ಪಟಾಕಿ ಸಿಡಿತ: 33 ಮಕ್ಕಳ ಕಣ್ಣಿಗೆ ಗಾಯ

ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಸಿಡಿತದಿಂದಾಗಿ ನಗರದಲ್ಲಿ ಒಟ್ಟು 33 ಮಕ್ಕಳ ಕಣ್ಣಿಗೆ ಗಾಯಗಳಾಗಿವೆ.
ಕಳೆದ ರಾತ್ರಿ ಪಟಾಕಿ ಹೊಡೆಯುವ ಸಂದರ್ಭದಲ್ಲಿ ಪಟಾಕಿ ಸಿಡಿದು 33ಕ್ಕೂ ಹೆಚ್ಚಿನ ಮಕ್ಕಳು ತಮ್ಮ ಕಣ್ಣಿಗೆ ಗಾಯ ಮಾಡಿಕೊಂಡಿದ್ದಾರೆ. ಇದರಲ್ಲಿ ಹೆಚ್ಚಿನವರಿಗೆ ಪಟಾಕಿ ಹೊಡೆಯುತ್ತಿದ್ದುದ್ದನ್ನು ನೋಡುತ್ತಿದ್ದ ವೇಳೆ ಪಟಾಕಿ ಸಿಡಿದು ಕಣ್ಣಿಗೆ ಗಾಯಗಳಾಗಿವೆ. ಇದರಲ್ಲಿ ನಾಲ್ವರು ಬಾಲಕರಿಗೆ ಕಣ್ಣಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು ನಾಲ್ವರಿಗೂ
ಒಂದು ಕಣ್ಣಿನ ದೃಷ್ಠಿ ಸಂಪೂರ್ಣವಾಗಿ ಹೋಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸಂಜೆ ದಾರಿಯಲ್ಲಿ ಹೋಗುತ್ತಿದ್ದ ವೇಳೆ ಯಾರೋ ಸಿಡಿಸಿದ ಪಟಾಕಿಯ ಕಿಡಿ ಕಣ್ಣಿಗೆ ಬಿದ್ದಿದ್ದರಿಂದ ರಾಮಕೃಷ್ಣ ಹೆಗ್ಡೆ ನಗರ ನಿವಾಸಿ 12 ವರ್ಷದ ಚಂದ್ರುವಿನ ಎಡಗಣ್ಣಿಗೆ ಹಾನಿಯಾಗಿದೆ. ಇನ್ನು ವಾಲ್ಮೀಕಿ ನಗರದ ನಿವಾಸಿ ಎಂಟು ವರ್ಷದ ಶಾಹಿದ್ ಪಾಷ ಬುಧವಾರ ರಾತ್ರಿ ಪಟಾಕಿಗೆ ಬೆಂಕಿ ತಗುಲಲಿಲ್ಲ ಎಂದು ಬಾಯಿಯಿಂದ ಹೊತ್ತಿಸಲು ಹೋದ ವೇಳೆ ಪಟಾಕಿ ಸಿಡಿದು ಬಲಗಣ್ಣಿಗೆ ಹಾನಿ ಯಾಗಿದೆ. ಈ ಇಬ್ಬರು ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರ ದೃಷ್ಟಿಗೆ ಆಗಿರುವ ಹಾನಿ ಕುರಿತು ಈಗಲೇ ಏನನ್ನೂ ಹೇಳಲಾಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇಳಿದಂತೆ ಮಿಂಟೋ ಆಸ್ಪತ್ರೆಯಲ್ಲಿ 6 ಮಂದಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ನಗರದ ನಾರಾಯಣ ನೇತ್ರಾಲಯದಲ್ಲಿ 15 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ , ರಂಗಲಕ್ಷ್ಮೀ ನೇತ್ರಾಲಯದಲ್ಲಿ ಇಬ್ಬರು ಮಕ್ಕಳು ಹಾಗೂ ನೇತ್ರಧಾಮದಲ್ಲಿ ಒಬ್ಬ ಬಾಲಕ ಹಾಗೂ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಮತ್ತೊಬ್ಬ ಬಾಲಕ ಪಟಾಕಿ ಅನಾಹುತದಲ್ಲಿ ಕಣ್ಣಿಗೆ ಗಾಯ ಮಾಡಿಕೊಂಡು ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಬಾಲಕರ ದೃಷ್ಟಿಗೆ ಯಾವುದೇ ಧಕ್ಕೆ ಇಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


