ಜಿಲ್ಲಾ ಸುದ್ದಿ

ಮಾಧ್ಯಮಗಳ ಕಣ್ತಪ್ಪಿಸಲು ಮುಂದಾಗಿದ್ದ 'ನಿತ್ಯಾ' ಶಿಷ್ಯರು

ಮಾಧ್ಯಮಗಳ ಕಣ್ತಪ್ಪಿಸಲು ಮುಂದಾಗಿದ್ದ 'ನಿತ್ಯಾ' ಶಿಷ್ಯರು
Published On :

ಬೆಂಗಳೂರು: ರಾಸಲೀಲೆ ಪ್ರಕರಣ ಸಂಬಂಧ ಪುರುಷತ್ವ ಪರೀಕ್ಷೆಗೆ ಒಳಪಡಲು ನಿತ್ಯಾನಂದ ಆಗಮಿಸುತ್ತಿದ್ದರೆ, ಅತ್ತ ನಿತ್ಯಾ ಶಿಷ್ಯರು ಮಾಧ್ಯಮಗಳ ಕಣ್ಣು ತಪ್ಪಿಸಲು ಆಶ್ರಮದಲ್ಲಿ ದೊಡ್ಡ ಹೈಡ್ರಾಮವನ್ನೇ ನಡೆಸಿದರು.

ಪುರುಷತ್ವ ಪರೀಕ್ಷೆಗೆ ನಿತ್ಯಾನಂದ ಆಗಮಿಸುವ ಸುದ್ದಿ ತಿಳಿದ ಮಾಧ್ಯಮಗಳು ಬಿಡದಿ ಆಶ್ರಮದಲ್ಲಿ ಬೆಳಗ್ಗೆಯಿಂದಲೇ ಮೊಕ್ಕಾಂ ಹೂಡಿದ್ದವು. ಈ ವಿಚಾರ ತಿಳಿದ ಆಶ್ರಮದ ಸಿಬ್ಬಂದಿ ತಮ್ಮಲ್ಲೇ ಒಬ್ಬರಿಗೆ ನಿತ್ಯಾನಂದನ ವೇಷ ಧರಿಸಿದ್ದರು. ಬಳಿಕ ಕಾರಿನಲ್ಲಿ ತೆರಳು ಮೂಲಕ ಮಾಧ್ಯಮಗಳ ಕಣ್ತಪ್ಪಿಸಲು ಮುಂದಾಗಿದ್ದರು. ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಮಾಧ್ಯಮಗಳು ನಿತ್ಯಾನಂದನೇ ಕಾರಿನಲ್ಲಿ ತೆರುಳುತ್ತಿದ್ದಾನೆ ಎಂದು ಭಾವಿಸಿ ಅದನ್ನು ಬಿತ್ತರಿಸಿದ್ದವು. ಬಳಿಕ ನಿತ್ಯಾನಂದ ನೇರವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಆಗಮಿಸಿದಾಗ ಸತ್ಯಾಂಶ ತಿಳಿಯಿತು.

ಈ ನಡುವೆ ಮುಸುಕುದಾರಿ ನಿತ್ಯಾನಂದನನ್ನು ಕರೆದೊಯ್ಯುತ್ತಿದ್ದ ವಾಹನದ ಚಾಲಕ ಮಾಧ್ಯಮಗಳ ಕಣ್ತಪ್ಪಿಸುವ ಸಲುವಾಗಿ ಕಾರನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿದ ಪರಿಣಾಮ ರಸ್ತೆಯಲ್ಲಿದ್ದ ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಆದರೆ ಅದೃಷ್ಟವಶಾತ್ ಬೈಕ್ ಸವಾರರಿಗೆ ಯಾವುದೇ ಅಪಾಯವಾಗಿಲ್ಲ. ಕಾರಿನಲ್ಲಿ ನಿತ್ಯಾನಂದ ಇದ್ದಾನೆ ಎಂದು ಭಾವಿಸಿದ ಬೈಕ್ ಸವಾರರು ಆತನನ್ನು ನೋಡಲು ಮುಗಿಬಿದ್ದಾಗ ಈ ಘಟನೆ ಸಂಭವಿಸಿದೆ.

ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಕೆಲ ಕಾಲ ಆ ಕಾರನ್ನು ಅಡ್ಡಗಟ್ಟಿ ಚಾಲಕನೊಂದಿಗೆ ಮಾತಿನ ಚಕಮಕಿ ನಡೆಸಿದ್ದರು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು. ಅಷ್ಟು ಹೊತ್ತಿಗಾಗಲೇ ಪುರುಷತ್ವ ಪರೀಕ್ಷೆಗೆ ಒಳಪಡಲು ನಿತ್ಯಾನಂದ ಸ್ವಾಮಿ ವಿಕ್ಟೋರಿಯಾ ಆಸ್ಪತ್ರೆಗೆ ಆಗಮಿಸಿದ್ದನು. ಮಾಧ್ಯಮಗಳ ಕಣ್ತಪ್ಪಿಸಿ ಆಶ್ರಮದ ಮತ್ತೊಂದು ಗೇಟಿನ ಮೂಲಕ ನಿತ್ಯಾನಂದ ವಿಕ್ಟೋರಿಯಾ ಆಸ್ಪತ್ರೆಗೆ ತೆರಳಿದ್ದನು.

ಆದರೆ ಅಚ್ಚರಿಯ ವಿಷಯವೆಂದರೆ ಪುರುಷತ್ವ ಪರೀಕ್ಷೆಗೆ ಒಳಪಡಲು ನಿತ್ಯಾನಂದ ಹಿಂದೇಟು ಹಾಕಬಹುದು ಎಂದೇ ಹೇಳಲಾಗುತ್ತಿತ್ತು. ಆದರೆ ಇಂದು ನಿಗದಿತ ಸಮಯಕ್ಕಿಂತ ಮೊದಲೇ ಅಂದರೆ ಬೆಳಗ್ಗೆ 7.55ಕ್ಕೇ ನಿತ್ಯಾನಂದ ವಿಕ್ಟೋರಿಯಾ ಆಸ್ಪತ್ರೆಗೆ ಆಗಮಿಸುವ ಮೂಲಕ ಅಧಿಕಾರಿಗಳಲ್ಲಿ ಅಚ್ಚರಿ ಮೂಡಿಸಿದ್ದ. ತನ್ನೊಂದಿಗೆ 'ಲಿವಿಂಗ್ ಎನ್‌ಲೈಟನ್ಮೆಂಟ್‌' ಎಂಬ ಪುಸ್ತಕವನ್ನು ಕೂಡ ತಂದಿದ್ದ. ಬಳಿಕ ಸಿಐಡಿ ಅಧಿಕಾರಿಗಳು ಪುಸ್ತಕವನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಬಳಿಕವೇ ನಿತ್ಯಾನಂದನ ಪುರುಷತ್ವ ಪರೀಕ್ಷೆಗೆ ಚಾಲನೆ ನೀಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.