ಡಬ್ಬಗಳ ಹತ್ತಿರ ಇರುವ ಮನೆಗಳ ನಿವಾಸಿಗಳು ಕಣ್ಣಿನ ಸೋಂಕಿನ ತೊಂದರೆಗಳಿಂದ ನರಳುತ್ತಿದ್ದಾರೆ.
ಇಲ್ಲಿ ಜನರು ಎಲ್ಲ ಮೂಲೆಗಳಲ್ಲೂ ಕಸ ಎಸೆಯುತ್ತಿದ್ದಾರೆ, ಕಾಂಟ್ರಾಕ್ಟರ್ ಆ ಕಸವನ್ನು ತೆಗೆದು ಹಾಕುತ್ತಿಲ್ಲ ಎನುತ್ತಾರೆ ರಾಮಚಂದ್ರ.
ಅಲ್ಲಿ ಕಸ ಹಾಕದಿರಲೆಂದು ಕೆಲವು ದಿನ ನನ್ನ ಕಾರನ್ನು ಅಲ್ಲಿ ನಿಲ್ಲಿಸಲು ಪ್ರಯತ್ನಿಸಿದೆ. ಆದರೆ ಬೆಳಗ್ಗೆ ಆದಂತೆ ನನ್ನ ಕಾರಿನ ಕೆಳಗೆ ಸುತ್ತೆಲ್ಲಾ ಕಸ ಕಂಡು ಆಶ್ಚರ್ಯವಾಯಿತು ಎನ್ನುತ್ತಾರೆ.
ಬಿಬಿಎಂಪಿ ಅಧಿಕಾರಿಗಳಿಗೆ ಎಷ್ಟು ದೂರು ಕೊಟ್ಟರು ಏನೂ ಪ್ರಜೋಜನವಾಗಿಲ್ಲ, ಆದುದರಿಂದ ಜನರನ್ನು ಕಸ ಹಾಕದಂತೆ ಬೇಡಿಕೊಳ್ಳದೆ ಅನ್ಯ ಮಾರ್ಗವಿಲ್ಲ ಎನ್ನುತ್ತಾರೆ ರಾವ್.
ನಾರಾಯಣ ನೇತ್ರಾಲಯದ ಕಣ್ಣಿನ ತಜ್ಞ ಡಾ. ಭುಜಂಗ ಶೆಟ್ಟಿ ಅವರು ಹೇಳುವಂತೆ ಜನರ ಕಣ್ಣಿನ ತೊಂದರೆಗಳಿಗೆ ಕೊಳೆತ ಕಸವೇ ಕಾರಣ ಇರಬಹುದು. ಇಂತಹ ಕಸವನ್ನು ಸುಡುವಾಗ ಬರುವ ಹೊಗೆಯಿಂದ, ಪಟಾಕಿ ಹೊಡೆಯುವುದರಿಂದ ಮತ್ತು ಧೂಳಿನಿಂದ ದೂರವಿರುವಂತೆ ಜನರಿಗೆ ಸೂಚಿಸುತ್ತಾರೆ. ಸೋಂಕು ತಗಲಿದವರಿಂದ ತಮಗೂ ಸೋಂಕು ತಗಲದಂತೆ ಎಚ್ಚರಿಕೆ ವಹಿಸುವಂತೆ ತಿಳಿಸುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


