ಜಿಲ್ಲಾ ಸುದ್ದಿ

ಕತ್ತಿ ಪರಪ್ಪನ ಅಗ್ರಹಾರಕ್ಕೆ ಹಾಕಿ

ಕತ್ತಿ ಪರಪ್ಪನ ಅಗ್ರಹಾರಕ್ಕೆ ಹಾಕಿ
Published On :

ಧಾರವಾಡ: ಕರ್ನಾಟಕದಲ್ಲಿ ಕತ್ತಿ ಕಿತಾಪತಿ ನಡೆಯೋದಿಲ್ಲ. ಪ್ರತ್ಯೇಕ ರಾಜ್ಯ ಕುರಿತು ಅವರ ಮಾತಿಗೆ ಯಾರೂ ಗಮನ ನೀಡೋದಿಲ್ಲ ಎಂದು ನಾಡೋಜ ಪಾಟೀಲ ಪುಟ್ಟಪ್ಪ ಹೇಳಿದ್ದಾರೆ.

ತಾವು ಮಂತ್ರಿ ಇದ್ದಾಗ ಬೆಳಗಾವಿಗೆ ಹಾಗೂ ರಾಜ್ಯದ ಜನತೆಗೆ ಏನೂ ಮಾಡದ ಉಮೇಶ ಕತ್ತಿ ಈಗೇಕೆ ಪ್ರತ್ಯೇಕ ರಾಜ್ಯದ ಕೂಗು ಹಾಕುತ್ತಿದ್ದಾರೆ? ಪ್ರತ್ಯೇಕ ರಾಜ್ಯ ಮಾಡಿ ತಾನು ಮುಖ್ಯಮಂತ್ರಿಯಾಗುವ ಹಾಗೂ ತನ್ನ ಮಗನನ್ನು ಮಂತ್ರಿ ಮಾಡಬೇಕೆಂಬ ಕನಸು ಇಟ್ಟುಕೊಂಡಿದ್ದರೆ ಅದು ಅಸಾಧ್ಯ. ಅನೇಕ ಹೋರಾಟಗಳ ಮೂಲಕ ಪಡೆದುಕೊಂಡ ಕರ್ನಾಟಕ ರಾಜ್ಯವನ್ನು ಕಳೆದುಕೊಳ್ಳುವ ಮೂರ್ಖರು ನಾವಲ್ಲ ಎಂದು ಪ್ರತಿಕ್ರಿಯೆ ನೀಡಿದರು.

ಉತ್ತರಕರ್ನಾಟಕ ಇನ್ನೂ ಅಭಿವೃದ್ಧಿ ಆಗಿಲ್ಲವೆಂಬ ಅಳುಕು ನಮಗೂ ಇದೆ. ಅಂದಮಾತ್ರಕ್ಕೆ ಪ್ರತ್ಯೇಕ ರಾಜ್ಯ ಕೇಳಿ, ಈ ಮೂಲಕ ರಾಜ್ಯ ಒಡೆಯುವ ಕೆಲಸ ಮಾಡಬಾರದು. ನಾವೆಲ್ಲ ಒಂದಾಗಿ, ಚೆಂದಾಗಿ ಸಮಗ್ರ ಕರ್ನಾಟಕವನ್ನು ಕಟ್ಟಿ ಈ ಮೂಲಕ ಬಲಿಷ್ಠರಾಗಬೇಕಿದೆ. ಸದ್ಯದಲ್ಲಿಯೇ ಸಿಎಂ ಭೇಟಿ ಮಾಡಿ ಉತ್ತರ ಕರ್ನಾಟಕ ಅಭಿವೃದ್ಧಿ, ಬೇಡಿಕೆಗಳ ಕುರಿತು ಚರ್ಚಿಸಿ ಪ್ರತ್ಯೇಕ ಭಾವನೆ ಬರದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿ ಬರುತ್ತೇನೆ.

ಪ್ರತ್ಯೇಕ ರಾಜ್ಯ ಕುರಿತಂತೆ ಹೇಳಿಕೆ ನೀಡುತ್ತಿರುವ ಮಾಜಿ ಸಚಿವ ಉಮೇಶ ಕತ್ತಿ ಅವರಿಗೆ ತಲೆ ಸರಿ ಇಲ್ಲ.
- ಶಾಮನೂರು ಶಿವಶಂಕರಪ್ಪ, ಸಚಿವ

ವೀರಶೈವ ಮಹಾಸಭಾ ಬೆಂಬಲ
ಧಾರವಾಡ:
ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಹಿನ್ನಡೆಯಾಗಿರುವ ಕಾರಣ ಮಾಜಿ ಸಚಿವ ಉಮೇಶ ಕತ್ತಿ ಅವರು ಪ್ರತ್ಯೇಕ ರಾಜ್ಯ ಕೇಳಿರುವುದು ಸಮಂಜಸ. ಅವರ ಪ್ರತ್ಯೇಕ ಕೂಗಿಗೆ ಅಖಿಲ ಭಾರತ ವೀರಶೈವ ಮಹಾಸಭಾ ಬೆಂಬಲವಿದೆ ಎಂದು ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಗುರುರಾಜ ಹುಣಸೀಮರದ ತಿಳಿಸಿದ್ದಾರೆ.

ಕರ್ನಾಟಕ ಎಂದರೆ ಬರೀ ಬೆಂಗಳೂರು ಹಾಗೂ ಮೈಸೂರಲ್ಲ. ಅಧಿಕಾರಿ ವರ್ಗ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಬಂದು ಕೆಲಸ ಮಾಡಲು ಹಿಂದೇಟು ಹಾಕುತ್ತಾರೆ. ಕೆಪಿಎಸ್‌ಸಿ ಆಯ್ಕೆಯಲ್ಲೂ ಈ ಭಾಗದ ಜನರಿಗೆ ಅನ್ಯಾಯವಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಕತ್ತಿ ನಿಲುವು ಸಮರ್ಥಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.