ಜಿಲ್ಲಾ ಸುದ್ದಿ

ಬೆಳಕಿನ ಹಬ್ಬದಲ್ಲಿ ಬೆಸ್ಕಾಂ ಕತ್ತಲಾಟ

ಬೆಳಕಿನ ಹಬ್ಬದಲ್ಲಿ ಬೆಸ್ಕಾಂ ಕತ್ತಲಾಟ
Published On :

ಬೆಂಗಳೂರು: ಬೆಳಕಿನಿಂದ ಕತ್ತಲಿನೆಡೆಗೆ...! ಇದು ರಾಜ್ಯದ 8 ಜಿಲ್ಲೆಗಳ ಬೆಳಕಿನ ಮೂಲ ಬೆಸ್ಕಾಂನ ಸಂದೇಶ.

ಇಡೀ ನಾಡು ದೀಪಾವಳಿ ಸಂಭ್ರಮದಲ್ಲಿದ್ದರೆ ಬೆಸ್ಕಾಂ, ವಿದ್ಯುಕ್ ಕಡಿತಗೊಳಿಸಿ ಹಬ್ಬದ ಉದ್ದೇಶವನ್ನು ನಾಶ ಮಾಡುತ್ತಿದೆ. ಅದರಲ್ಲೂ ರಾಜಧಾನಿ  ಬೆಂಗಳೂರಿನಲ್ಲಿ ತಾಸುಗಟ್ಟಲೇ ವಿದ್ಯುತ್ ತೆಗೆಯುವ ಮೂಲಕ ಜನರ ಆಕ್ರೋಶಕ್ಕೆ ಗುರಿಯಾಗಿದೆ.  ಮಹಾನಗರದಲ್ಲಿ ದಿನ 24 ಗಂಟೆಗಳೂ ವಿದ್ಯುತ್ ತೆಗೆಯುವ ಮೂಲಕ ಜನರ ಆಕ್ರೋಶಕ್ಕೆ ಗುರಿಯಾಗಿದೆ. ಮಹಾನಗರದಲ್ಲಿ ದಿನ 24 ಗಂಟೆಗಳೂ ವಿದ್ಯುತ್ ಪೂ ರೈಸುವುದಾಗಿ ಹೇಳಿರುವ  ಬೆಸ್ಕಾಂ ಸದ್ದಿಲ್ಲದೆ 'ಪೀಕ್ ಹವರ್‌' ನಲ್ಲೇ ಅನಧಿಕೃತ ಲೋಡ್‌ಶೆಡ್ಡಿಂಗ್ ಮಾಡುತ್ತಿದೆ. ಈ ಮೂಲಕ ರಾಜ್ಯ ವಿದ್ಯುತ್ ನಿಯಂತ್ರಣ  ಕಾಯ್ದೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಕೆಂಗಣ್ಣಿಗೆ ಗುರಿಯಾಗುತ್ತಿದೆ.

ಅನಧಿಕೃತ ಲೋಡ್ ಶೆಡ್ಡಿಂಗ್

ವಾರದ ಹಿಂದೆಯಷ್ಟೇ ದಿಢೀರ್ ಲೋಡ್ ಶೆಡ್ಡಿಂಗ್ ಹೇರುವುದಾಗಿ ಹೇಳಿದ್ದ ಇಂಧನ ಇಲಾಖೆಗೆ ಕೆಇಆರ್‌ಸಿ ತಪರಾಕಿ ಹಾಕುತ್ತಿದ್ದಂತೆ ಎಚ್ಚೆತ್ತುಕೊಂಡಿತು. ಲೋಡ್ ಶೆಡ್ಡಿಂಗ್ ನಿರ್ಧಾರವನ್ನು  3 ದಿನಗಳಲ್ಲಿ ವಾಪಸ್ ತೆಗೆದುಕೊಂಡಿತು. ಆದರೂ, ದಿನಕ್ಕೆ 2 ರಿಂದ 3 ಗಂಟೆ ಅಘೋಷಿತ, ಅನಧಿಕೃತ ಲೋಡ್‌ಶೆಡ್ಡಿಂಗ್ ವಿಧಿಸಲಾಗುತ್ತಿದೆ. ಇದರಿಂದಾಗಿ ರಾಜರಾಜೇಶ್ವರಿನಗರ, ಹನುಮಂತನಗರ, ಕತ್ರಿಗುಪ್ಪೆ, ಶ್ರೀನಗರ ಸೇರಿದಂತೆ ಬೆಂಗಳೂರು ದಕ್ಷಿಣದಲ್ಲಿ 2 ತಾಸು ವಿದ್ಯುತ್ ಪೂರೈಕೆ ಇಲ್ಲದಂತಾಗಿದೆ. ಅದೇ ರೀತಿ ಬಾಣಸ ವಾಡಿ, ಕಗ್ಗದಾಸಪುರ, ಎಚ್‌ಎಎಲ್, ಮರುತ್‌ಹಳ್ಳಿ, ಅಗರ, ಮಹಾದೇವಪುರ, ಜೆ.ಪಿ.ನಗರ ಮತ್ತು ಕೊತ್ತನೂರು ಪ್ರದೇಶಗಳು ತೊಂದರೆಗೀಡಾಗಿವೆ.

ವಿದ್ಯುತ್ ತೆಗೆದರೆ ಬೆಸ್ಕಾಂಗೆ ನಷ್ಟ

ಪೀಕ್ ಹವರ್‌ನಲ್ಲಿ ವಿದ್ಯುತ್ ಬೇಡಿಕೆ 3,800 ಮೆ.ವ್ಯಾ. ಇದೆ. ಎಲ್ಲೆಡೆ ಉತ್ತಮ ಮಳೆಯಾಗಿರುವುದರಿಂದ ವಿದ್ಯುತ್ ಪೂರೈಕೆ ಕೂಡಾ 3,800 ಮೆ.ವ್ಯಾ.ನಷ್ಟೇ ಇದೆ. ಹಾಗಿದ್ದರೂ ಲೋಡ್ ಶೆಡ್ಡಿಂಗ್  ನಡೆಯುತ್ತಿದೆ.

ಇಲಾಖೆಯಲ್ಲೇ ವೈರುಧ್ಯ

ಲೋಡ್‌ಶೆಡ್ಡಿಂದ್‌ಗೆ ನಿರ್ವಹಣೆ ನೆಪ ಒಡ್ಡಲಾಗುತ್ತಿದೆ. ಮಳೆ ಮತ್ತು ಇತರ ಕಾರಣಗಳಿಂದಲೂ ವಿದ್ಯುತ್ ಕಡಿತವಾಗುತ್ತಿದೆ. ಆದರೆ, ಇದನ್ನು ಲೋಡ್‌ಶೆಡ್ಡಿಂಗ್ ಎಂದು ಭಾವಿಸಬಾರದು ಎಂದು ಬೆಸ್ಕಾಂ ಹಿರಿ ಅಧಿಕಾರಿಗಳು ಹೇಳುತ್ತಾರೆ.

ಆದರೆ ಇದನ್ನು ಅದೇ ಸಂಸ್ಥೆಯ ಕೆಲವು ಸಿಬ್ಬಂದಿಯೇ ಒಪ್ಪುವುದಿಲ್ಲ. ಹಾಗೊಂದು ವೇಳೆ ನಿರ್ವಹಣೆ ಕಾರಣದಿಂದ ಲೋಡ್ ಶೆಡ್ಡಿಂಗ್ ಆಗಿದ್ದರೆ ಕೆಲವೇ ತಾಸುಗಳಲ್ಲಿ ಪರಿಹಾರವಾಗುತ್ತಿತ್ತು. ಹೀಗಾಗಿ, ಇದು ಅಘೋಷಿತ ಲೋಡ್‌ಶೆಡ್ಡಿಂಗ್ ಎಂದು ನಿರ್ವಹಣಾ ವಿಭಾಗದ ಸಿಬ್ಬಂದಿ ಹೇಳುತ್ತಾರೆ.

ಹಾಗಾದರೆ ಸಮಸ್ಯೆಯೇನು?
ಸಮಸ್ಯೆ ಇರುವುದು ಬೆಸ್ಕಾಂ ವ್ಯವಸ್ಥೆ ಮತ್ತು ವಿದ್ಯುತ್ ಪೂರೈಕೆಯಲ್ಲಿ, ಕೆಪಿಟಿಸಿಎಲ್ ಹಂಚಿಕೆ ಮಾಡುವ ವಿದ್ಯುತ್ ಅನ್ನು ಬೆಸ್ಕಾಂ ವ್ಯಾಪ್ತಿಯಲ್ಲಿ ಸಮನಾಗಿ ಹಂಚಿಕೆ ಮಾಡಬೇಕು. ಅಂದರೆ 100 ಮೆ.ವ್ಯಾ ವಿದ್ಯುತ್ ಕೊರತೆಯಾಗುತ್ತದೆ  ಎಂದರೆ ಅದನ್ನು ಎಲ್ಲಾ ಪ್ರದೇಶಗಳಿಗೂ ಕೊರತೆಯಾಗುವಂತೆ ಮಾಡಬೇಕು. ಆದರೆ ಟ್ರಾನ್ಸ್‌ಮಿಷನ್  ವಿಭಾಗದ ಸಿಬ್ಬಂದಿ, ಕೊರತೆಯಾಗುವ ವಿದ್ಯುತ್ತನ್ನು ಒಂದು ಪ್ರದೇಶಕ್ಕೆ ಮಾತ್ರ ಲೋಡ್‌ಶೆಡ್ಡಿಂಗ್ ಮಾಡುವ ಮೂಲಕ ಸಮಸ್ಯೆ ತಂದೊಡ್ಡುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.