ಜಿಲ್ಲಾ ಸುದ್ದಿ

ಫೋರಂ ಮಾಲ್‌ನಲ್ಲಿ 'ಓಣಂ ಫಾರಂ ಫ್ರೆಷ್‌' ಆಚರಣೆ

ಫೋರಂ ಮಾಲ್‌ನಲ್ಲಿ 'ಓಣಂ ಫಾರಂ ಫ್ರೆಷ್‌' ಆಚರಣೆ
Published On :

ಬೆಂಗಳೂರು: ಓಣಂ ಹಬ್ಬದಂದು ಗ್ರೀನ್ ಅಲ್ಯೂರ್(ವೈಟ್ ಫೀಲ್ಡ್‌ನ ಕೃಷಿ ಮಾರುಕಟ್ಟೆ) ಸಹಯೋಗದಲ್ಲಿ ವೈಟ್ ಫೀಲ್ಡ್‌ನ ಫೋರಂ ವ್ಯಾಲ್ಯೂ ಮಾಲ್‌ನಲ್ಲಿ ಕೃಷಿ ಉತ್ಪನ್ನಗಳೊಂದಿಗೆ ಓಣಂ ಅನ್ನು ಸಂಭ್ರಮದಿಂದ ಆಚರಿಸಲಾಯಿತು.

ಫಾರಂ ಫ್ರೆಸ್‌ನ ಈ ಕಲ್ಪನೆ ಅತ್ಯಂತ ಹೊಸದಾಗಿದ್ದು, ಇದು ಗರಿಷ್ಠ ಗುಣಮಟ್ಟದ, ಆರೋಗ್ಯಕರ ಹಾಗೂ ನಗರಕ್ಕೆ ಸೂಕ್ತವಾದ ಸಾಮಾಗ್ರಿಯ ಲಭ್ಯತೆಯನ್ನು ಹೆಚ್ಚಿಸುವ ಗುರಿ ಹೊಂದಿದೆ.

ಭಾನುವಾರ ಇಡೀ ಮಾಲ್ ಕೃಷಿ ಮಾರುಕಟ್ಟೆಯಾಗಿ ಪರಿವರ್ತನೆಯಾಗಿತ್ತು. ಇಲ್ಲಿ ಎಲ್ಲ ರೀತಿಯ ಆಹಾರವೂ ಲಭ್ಯವಿದೆ. ಅಷ್ಟೇ ಅಲ್ಲ ಹೊಸ ರೀತಿಯ ಆಹಾರವೂ ಲಭ್ಯವಿದೆ. ಮುಂದೆ ಹಲವು ಹಬ್ಬಗಳು ಬರಲಿದ್ದು, ವಿವಿಧ ರೀತಿಯ ಆಹಾರ ಉತ್ಪನ್ನಗಳು ನಿಮ್ಮನ್ನು ಆಕರ್ಷಿಸಲಿವೆ.  ಗಾರ್ಡನಿಂಗ್ ಟೂಲ್‌ಗಳು, ಸಂಸ್ಕರಿತ ಆಹಾರಗಳು ಹಾಗೂ ಹಲವು ಕೃಷಿ ಚಟುವಟಿಕೆಯ ಸಲಕರಣೆಗಳೂ ಲಭ್ಯವಿವೆ. ಸಾವಯವ ಸೆಪ್ಟೆಂಬರ್ ಆಚರಣೆಯ ಹಿನ್ನೆಲೆಯಲ್ಲಿ ಸಾವಯವ ರೂಪದಲ್ಲಿ ಬೆಳೆಸಿದ ತರಕಾರಿ ಮತ್ತು ಹಾಲಿಗೆ ಈ ಮಾರುಕಟ್ಟೆಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.