ಜಿಲ್ಲಾ ಸುದ್ದಿ

ವಾಹನ ಮಾಲೀಕರಿಗೆ ಎಸ್ಸೆಮ್ಮೆಸ್ ಸಂದೇಶ

ವಾಹನ ಮಾಲೀಕರಿಗೆ ಎಸ್ಸೆಮ್ಮೆಸ್ ಸಂದೇಶ
Published On :

ಬೆಂಗಳೂರು: ಸಂಚಾರ ಪೊಲೀಸರು ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವುದು ಸಹಜ. ಆದರೆ, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇಲಾಖೆಯು ಇದೇ ಮೊದಲ ಬಾರಿಗೆ ವಾಹನ ಮಾಲೀಕರಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದೆ. ಅದಕ್ಕಾಗಿ ಎಸ್‌ಎಂಎಸ್ ಸಂದೇಶ ವ್ಯವಸ್ಥೆ ಎಂಬ ಯೋಜನೆಯನ್ನು ಜಾರಿಗೆ ತಂದಿದೆ.

ಶಾಂತಿನಗರದಲ್ಲಿರುವ ಇಲಾಖೆಯ ಮುಖ್ಯಕಚೇರಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಯೋಜನೆಗೆ ಚಾಲನೆ ದೊರೆಯಿತು. ಏಕಕಾಲಕ್ಕೆ ಲಕ್ಷಾಂತರ ವಾಹನ ಮಾಲೀಕರಿಗೆ ಸಂದೇಶ ರವಾನಿಸುವುದು ಇದರ ಮತ್ತೊಂದು ವಿಶೇಷ. ಸಿಇಟಿಯಲ್ಲಿ ಎನ್‌ಐಟಿ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಸಂದೇಶ ರವಾನಿಸಿದಂತೆ ಇಲ್ಲಿಯೂ ರವಾನಿಸಲಾಗುತ್ತದೆ.

ರಸ್ತೆ ಸುರಕ್ಷತೆ, ಶಬ್ದ ಮಾಲಿನ್ಯ, ವಾಯು ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ಸಂದೇಶ ಕಳುಹಿಸಲಾಗುವುದು. ವಾಹನದ ಸ್ಥಿತಿಯನ್ನು ಆಗಿಂದಾಗ್ಗೆ ಪರಿಶೀಲಿಸಿಕೊಳ್ಳುವಂತೆ ಹಾಗೂ ರಸ್ತೆ ಸಂಚಾರಿ ನಿಯಮ ಪಾಲಿಸುವಂತೆ ಈ ಮೂಲಕ ಎಚ್ಚರಿಸಲಾಗುತ್ತದೆ.

ರಾಜ್ಯದಲ್ಲಿ 1.33 ಕೋಟಿ ವಾಹನಗಳಿದ್ದು, ಸದ್ಯ 6 ಲಕ್ಷ ವಾಹನಗಳ ಮಾಲೀಕರ ಮೊಬೈಲ್ ಸಂಖ್ಯೆ ಸಂಗ್ರಹವಾಗಿದ್ದು ಏಕಕಾಲದಲ್ಲಿ ಮಾಹಿತಿ ಕಳುಹಿಸಲಾಗುವುದು. ಹೊಸದಾಗಿ ನೋಂದಣಿಯಾಗುವ ವಾಹನ ಮಾಲೀಕರ ದೂರವಾಣಿ ಸಂಖ್ಯೆಯನ್ನು ಅಧಿಕಾರಿಗಳೇ ತೆಗೆದುಕೊಳ್ಳಲಿದ್ದಾರೆ. ನೋಂದಾಯಿತ ಹಳೆಯ ವಾಹನ ಮಾಲೀಕರು ಆನ್‌ಲೈನ್(http://rto.kar.nic.inಅಥವಾ  http://karnatakapuc.in)ನಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಡಾ. ರಾಮೇಗೌಡ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.