ಜಿಲ್ಲಾ ಸುದ್ದಿ

ಕೇಂದ್ರೀಯ ಸದನ: ಕನ್ನಡಕ್ಕಿಲ್ಲ ಸ್ಪಂದನ

ಕೇಂದ್ರೀಯ ಸದನ: ಕನ್ನಡಕ್ಕಿಲ್ಲ ಸ್ಪಂದನ
Published On :

ಬೆಂಗಳೂರು: ಸರ್ಕಾರಿ ಕಚೇರಿ ಎಂಬುದಕ್ಕೆ ಅಪವಾದವೆಂಬಂತೆ ಇರುವ ಇದು ಬೆಂಗಳೂರಿನ ಕೋರಮಂಗಲದ ಕೇಂದ್ರೀಯ ಸದನದಲ್ಲಿ ಎಲ್ಲವೂ ಸರಿ ಇದೆ ಎಂಬುದು ಸತ್ಯ. ಆದರೆ, ಕನ್ನಡ ಮಾತ್ರ ಇಲ್ಲಿ ಹಿಂದೆ, ಹಿಂದಿ ಎಲ್ಲಕ್ಕಿಂತ ಮುಂದೆ. ದಕ್ಷಿಣವೋ, ಉತ್ತರವೋ ಕೇಂದ್ರ ಸರ್ಕಾರದ ಕಚೇರಿಗಳು ಅಂದ್ರೆ ಅಲ್ಲಿ ಹಿಂದಿ ಭಾಷಿಕರದ್ದೇ ದರ್ಬಾರು. ಕೇಂದ್ರೀಯ ಸದನದಲ್ಲೂ ಸತ್ಯ.

ಕೇಂದ್ರೀಯ ಸದನದಲ್ಲಿ ಹಿಂದಿ ಭಾಷಿಕರ ಸಂಖ್ಯೆ ಶೆ.85ರಷ್ಟು ಉಳಿದಂತೆ ಕನ್ನಡ ಹಾಗೂ ತಮಿಳು ಮಾತನಾಡುವವರು ತಲಾ ಶೇ.5ರಷ್ಟು. ಕೇಂದ್ರ ಸರ್ಕಾರದ ಕಚೇರಿಗಳೆಂದ ಮೇಲೆ ಅಲ್ಲಿ ಹಿಂದಿ ಇರಲೇಬೇಕು. ಈ ಬಗ್ಗೆ ಯಾರು ಕೂಡ ತಕರಾರು ಎತ್ತಲಾರರು. ಆದರೆ, ನಿತ್ಯ ಅಲ್ಲಿಗೆ ಕೆಲಸಕಾರ್ಯಗಳ ಮೇಲೆ ಬಂದು ಹೋಗುವ ಸಾರ್ವಜನಿಕರ ಪೈಕಿ ಕನ್ನಡದವರೇ ಹೆಚ್ಚು.

ಭಾಷೆಯ ವಿಚಾರದಲ್ಲಿ ಇವರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ ಎನ್ನುವುದು ನಾವು ನಡೆಸಿದ ರಿಯಾಲಿಟಿ ಚೆಕ್‌ನಿಂದ ತಿಳಿಯಿತು. ಇಲ್ಲಿನ ಆಡಳಿತ ವ್ಯವಸ್ಥೆಯಲ್ಲಿ ಸಾರ್ವಜನಿಕರು ಮತ್ತು ಅಧಿಕಾರಿಗಳ ನಡುವೆ ಭಾಷೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ ಎನ್ನುವುದು ನಾವು ನಡೆಸಿದ ರಿಯಾಲಿಟಿ ಚೆಕ್‌ನಿಂದ ತಿಳಿಯಿತು. ಇಲ್ಲಿನ ಆಡಳಿತ ವ್ಯವಸ್ಥೆಯಲ್ಲಿ ಸಾರ್ವಜನಿಕರು ಮತ್ತು ಅಧಿಕಾರಿಗಳ ನಡುವೆ ಭಾಷೆ ಸಾಕಷ್ಟು ತೊಡಕುಂಟು ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.