ಜಿಲ್ಲಾ ಸುದ್ದಿ

ನೆರೆ ಪರಿಹಾರ:10 ಸಾವಿರ ಸುಳ್ಳು ಅರ್ಜಿ!

ನೆರೆ ಪರಿಹಾರ:10 ಸಾವಿರ ಸುಳ್ಳು ಅರ್ಜಿ!
Published On :

ಕೊಪ್ಪಳ: ನೆರೆ ಪರಿಹಾರದಲ್ಲೂ ಭಾರಿ ಗೋಲ್‌ಮಾಲ್! ತುರ್ತಾಗಿ ಪರಿಹಾರ ನೀಡುವಂತೆ ಸರ್ಕಾರ ಆದೇಶ ಮಾಡಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ಜಿಲ್ಲೆಯ ಮಧ್ಯವರ್ತಿಗಳು ರೈತರ ಹೆಸರಲ್ಲಿ ಲೂಟಿಗೆ ಮುಂದಾಗಿದ್ದಾರೆ. ಅದನ್ನು ಪತ್ತೆ ಮಾಡಿ ಇಬ್ಬರು ಆರೋಪಿಗಳನ್ನು ಶುಕ್ರವಾರ ಬಂಧಿಸಲಾಗಿದೆ.

ಹಣ ಲಪಟಾಯಿಸುವ ಹಾಗೂ ಇತ್ತ ಅಧಿಕಾರಿಗಳ ದಾರಿ ತಪ್ಪಿಸಿ ಪರಿಹಾರ ಪಡೆಯುವ ಕೃತ್ಯದಲ್ಲಿ ಜಿಲ್ಲೆಯಾದ್ಯಂತ ಅನೇಕ ಮಧ್ಯವರ್ತಿಗಳು ತೊಡಗಿದ್ದಾರೆ. ಇದನ್ನು ಭೇದಿಸಿದ ಉಪವಿಭಾಗಗಾಧಿಕಾರಿ ಪಿ.ಎಸ್ ಮಂಜುನಾಥ ಯಲಬುರ್ಗಾದಲ್ಲಿ ಅಕ್ರಮದಲ್ಲಿ ತೊಡಗಿದ್ದ ಮಧ್ಯವರ್ತಿಗಳನ್ನು ಪತ್ತೆ ಹಚ್ಚಿದ್ದಾರೆ. ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಮುತ್ತಪ್ಪ, ಹರಿರಾವ್ ಎಂಬ ಇಬ್ಬರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಏನೇನು ಅಕ್ರಮ?: ಜಿಲ್ಲೆಯಾದ್ಯಂತ ಈ ತನಕ ನೆರೆ ಪರಿಹಾರಕ್ಕಾಗಿ ಆರಂಭದಲ್ಲಿ ಸುಮಾರು 200 ಅರ್ಜಿಗಳು ಬಂದಿದ್ದವು. ತುರ್ತಾಗಿ ಪರಿಹಾರ ನೀಡುವಂತೆ ಸಚಿವರು ಆದೇಶ ಮಾಡುತ್ತಿದ್ದಂತೆ ತಹಸೀಲ್ದಾರ್ ಕಚೇರಿಯಲ್ಲಿ ಅರ್ಜಿಗಳ ರಾಶಿಯೇ ಬೀಳಲಾರಂಭಿಸಿತು. ಈವರೆಗೆ 12-13 ಸಾವಿರ ಅರ್ಜಿಗಳು ಬಂದಿವೆ.

ಪ್ರತಿ ತಾಲೂಕಿನಲ್ಲಿ 10 ಸಾವಿರಕ್ಕೂ ಅಧಿಕ ಅರ್ಜಿಗಳು ಸುಳ್ಳು ಮಾಹಿತಿಯೊಂದಿಗೆ ಕೂಡಿವೆ. ಇದರಿಂದ ತಬ್ಬಿಬ್ಬಾದ ಅಧಿಕಾರಿಗಳು ವಾಸ್ತವ ತಿಳಿಯಲು ಹೊಲಗಳಿಗೆ ಭೇಟಿ ನೀಡಿದರೆ, ಅಲ್ಲಿ ಬೆಳೆಹಾನಿಯೇ ಆಗಿಲ್ಲ ಎಂಬುದು ಗಮನಕ್ಕೆ ಬಂತು. ಇನ್ನೂ ಕೆಲವರು ಹೊಲಗಳಲ್ಲಿ ಬೆಳೆ ಬೆಳೆಯದಿದ್ದರೂ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.