ಜಿಲ್ಲಾ ಸುದ್ದಿ

ಕೂಡಗಿ ಸ್ಥಾವರ ಸ್ಥಗಿತ ಪ್ರಶ್ನೆಯೇ ಇಲ್ಲ: ಡಿಕೆಶಿ

ಕೂಡಗಿ ಸ್ಥಾವರ ಸ್ಥಗಿತ ಪ್ರಶ್ನೆಯೇ ಇಲ್ಲ: ಡಿಕೆಶಿ
Published On :

ಕನ್ನಡಪ್ರಭ ವಾರ್ತೆ, ಬೆಂಗಳೂರು,ಸೆ.6
ಕೂಡಗಿ ಉಷ್ಣ ವಿದ್ಯುತ್ ಸ್ಥಾವರನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸದೇ ಇರಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಸ್ಥಾವರಕ್ಕೆ ಸ್ಥಳೀಯರು ಹಾಗೂ ರೈತ ಪ್ರತಿನಿಧಿಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇಂಧನ ಸಚಿವ ಡಿ. ಕೆ.ಶಿವಕುಮಾರ್ ಶನಿವಾರ, ಜನಪ್ರತಿನಿಧಿಗಳು ಮತ್ತು ರೈತ ಪ್ರತಿನಿಧಿಗಳ ಸಭೆ ಕರೆದಿದ್ದರು. ಸಭೆಗೆ ರೈತ ನಾಯಕರು ಹಾಕಿದ್ದ ಬಹಿಷ್ಕಾರದ ಮಧ್ಯೆಯೇ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿರುವ ಇಂಧನ ಸಚಿವ ಡಿ.ಕೆ ಶಿವಕುಮಾಕ್, ರೈತ ಪ್ರತಿನಿಧಿಗಳ ಮನವೊಲಿಕೆಗೆ ಸರ್ಕಾರ ಸಾಕಷ್ಟು ಕ್ರಮ ತೆಗೆದುಕೊಂಡಿದೆ. ಯೋಜನೆಯಿಂದ ಭೂಮಿ ಕಳೆದುಕೊಂಡ ಪ್ರತಿ ಕುಟುಂಬದ ಸದಸ್ಯರಿಗೂ ಇಲ್ಲಿ ಕೆಲಸ ನೀಡಲಾಗುವುದು ಎಂದು ಹೇಳಿದರು.

ಜತೆಗೆ ಇಲ್ಲಿ ಇನ್‌ಸ್ಪೆಕ್ಟರ್ ನೇತೃತ್ವದ ಪೊಲೀಸ್ ಠಾಣೆ ನಿರ್ಮಿಸಲಾಗುವುದು. ಸಮುದಾಯ ಭವನ ಅಭಿವೃದ್ಧಿ, ಅಧಿಕಾರಿಗಳ ವಸತಿ ಸಮುಚ್ಚಯ ಸೇರಿದಂತೆ ಕಾಮಗಾರಿ ಆರಂಭವಾಗಿದ್ದು, ಅಗತ್ಯ ಬಿದ್ದರೆ ರೈತರನ್ನು ಉಷ್ಣಸ್ಥಾವರ ಇರುವ ನೆರೆ ರಾಜ್ಯಗಳಿಗೆ ಕರೆದೊಯ್ದು ಅರಿವು ಮೂಡಿಸಲಾಗುವುದು ಎಂದರು.

ವಾಪಸಿಗೆ ಕ್ರಮ: 'ಮುಗ್ಧ ರೈತರಿಗೆ ಮತ್ತು ಸ್ಥಳೀಯರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗುವುದಕ್ಕೆ ಬಿಡುವುದಿಲ್ಲ. ಜತೆಗೆ ಯೋಜನೆ ವ್ಯಾಪ್ತಿಯಲ್ಲಿ ಹೆಚ್ಚಿನ ಕೆಲಸವನ್ನು ಸ್ಥಳೀಯರಿಗೆ ನೀಡಲಾಗುವುದು' ಎಂದು ಹೇಳಿದರು.

ಕೈಗಾರಿಕಾ ಕ್ಷೇತ್ರದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕೆಂಬುದು ನಮ್ಮ ಸರ್ಕಾರದ ಉದ್ದೇಶ. ಮುಖ್ಯಮಂತ್ರಿ ಈಗಾಗಲೇ ಕಾರ್ಮಿಕ ಇಲಾಖೆಗೆ ವರದಿ ತಯಾರಿಸುವಂತೆ ಸೂಚನೆ ನೀಡಿದ್ದಾರೆ. ವಿದ್ಯುತ್ ಖರೀದಿ ಮತ್ತು ಉತ್ಪಾದನಾ ಅವ್ಯವಹಾರದ ಬಗ್ಗೆ ಸದನ ಸಮಿತಿ ರಚಿಸಲಾಗಿದ್ದು, ಯಾವುದೇ ಕಾರಣಕ್ಕೂ ಪೂರ್ವಗ್ರಹ ಪೀಡಿತರಾಗಿರುವುದಿಲ್ಲ ಎಂದು ತಿಳಿಸಿದರು.

  • ಯೋಜನೆಗೆ ಆಲಮಟ್ಟಿ ಅಣೆಕಟ್ಟಿಯಿಂದ 5.2 ಟಿಎಂಸಿ ಹಂಚಿಕೆ
  • 3445 ಎಕರೆ ಅಗತ್ಯ ಭೂಮಿ ಎನ್‌ಟಿಪಿಸಿಗೆ ಗುರುತು
  • ಉಳಿದ ಭೂಮಿ ಕೆಐಎಡಿಬಿ ಮೂಲಕ ಹಂಚಿಕೆ
  • ಒಟ್ಟು 4000 ಎಕರೆ ಭೂಪ್ರದೇಶವನ್ನು ನಿಷೇಧಿತ ಪ್ರದೇಶ ಘೋಷಣೆ
  • ಯೋಜನೆಗೆ ಅಗತ್ಯ ಕಲ್ಲಿದ್ದಲನ್ನು ಛತ್ತೀಸಗಡದಿಂದ ಖರೀದಿಸಲು ನಿರ್ಧಾರ
  • ರು.15166 ಕೋಟಿ: ಯೋಜನೆಗೆ ಕೇಂದ್ರ ಸರ್ಕಾರದ ಸಹಾಯಧನ
  • 2400 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ
  • 1600 ಮೆಗಾ ವ್ಯಾಟ್ ಮೊದಲ ಹಂತದ ಘಟಕ ಉತ್ಪಾದನಾ ಸಾಮರ್ಥ್ಯ
  • ಜೂನ್ 2015ಕ್ಕೆ ಮೊದಲ ಹಂತ ಪೂರ್ಣಕ್ಕೆ ಗಡುವು
  • 2016ಕ್ಕೆ 3ನೇ ಹಂತ ಪೂರ್ಣಗೊಳಿಸುವ ಗುರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.