ಜಿಲ್ಲಾ ಸುದ್ದಿ

ಇನ್ನೆಷ್ಟು ದಿನ ವೇಶ್ಯೆ ಆಗಿರ್ಬೇಕು?

ಇನ್ನೆಷ್ಟು ದಿನ ವೇಶ್ಯೆ ಆಗಿರ್ಬೇಕು?
Published On :

ಬೆಂಗಳೂರು: ವೇಶ್ಯಾವೃತ್ತಿಗೆ ಮಾನ್ಯತೆ ನೀಡಿ ಎಂದು ಬೆಂಬಲಿಸುತ್ತಿರುವವರು ಮೊದಲು ಆ ಸ್ಥಾನದಲ್ಲಿ ತಮ್ಮ ಮಗಳು, ಪತ್ನಿ ಹಾಗೂ ಅಕ್ಕ-ತಂಗಿಯರನ್ನು ಕಲ್ಪಿಸಿಕೊಳ್ಳಲಿ. ವೇಶ್ಯಾ ವೃತ್ತಿಯನ್ನು ಕಾನೂನು ಬದ್ಧ ಮಾಡಿದ್ದಲ್ಲಿ ಬೀದಿಗೊಂದು ಸರಾಯಿ ಅಂಗಡಿ ತೆರೆಯಲು ಅನುಮತಿ ನೀಡಿದಂತೆ. ಕದ್ದುಮುಚ್ಚಿ ಮಾಡುತ್ತಿದ್ದ ಅನೈತಿಕ ಚಟುವಟಿಕೆಯನ್ನು ಕಾನೂನಿ ಚೌಕಟ್ಟಿಗೆ ಒಳಪಡಿಸುವುದು ಎಷ್ಟು ಸರಿ? ಎಷ್ಟು ದಿನ ಮಹಿಳೆಯನ್ನು ವೇಶ್ಯೆಯಾಗಿ ನೋಡಲಿಚ್ಛಿಸುತ್ತೀರಿ ಎಂದು ಮಹಿಳಾ ಆಯೋಗ ಅಧ್ಯಕ್ಷೆ ಮಂಜುಳಾ ಮಾನಸ ತರಾಟೆಗೆ ತೆಗೆದುಕೊಂಡರು.

ಸೋಮವಾರ ಸ್ವಾಭಿಮಾನಿ ಕರ್ನಾಟಕ ವೇದಿಕೆ ಮತ್ತು ಕರ್ನಾಟಕ ಲೇಖಕಿಯರ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಮಹಿಳೆಯರ ಮೇಲೆ ದೌರ್ಜನ್ಯ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಕಾನೂನಿಗೆ ವಿರೋಧ: ವೇಶ್ಯಾವಾಟಿಕೆ ಕಾನೂನು ಬದ್ಧಗೊಳಿಸುವುದನ್ನು ಆಯೋಗ ವಿರೋಧಿಸುತ್ತದೆ. ವೇಶ್ಯಾವಾಟಿಕೆಗೆ ಮಾನ್ಯತೆ ನೀಡುವ ನಿಟ್ಟಿನಲ್ಲಿ ಪರಿಶೀಲಿಸಲು ಸಮಿತಿ ರಚಿಸಲು ಮುಂದಾಗಿರುವುದು ಸರ್ಕಾರಕ್ಕೆ ಬಿಟ್ಟ ವಿಚಾರ ಎಂದರು. ಹಿರಿಯ ಸಾಹಿತಿ ಡಾ.ಕೆ ಮರಳಸಿದ್ದಪ್ಪ ಮಾತನಾಡಿ, ಬ್ಯಾಕ್‌ಲಾಗ್ ಹುದ್ದೆಗಳನ್ನು ತುಂಬಿಸುವ ಮಾದರಿಯಲ್ಲಿ ಮೊದಲು ಪೊಲೀಸ್ ಇಲಾಖೆಯಲ್ಲಿ 1/3 ಮಹಿಳೆಯರು ನೇಮಕಗೊಳ್ಳಬೇಕು. ಕೂಲಿ, ಗಾರ್ಮೆಂಟ್ ಮತ್ತು ಕಟ್ಟಡ ನಿರ್ಮಾಣದಲ್ಲಿರುವ ಮಹಿಳೆಯರ ಸಮೀಕ್ಷೆ ನಡೆಸಿ ಅವರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದರು. ಆಪ್ ಪಕ್ಷದ ಮುಖಂಡ ರವಿಕೃಷ್ಣಾರೆಡ್ಡಿ, ಲೇಖಕಿ ಬಿ.ನಾರಾಯಣಮ್ಮ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.